ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಗಣಿ ಸುತ್ತಮುತ್ತಲ ಪ್ರದೇಶಗಳಲ್ಲಿ 5 ದಿನ ವಿದ್ಯುತ್ ವ್ಯತ್ಯಯ

|
Google Oneindia Kannada News

ಬೆಂಗಳೂರು, ಜನವರಿ 26: ಜಿಗಣಿ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ವಿತರಣಾ ಜಾಲ ಬಲಪಡಿಲು ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಜ.27 ರಿಂದ 31 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ.

ಜಿಗಣಿಯ 220/66/11 ಕೆವಿ ವಿದ್ಯುತ್ ವಿತರಣೆ ಕೇಂದ್ರವನ್ನು ಪುನಶ್ಚೇತನಗೊಳಿಸಲು 220 ಕೆವಿ ಸಾಮರ್ಥ್ಯದ ಮಾರ್ಗವನ್ನು ಬೊಮ್ಮಸಂದ್ರ-ಜಿಗಣಿ ಲಿಂಕ್ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಜತೆಗೆ ಸೋಮನಹಳ್ಳಿ-ಯಾರಂಡಹಳ್ಳಿ 220 ಕೆವಿ ಮಾರ್ಗದ ವಿದ್ಯುತ್ ಸ್ಥಗಿತಗೊಳಿಸುವುದು ಅಗತ್ಯವಾಗಿದೆ.

Five days Power supply interruption in Jigani area

ಇದರ ಕಾಮಗಾರಿಯನ್ನು ಐದೂ ದಿನವೂ ಬೆ.6 ರಿಂದ ಸಂಜೆಯವರೆಗೆ ಕೈಗೊಳ್ಳಲು ಕೆಪಿಟಿಸಿಎಲ್ ಮುಂದಾಗಿದೆ. ಇದರಿಂದಾಗಿ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ತಿಳಿಸಿದೆ. ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು: ಅತ್ತಿಬೆಲೆ ಉಪ ಕೇಂದ್ರ-ಯಡವನಹಳ್ಳಿ, ಬಳಗಾರನಹಳ್ಳಿ, ಇಚ್ಚಂಗೂರು, ಅತ್ತಿಬೆಲೆ, ಬಳ್ಳೂರು, ಚಿಕ್ಕನಹಳ್ಳಿ ಸುತ್ತಲಿನ ಪ್ರದೇಶ. ಆನೇಕಲ್ ಉಪ ಕೇಂದ್ರ ವಣಕನಹಳ್ಳಿ, ಸುಮಂಧೂರು , ಬ್ಯಾಗಡದೇನಹಳ್ಳಿ, ಆನೇಕಲ್ ಪಟ್ಟಣ ಹಾಗೂ ಸುತ್ತಲಿನ ಪ್ರದೇಶ. ಬೊಮ್ಮಸಂದ್ರ ಉಪ ಕೇಂದ್ರ -ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ 1,4 ನೇ ಹಂತ, ಕೆಎಸ್ ಎಸ್ ಐಡಿಸಿ ಘಟ್ಟ 1,2ಸುತ್ತಲಿನ ಪ್ರದೇಶ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ 1,2,3 ನೇ ಹಂತ, ಆರ್.ಕೆ. ಟೌನ್ ಶಿಪ್, ಬೊಮ್ಮಸಂದ್ರ, ಶ್ರೀರಾಂಪುರ, ಜಿಗಣಿ ಕೈಗಾರಿಕಾ ಪ್ರದೇಶ, ಹುಲಿಮಂಗಲ, ಜಿಗಣಿ, ದೇವಸಂದ್ರ, ಕುಂಬಾರನಹಳ್ಳಿ, ನಂದನವನ, ಹರಪ್ಪನಹಳ್ಳಿ, ರಾಗಿಹಳ್ಳಿ, ಶಾನುಭೋಗನಹಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

English summary
As KPTCL is taking out strengthening work of 220kv stations at Jigani and Bommasandra, there will be power supply interruption in Jigani and surrounding areas in Bengaluru from January 27 to 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X