ಭಿಕ್ಷಾಟನೆ ಮಾಡಿದರೂ ಬಿಡದೇ ಯುವಕನ ಮರ್ಮಾಂಗ ಕತ್ತರಿಸಿದ 5 ತೃತೀಯ ಲಿಂಗಿಗಳು, ಆಗಿದ್ದೇನು?
ಬೆಂಗಳೂರು, ಆಗಸ್ಟ್ 21: ರೈಲುಗಳಲ್ಲಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಸಿಗ್ನಲ್ ಹೀಗೆ ಅಲ್ಲಲ್ಲಿ ಕಂಡು ಬರುವ ತೃತೀಯ ಲಿಂಗಿಗಳ ಪೈಕಿ ಕೆಲವರು ಪುರಷರ ಜೊತೆಗೆ ಅನುಚಿತವಾಗಿ ವರ್ತಿಸುತ್ತಾರೆ. ತಮ್ಮೊಂದಿಗೆ ಸಹಕರಿಸಬೇಕು, ಇಲ್ಲವಾದರೆ ದುಡ್ಡು ಕೊಡುವಂತೆ ಪೀಡಿಸಿದ ಘಟನೆಗಳನ್ನು ಕಾಣಬಹುದಾಗಿದೆ. ಆದರೆ ಇಲ್ಲೊಂದು ಘಟನೆಯನ್ನು ಇದೇ ತೃತೀಯ ಲಿಂಗಿಗಳು ಮೃಘೀಯವಾಗಿ ವರ್ತಿಸುವ ಮೂಲಕ ಯುವಕನೊಬ್ಬನ ಜೀವನವನ್ನೇ ಸರ್ವನಾಶ ಮಾಡಿ ಪೊಲೀಸರ ಅತಿಥಿಗಳಾಗಿದ್ದಾರೆ.
ಹೌದು, ತಮ್ಮಂತೆ ತೃತಿಯ ಲಿಂಗಿ ಆಗಲು ಒಪ್ಪದ ಯುವಕನನ್ನು ಬಲವಂತದಿಂದ ಪ್ರಜ್ಞೆ ತಪ್ಪಿಸಿ ಆತನ ಮರ್ಮಾಂಗ ಕತ್ತರಿಸಿದ್ದಾರೆ. ಅಲ್ಲದೇ ಕೆಲವು ದಿನಗಳ ಕಾಲ ಆತನನ್ನು ಕೂಡಿ ಹಾಕಿ ದೌರ್ಜನ್ಯ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಲಾಗಿದ್ದು, ನಿನ್ನ ಬಿಡಬೇಕಾದರೆ 05 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದೆಲ್ಲದ್ದರಿಂದ ಬೇಸತ್ತ ಯುವ ಅವರಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಮರ್ಮಾಂಗ ಕಡಿತಕ್ಕೆ ಒಳಗಾದ ಯುವಕ ನೀಡಿದ ದೂರಿನ ಆಧಾರದಲ್ಲಿ ಬೆಂಗಳೂರಿನ ಪುಲಕೇಶಿನಗರದ ಪೊಲೀಸ್ ಠಾಣೆ ಪೊಲೀಸರು ತೃತೀಯ ಲಿಂಗಿಗಳಾದ ಮುಗಿಲ, ಚಿತ್ರಾ, ಅಶ್ವಿನಿ, ಕಾಜಲ್ ಹಾಗೂ ಪ್ರೀತಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತ (18 ವರ್ಷ ವಯಸ್ಸು) ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಹಿನ್ನೆಲೆಯೇನು?
ನಗರದ ಅಂಬೇಡ್ಕರ್ ಕಾಲೇಜಿನ ಸಮೀಪ ಟೀ ಅಂಗಡಿಯಲ್ಲಿ ಈ ಸಂತ್ರಸ್ತ ಯುವಕ ಕೆಲವು ವರ್ಷಗಳಿಂದಲೂ ಕೆಲಸ ಮಾಡಿಕೊಂಡಿದ್ದ. ಅಲ್ಲಿಗೆ ಟೀ ಕುಡಿಯಲು ಬರುತ್ತಿದ್ದ ಈ ಆರೋಪಿ ತೃತೀಯ ಲಿಂಗಿಗಳು ಆತನನ್ನು ಪರಿಚಯ ಮಾಡಿಕೊಂಡಿದ್ದಾರೆ. ನಂತರ ಆತನಿಗೆ ನೀನು ನಮ್ಮೊಂದಿಗೆ ಬಂದರೆ ಉತ್ತಮ ಮನೆ, ಒಳ್ಳೆ ಜೀವನ ನಡೆಸಬಹುದು ಎಂದು ಕೇಳಿದ್ದಾರೆ. ಆದರೆ ಆತ ಬರಲು ಒಪ್ಪಿಲ್ಲ.

