ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BMTC ಇ-ಬಸ್‌ ಓಡಿಸಲಿರುವ ಪ್ರಥಮ ಮಹಿಳಾ ಚಾಲಕಿ, ಯಾವಾಗ? ಇಲ್ಲಿದೆ ಮಾಹಿತಿ

|
Google Oneindia Kannada News

ಬೆಂಗಳೂರು, ಜನವರಿ 20: ಪುರುಷರಂತೆ ಎಲ್ಲ ಕ್ಷೇತ್ರಗಳಲ್ಲಿ ತೊಡಗಿರುವ ಮಹಿಳೆಯರು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇದೀಗ ಮೊದಲ ಭಾರಿಗೆ ಸರ್ಕಾರಿ ಇ ಬಸ್‌ಗಳ ಚಾಲನೆ ಮಾಡಲು ಮಹಿಳೆಯೊಬ್ಬರು ಸಜ್ಜಾಗುತ್ತಿದ್ದಾರೆ.

ಹೌದು, ಮಹಿಳೆಯರು ಇನ್ನುಮುಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಇ ಬಸ್‌ಗಳನ್ನು ಓಡಿಸಲು ತಯಾರಿ ನಡೆಸಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರು ಮಹಾನಗರಾದ್ಯಂತ ಮಹಿಳೆಯರೇ ಬಿಎಂಟಿಸಿ ಇ ಬಸ್‌ಗಳನ್ನು ಚಲಾಯಿಸಲಿದ್ದು, ಇದರ ಭಾಗವಾಗಿ ಫೆಬ್ರುವರಿ ತಿಂಗಳಲ್ಲಿ ಮೊದಲ ಇ ಬಸ್ ಮಹಿಳಾ ಚಾಲಕಿ ಬೆಂಗಳೂರಿನ ರಸ್ತೆಗೆ ಇಳಿಯಲಿದ್ದಾರೆ.

32 ವರ್ಷ ಮಹಿಳೆಯೊಬ್ಬರು ಬಿಎಂಟಿಸಿ ಇ ಬಸ್ ಚಾಲನೆಗೆ ತರಬೇತಿ ಪಡೆಯುತ್ತಿದ್ದಾರೆ. ಅವರಿಗೆ ಬಿಎಂಟಿಸಿ ಸಂಸ್ಥೆ ಮುಂದಿನ ಫೆಬ್ರುವರಿ ತಿಂಗಳಲ್ಲಿ ಇ ಬಸ್ ಚಾಲನೆಗೆ ಮುಕ್ತ ಅವಕಾಶ ನೀಡುವ ಸಾಧ್ಯತೆ ಇದೆ. ನಗರದ ಪ್ರಯಾಣಿಕರಿಗೆ ಇಂಧನ ಸಹಿತ ಬಸ್ ವ್ಯವಸ್ಥೆ ಹೊಂದಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಂತರ ಇ ಬಸ್ ಹೊಂದುವಂತಾಯಿತು. ಇದೀಗ ಮೊದಲ ಮಹಿಳಾ ಇ ಬಸ್‌ ಚಾಲಕಿ ಹೊಂದಿದ ಏಕೈಕ ನಿಗಮವಾಗಿ ಹೊರ ಹೊಮ್ಮಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

Bengaluru’s first woman e-bus driver to hit the road in February 2023

ಚಾಲನಾ ತರಬೇತಿ ವಿಡಿಯೋದಲ್ಲಿ ಏನಿದೆ?

ಈ ಕುರಿತ ವಿಡಿಯೋವೊಂದು ಟ್ವೀಟ್ ಮಾಡಲಾಗಿದೆ. ಅದರಲ್ಲಿ ನೀಲಿ ವರ್ಣದ ಬಿಎಂಟಿಸಿ ಇ-ಬಸ್‌ ನಲ್ಲಿ ಈ 32 ವರ್ಷ ಮಹಿಳೆಗೆ ಚಾಲಕರೊಬ್ಬರು ಚಾಲನಾ ತರಬೇತಿ ನೀಡುತ್ತಿದ್ದಾರೆ. ಬಸ್ ಆನ್‌ ಆಂಡ್ ಆಪ್, ಸ್ಕೇರಿಂಗ್ ನಿರ್ವಹಣೆ, ಚಾಲಕನ ಸೀಟು ಮುಂದಿರುವ ಸಿಗ್ನಲ್ ಗುರುತುಗಳು ಮತ್ತು ಅವು ಏನನ್ನು ಸೂಚಿಸುವತ್ತೆ ಹಾಗೂ ಅವುಗಳ ಬಳಕೆ ಹೇಗೆ ಎಂದು ತಿಳಿಸುತ್ತಿದ್ದಾರೆ.

Bengaluru’s first woman e-bus driver to hit the road in February 2023

ಬಸ್ ಓಡಿಸಲು ಬೇಕಾದ ಚಾಲನಾ ಕೌಶಲ್ಯಗಳು, ತುರ್ತು ಸಂದರ್ಭದಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದೆಲ್ಲವನ್ನು ಈ ಮಹಿಳೆಗೆ ತಿಳಿಸಿಕೊಡಲಾಗುತ್ತಿದೆ. ಇದಿನ್ನು ತರಬೇತಿ ಹಂತವಾಗಿದ್ದು, ಫೆಬ್ರುವರಿಯಲ್ಲಿ ಅವರಿಗೆ ಮುಕ್ತ ಅವಕಾಶ ನೀಡುವ ಚಿಂತನೆಯಲ್ಲಿ ಸಂಸ್ಥೆ ಇದೆ ಎನ್ನಲಾಗಿದೆ.

English summary
Bengaluru’s first woman e-bus driver to hit the road in February 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X