ದಕ್ಷಿಣ ರಾಜ್ಯಗಳನ್ನು ಸಂಪರ್ಕಿಸುವ ಮೊದಲ ವಂದೇ ಭಾರತ್ ರೈಲು

ಬೆಂಗಳೂರು, ನವೆಂಬರ್‌ 10: ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ನವೆಂಬರ್ 12 ರಿಂದ ಪ್ರಾರಂಭವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 11 ನವೆಂಬರ್ 2022ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲ್ವೆ ನಿಲ್ದಾಣದಿಂದ ಸುಮಾರು 11 ಗಂಟೆಗೆ ಹಸಿರು ನಿಶಾನೆ ತೋರಲಿದ್ದಾರೆ.

ರೈಲು ಸಂಖ್ಯೆ 20607/20608 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಹಾಗೂ ಮೈಸೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ನಿಯಮಿತ ಕಾರ್ಯಾಚರಣೆಯು 12 ನವೆಂಬರ್ 2022 ರಂದು ಮತ್ತು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಮತ್ತು ಮೈಸೂರು ಎರಡು ಸ್ಥಳಗಳಿಂದ ಪ್ರಾರಂಭವಾಗಲಿದೆ.

ರೈಲು ಸಂಖ್ಯೆ 20607/20608 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಾರದಲ್ಲಿ ಆರು ದಿನಗಳು (ಬುಧವಾರ ಹೊರತುಪಡಿಸಿ) ಎರಡೂ ಕಡೆಗಳಿಂದ ನಿರ್ವಹಿಸಲಾಗುತ್ತದೆ. ಎರಡೂ ಸೇವೆಗಳಿಗೆ ಕಟಪಾಡಿ ಜಂಕ್ಷನ್‌ ಮತ್ತು ಕೆಎಸ್ಆರ್ ಬೆಂಗಳೂರಿನಲ್ಲಿ ನಿಲುಗಡೆಗಳನ್ನು ಒದಗಿಸಲಾಗುತ್ತದೆ.

14 ಚೇರ್ ಕಾರ್‌ಗಳು ಮತ್ತು 2 ಎಕ್ಸಿಕ್ಯೂಟಿವ್ ಚೇರ್ ಕಾರ್‌ಗಳು (ಒಟ್ಟು 16 ಕೋಚ್‌ಗಳು) ಇದರಲ್ಲಿ ಇರಲಿವೆ. 12ನೇ ನವೆಂಬರ್ 2022 ರಿಂದ (ಶನಿವಾರ) ಜಾರಿಗೆ ಬರುವಂತೆ ರೈಲು ಸಂಖ್ಯೆ 20607/20608 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿವರವಾದ ಸಮಯ ಮತ್ತು ನಿಲುಗಡೆಗಳನ್ನು ಕೆಳಗೆ ನೀಡಲಾಗಿದೆ.

ಪ್ರತಿ ಬುಧವಾರ ಈ ರೈಲು ಸೇವೆ ಇರಲ್ಲ

ಪ್ರತಿ ಬುಧವಾರ ಈ ರೈಲು ಸೇವೆ ಇರಲ್ಲ

ರೈಲು ಸಂಖ್ಯೆ 20607 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ಬುಧವಾರ ಹೊರತುಪಡಿಸಿ). ರೈಲು ಸಂಖ್ಯೆ 20608 ಮೈಸೂರಿನಿಂದ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ (ಬುಧವಾರ ಹೊರತುಪಡಿಸಿ) ಚಲನೆಯಲ್ಲಿರುತ್ತದೆ. ಈ ರೈಲು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಚೆನ್ನೈನಿಂದ 05.50 ಹೊರಟು 07.21ಕ್ಕೆ ಕಟಪಾಡಿ ಜಂಕ್ಷನ್‌ಗೆ ಬಂದು ಸೇರುತ್ತದೆ.

