ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕೆರೆಗಳತ್ತ ವಲಸೆ ಬರುವ ಪಕ್ಷಿಗಳಿಗೆ ತೊಂದರೆ, ಮೀನುಗಾರಿಕೆ ನಿಷೇಧಕ್ಕೆ ಕೆರೆ ಕಾರ್ಯಕರ್ತರ ಆಗ್ರಹ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆರೆಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಕೆರೆಗಳಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

|
Google Oneindia Kannada News

ಬೆಂಗಳೂರು, ಫೆಬ್ರುವರಿ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆರೆಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಕೆರೆಗಳಲ್ಲಿ ಮೀನು (ಮೀನುಗಾರಿಕೆ) ಹಿಡಿಯುವುದನ್ನು ನಿಷೇಧಿಸಬೇಕು. ಪರಿಸರ, ಜೀವ ವೈವಿಧ್ಯತೆಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ನಗರದ ಕೆರೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಕೆರೆಗಳ ದಡದಲ್ಲಿರುವ ಮರಗಲ್ಲಿ ವಲಸೆ ಬರುವ ಹಕ್ಕಿಗಳು ವಾಸಿಸುತ್ತವೆ. ಇಂತಹ ಜಲಮೂಗಳಲ್ಲಿ ಮೀನುಗಾರಿಕೆಯಿಂದ ಹಕ್ಕಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಈಗಾಗಲೇ ಬೆಂಗಳೂರಿನ ಕೆರೆಗಳಿಗೆ ಬರುವ ಹಕ್ಕಿಗಳ ಸಂಖ್ಯೆ ಕ್ಷೀಣಿಸಿದೆ. ಮೀನುಗಾರರು ಪಕ್ಷಿಗಳ ಗೂಡು ಕಟ್ಟಲು ನೆರವಾಗುವ ಕಳೆಗಳನ್ನು ತೆಗೆದುಹಾಕುತ್ತಾರೆ. ಇದರಿಂದ ಹಕ್ಕಿಗಳ ವಾಸಸ್ಥಾನಕ್ಕೆ ತೊಂದರೆಯಾಗುತ್ತದೆ. ಕೆರೆ ದಂಡೆಯಲ್ಲಿ ಮೀನುಗಾರರ ಪದೇ ಪದೆ ಓಡಾಟವು ಪಕ್ಷಿಗಳು ನೆಲೆಸುವುದರ ಮೇಲೂ ಪರಿಣಾಮ ಬೀರುತ್ತದೆ ಎಂದು ದೊಡ್ಡಕಲ್ಲಸಂದ್ರ ಕೆರೆ ಸಮಿತಿಯ ಸದಸ್ಯ ಸೌಂದರರಾಜನ್ ರಾಜಗೋಪಾಲನ್ ತಿಳಿಸಿದರು.

ಬೆಂಗಳೂರು: 121ಟನ್ ಇಂಗಾಲ ಸಂಗ್ರಹಿಸುವ ಮರಗಳಿಗೆ ಕುತ್ತು: ವರದಿಬೆಂಗಳೂರು: 121ಟನ್ ಇಂಗಾಲ ಸಂಗ್ರಹಿಸುವ ಮರಗಳಿಗೆ ಕುತ್ತು: ವರದಿ

ಸರ್ಕಾರೇತ ಸಂಸ್ಥೆಯಾದ ಆಕ್ಷನ್ ಏಡ್ ಸಂಸ್ಥೆಯ ಸದಸ್ಯ ರಾಘವೇಂದ್ರ ಅವರು, ಮೀನುಗಾರರು ಮೀನು ಹಿಡಿಯುವಾಗಿ ನೀರಿನ ಸ್ವಚ್ಛತೆಗಾಗಿ ಒಂದಷ್ಟು ವಿಧಾನಗಳನ್ನು ಬಳಸುತ್ತಾರೆ. ಪಟಾಕಿ ಸಿಡಿಸುವುದು ಸೇರಿದಂತೆ ಮುಂತಾದ ವಿಧಾನಗಳಿಂದ ಪಕ್ಷಗಳು ಹೆದರುತ್ತವೆ. ಒಂದು ವೇಳೆ ಮೀನಿಗಾಗಿ ಎಸೆದ ಬಲೆಗಳಲ್ಲಿ ಪಕ್ಷಿಗಳು ಸಿಕ್ಕಿಬಿದ್ದು ಮೃತಪಡುವ ಸಾಧ್ಯತೆಗಳು ಹೆಚ್ಚಿರುತ್ತವೆ ಅವರು ಹೇಳಿದರು.

Fishing should be banned in Bengaluru city lakes and should protect biodiversity, Lake activists urge,

ನಗರದ ಯಲಹಂಕದಲ್ಲಿರುವ ಪುಟ್ಟೇನಹಳ್ಳಿ ಕೆರೆಯಲ್ಲಿ ಸುಮಾರು 130ಕ್ಕೂ ಅಧಿಕ ಜಾತಿಯ ಪಕ್ಷಿಗಳು ಬರುತ್ತವೆ. ಆದರೆ ಜೆಪಿ ನಗರದ ಪುಟ್ಟೇನಕೆರೆಯು ಕನಿಷ್ಠ 120 ವಿವಿಧ ಜಾತಿಗಳ ಪಕ್ಷಗಳನ್ನು ತನ್ನ ಆಕರ್ಷಿಸುತ್ತದೆ. ಇಂತಹ ಪ್ರಕೃತಿದತ್ತ ಸೌಂದರ್ಯಕ್ಕೆ ತೊಂದರೆ ಉಂಟಾಗುವ ಯಾವ ಕೆಲಸವಾಗಬಾರದು ಎಂದು ಆ ಕೆರೆಗಳಿಗೆ ನಿತ್ಯ ಭೇಟಿ ಕೊಡುವ ರಾಜಗೋಪಾಲನ್ ಎಂಬುವವರು ತಿಳಿಸಿದರು.

ಜೀವ ವೈವಿಧ್ಯತೆಗೆ ಹಾನಿಯಾಗಬಾರದು

ಬೆಂಗಳೂರು ಕೆರೆಗಳ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮೀನುಗಾರಿಕೆ ಹಾಗೂ ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುವಂತೆ ಕೆರೆ ಕಾರ್ಯಕರ್ತರು ಅಧಿಕಾರಿಗಳಿಗೆ ಮನವಿ ಮಾಡಿದರು.

ಮೀನುಗಾರಿಕೆಯನ್ನೇ ನಂಬಿಕೊಂಡು ಸಾಕಷ್ಟು ಜನರಿದ್ದಾರೆ ಎಂಬ ಅರಿವು ನಮಗಿದೆ. ಅವರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಮೀನುಗಾರಿಕೆಯಿಂದ ಜೀವ ವೈವಿಧ್ಯತೆಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು. 15 ಹೆಕ್ಟೇರ್‌ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಬಹುದು ಎಂದು ಕೆರೆ ಕಾರ್ಯಕರ್ತರು ಸಲಹೆ ನೀಡಿದರು.

English summary
Fishing should be banned in Bengaluru city lakes and should protect biodiversity, Lake activists urge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X