ಮಾತಿಗೆ ಒಪ್ಪದ ಯುವಕನ ಪ್ರಜ್ಞೆ ತಪ್ಪಿಸಿ ಕೃತ್ಯ
ನಂತರ ನೀನು ನಮ್ಮೊಂದಿಗೆ ಬಾರದಿದ್ದರೆ ನಿಮ್ಮ ಮನೆಯವರನ್ನು ಕೊಲ್ಲುವುದಾಗಿ ಅವರು ಬೆದರಿಸಿದ್ದಾರೆ. ಬೆದರಿಸಿ ಆತನನ್ನು ಭೀಕ್ಷಾಟನೆಗೆ ತಳ್ಳಿ ಸುಮಾರು ಮೂರು ವರ್ಷ ಆತನಿಂದ ಹಣ ಸಂಪಾದಿಸಿದ್ದಾರೆ. ಇದೀಗ ಘಟನೆ ನಡೆದ ಜುಲೈ 17ರಂದು ಮತ್ತೆ ಆತನಿಗೆ ನೀನು ನಮ್ಮಂತೆ ಆಗಬೇಕು. ನೀನು ಗಂಡಸಾಗಿದ್ದಾಗಲೇ ನಿತ್ಯ 2000 ಸಂಪಾದಿಸಿದ್ದೀಯ. ಇನ್ನೂ ನಮ್ಮಂತಾದರೆ ಹೆಚ್ಚು ಸಂಪಾದಿಸಬಹುದು ಎಂದಿದ್ದಾರೆ.
ಅವರ ಮಾತಿಗೆ ಯುವಕ ಒಪ್ಪದಿದ್ದಾಗ ಗಾಂಜಾ, ಸರಾಯಿ ನಶೆಯಲ್ಲಿದ್ದ ಈ ಐವರು ಆರೋಪಿಗಳು ಆತನನ್ನು ಬಲವಂತವಾಗಿ ಟ್ಯಾನರಿ ರಸ್ತೆಯ ಮನೆಯೊಂದಕ್ಕೆ ಕರೆದುಕೊಂಡು ಹೋಗಿ, ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಆತನ ಮರ್ಮಾಂಗವನ್ನು ಕತ್ತರಿಸಿದ್ದಾರೆ.
ಮರ್ಮಾಂಗ ಕತ್ತರಿಸಿ 5 ಲಕ್ಷ ಹಣಕ್ಕೆ ಬೇಡಿಕೆ
ಯುವಕ ಎಚ್ಚರಗೊಂಡಾಗ ಆತನಿಗೆ ನೋವು ಕಾಣಿಸಿಕೊಂಡಿದ್ದು, ಮರ್ಮಾಂಗ ಕತ್ತರಿಸಿ ಪೈಪ್ ಅಳವಡಿಸಿರುವುದು ಗೊತ್ತಾಗಿದೆ. ಈ ವೇಳೆ ಆತನ ನರಳಾಡಿದ್ದಾನೆ. ಪರಿ ಪರಿಯಾಗಿ ಬೇಡಿಕೊಂಡರು ಆತನನ್ನು ಬಿಡದೇ ಕೆಲವು ದಿನಗಳ ಕಾಲ ಕೂಡಿ ಹಾಕಿದ್ದಾರೆ. ನಿನ್ನ ಬಿಡಲು ಹಣ ನೀಡುವಂತೆ 5 ಲಕ್ಷ ಹಣಕ್ಕೆ ಬೇಡಿ ಇಟ್ಟಿದ್ದಾರೆ. ಇವರ ಒತ್ತಡ ತಾಳಲಾರದೇ ಯುವಕ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾನೆ. ಸದ್ಯ ಪ್ರಕರಣ ಬಯಲಾಗಿದ್ದು, ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications