ಬೆಂಗಳೂರಿಗೆ 5 ಮಂದಿ ಹೊಸ ಪೊಲೀಸ್ ಕಮಿಷನರ್ ನೇಮಕ
ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರಿಗೆ ಇಂದು ಐದು ಮಂದಿ ಹೊಸ ಪೊಲೀಸ್ ಆಯುಕ್ತರ ನೇಮಕವಾಗಿದೆ. ಹಾಗಾದರೆ ಅವರು ಯಾರು ಅಂತೀರಾ.. ಅವರೇ ಪುಟ್ಟ ಮಕ್ಕಳು..ಮಕ್ಕಳು ಹೇಹೆ ಪೊಲೀಸ್ ಆಯುಕ್ತರಾಗ್ತಾರೆ ಎಂದು ತಿಳಿಯಲು ಸುದ್ದಿ ಓದಿ..
ಒಂದೇ ಬಾರಿಗೆ ಅಷ್ಟೂ ಪೊಲೀಸ್ ಆಯುಕ್ತರು ಅಧಿಕಾರ ಚಲಾವಣೆ ಮಾಡಲಿದ್ದಾರೆ. ಆದರೆ ಈ ಬಾರಿ ಕಮಿಷನರ್ ನೇಮಕ ಮಾಡುತ್ತಿರುವುದು ಸರ್ಕಾರ ಅಲ್ಲ, ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು.
ಗಂಭೀರ ಖಾಯಿಲೆಯಿಂದ ಬಳಲುತ್ತಿರುವ 5ಮಕ್ಕಳ ಕನಸು ಈಡೇರಿಸಲು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುಂದಾಗಿದ್ದಾರೆ. ಹೀಗಾಗಿ ಆ 5 ಜನ ಮಕ್ಕಳು ಒಂದು ದಿನದ ಮಟ್ಟಿಗೆ ನಗರ ಪೊಲೀಸ್ ಆಯುಕ್ತರಾಗಲಿದ್ದಾರೆ.

ಈ ಐದು 5 ಮುಗ್ಧ ಮಕ್ಕಳು ಪೊಲೀಸ್ ಅಧಿಕಾರಿಯಾಗಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದರು. ಆದರೆ ಅವರಿಗಿರುವ ಕಾಯಿಲೆಯು ಆ ಮಕ್ಕಳಿಗ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಬಿಡುವುದಿಲ್ಲ. ಹೀಗಾಗಿ ವಿಚಿತ್ರ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಕನಸನ್ನು ನನಸು ಮಾಡಲು ನಗರ ಪೊಲೀಸ್ ಆಯುಕ್ತರು ಒಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
'ಮೇಕ್ ಎ ವಿಷ್ ಫೌಂಡೇಶನ್' ಹೀಗೆ ಸಾವಿರಾರು ಮಕ್ಕಳ ಆಸೆಯನ್ನು ಈಡೇರಿಸುವ ದಾರಿಯಲ್ಲಿ ಸಾಗುತ್ತಿದ್ದಾರೆ. ಇವರ ಆಸೆಗೆ ಪೊಲೀಸ್ ಆಯುಕ್ತರು ಸಮ್ಮತಿ ಸೂಚಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 5 ಮಕ್ಕಳಿಗೆ ಪೊಲೀಸ್ ಸಿಬ್ಬಂದಿ ಪೊಲೀಸ್ ಗೌರವ ವಂದನೆ ನೀಡಿದ್ದಾರೆ.
ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ 5 ಮಕ್ಕಳಿಗೆ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಲು ಸಮಯಾವಕಾಶ ನೀಡಿದ್ದಾರೆ. ಭಾಸ್ಕರ್ ರಾವ್ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಬಳಿಕ ಆ ಮಕ್ಕಳನ್ನು ತಮ್ಮ ಅಧಿಕೃತ ಸ್ಥಾನದಲ್ಲಿ ಕೂರಿಸಿ ಕರ್ತವ್ಯ ನಿರ್ವಹಿಸಲು ಸಲಹೆ ನೀಡಲಿದ್ದಾರೆ.
-ರುತನ್ ಕುಮಾರ್- 8 ವರ್ಷ ಹಾಸನ ಕಿಡ್ನಿ ಫೇಲ್, ಒಂದು ಕಿಡ್ನಿ 30% ಕಾರ್ಯಾಚರಣೆ.
-ಮೊಹಮ್ಮದ್ ಸಾಹೀಬ್- 11 ವರ್ಷ ಬ್ಲಡ್ ಕ್ಯಾನ್ಸರ್, 6ನೇ ತರಗತಿ ಬಿಜಾಪುರ.
-ಅರ್ಪದ್ ಪಾಷಾ, 8 ವರ್ಷ ಸಿಕಲ್ಸ್ ಸಮಸ್ಯೆ, 3ನೇ ತರಗತಿ ನೀಲಸಂದ್ರ ಬೆಂಗಳೂರು.
- ಶ್ರಾವಣಿ ಬಟಲಾ, 8 ವರ್ಷ, 1ನೇ ತರಗತಿ, ತಲಸ್ಮೀಯಾ ಕಾಯಿಲೆ ಅನಂತಪುರ ಆಂಧ್ರಪ್ರದೇಶ.
-ಸೈಯದ್ ಇಮಾನ್, 4 ವರ್ಷ ಬಿಪಿ ಮತ್ತು ಕಿಡ್ನಿ ಸೊಂಕು ಕಾಯಿಲೆ ಬೆಂಗಳೂರು.












Click it and Unblock the Notifications