12.20ಕ್ಕೆ ಮೈಸೂರು ಜಂಕ್ಷನ್‌ಗೆ ಮೈಸೂರಿಗೆ ಆಗಮನ

12.20ಕ್ಕೆ ಮೈಸೂರು ಜಂಕ್ಷನ್‌ಗೆ ಮೈಸೂರಿಗೆ ಆಗಮನ

7.25ಕ್ಕೆ ಕಟಪಾಡಿ ಜಂಕ್ಷನ್‌ನಿಂದ ಹೊರಟು 10.20ಕ್ಕೆ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣಕ್ಕೆ ಬಂದು ಸೇರುತ್ತದೆ. 10.25ಕ್ಕೆ ಬೆಂಗಳೂರಿನಿಂದ ಹೊರಟು 12.20ಕ್ಕೆ ಮೈಸೂರು ಜಂಕ್ಷನ್‌ಗೆ ಬಂದು ತಲುಪಲಿದೆ. ಬಳಿಕ 1.05ಕ್ಕೆ ಮೈಸೂರಿನಿಂದ ಚೆನ್ನೈಗೆ ಹೊರಡುತ್ತದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಯಾವುದೇ ರಿಯಾಯಿತಿ ಮತ್ತು ಮಕ್ಕಳ ಶುಲ್ಕವನ್ನು ಅನುಮತಿಸಲಾಗುವುದಿಲ್ಲ. ಪೂರ್ಣ ದರದ ವಯಸ್ಕ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. ಬುಕಿಂಗ್, ರದ್ದತಿ, ಮರುಪಾವತಿ ಇತ್ಯಾದಿಗಳಿಗೆ ಇತರ ನಿಯಮಗಳು ಮತ್ತು ಷರತ್ತುಗಳು ಶತಾಬ್ದಿ ರೈಲುಗಳ ಪ್ರಕಾರ ಇರುತ್ತವೆ.

ಬೆಂಗಳೂರಿನಿಂದ ಮೋದಿ ರೈಲಿಗೆ ಚಾಲನೆ

ಬೆಂಗಳೂರಿನಿಂದ ಮೋದಿ ರೈಲಿಗೆ ಚಾಲನೆ

12-11-2022 ರಿಂದ ಪ್ರಾರಂಭವಾಗುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಮುಂಗಡ ಕಾಯ್ದಿರಿಸುವಿಕೆಯು ದಕ್ಷಿಣ ರೈಲ್ವೆಯಿಂದ ಮುಕ್ತವಾಗಿರುತ್ತದೆ. ನವೆಂಬರ್ 11ರಂದು ಕೆಎಸ್ಆರ್ ಬೆಂಗಳೂರಿನಿಂದ ಸುಮಾರು 10.20ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಿಂದ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್‌ಗೆ ತೆರಳುವ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುತ್ತಾರೆ.

ಅತ್ಯಾಧುನಿಕ ಸೌಲಭ್ಯಗಳು, ಸುಧಾರಿತ ಸುರಕ್ಷತಾ ತಂತ್ರಜ್ಞಾನ

ಅತ್ಯಾಧುನಿಕ ಸೌಲಭ್ಯಗಳು, ಸುಧಾರಿತ ಸುರಕ್ಷತಾ ತಂತ್ರಜ್ಞಾನ

ಉದ್ಘಾಟನಾ ದಿನದಂದು ತಮಿಳುನಾಡಿನ ಚೆನ್ನೈನ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯಿಂದ ತಯಾರಾದ ವಂದೇ ಭಾರತ್ ರೈಲನ್ನು ಕಣ್ತುಂಬಿಕೊಳ್ಳಲು ನಗರದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಈ ಉದ್ಘಾಟನಾ ವಿಶೇಷ ರೈಲು ಬಹುತೇಕ ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ಪ್ರೀಮಿಯಂ ರೈಲಿನ ಸೇವೆಯು ಅದರ ಅತ್ಯಾಧುನಿಕ ಸೌಲಭ್ಯಗಳು, ಸುಧಾರಿತ ಸುರಕ್ಷತಾ ತಂತ್ರಜ್ಞಾನದೊಂದಿಗೆ ದೇಶದಲ್ಲಿ ರೈಲು ಪ್ರಯಾಣದ ಭವಿಷ್ಯವನ್ನು ಸಂಕೇತಿಸುತ್ತದೆ. ಅಲ್ಲದೆ ಪ್ರಯಾಣದ ಅನುಭವವನ್ನು ಮರು ವ್ಯಾಖ್ಯಾನಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+