ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಎಂಜಿ ರಸ್ತೆ ಜ್ಯುವೆಲ್ಲರ್ಸ್ ಕಟ್ಟಡಕ್ಕೆ ಬೆಂಕಿ

By Mahesh
|
Google Oneindia Kannada News

ಬೆಂಗಳೂರು, ಜು.3: ನಗರದ ಜನನಿಬಿಡ ಮಹಾತ್ಮ ಗಾಂಧಿ ರಸ್ತೆಯ ಪ್ರಮುಖ ಕಟ್ಟಡವೊಂದರಲ್ಲಿ ಗುರುವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.

ಎಂಜಿ ರಸ್ತೆಯ ನವರತನ್ ಜ್ಯುವೆಲ್ಲರ್ಸ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲನೇ ಮಹಡಿಯ 87ನೇ ಸಂಖ್ಯೆ ಮಳಿಗೆಯಲ್ಲಿ ಜ್ಯುವೆಲ್ಲರ್ ಕಾಣಬಹುದು. ಬೆಂಕಿ ಆಕಸ್ಮಿಕದ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ತ್ಯಾಜ್ಯ ಘಟಕಕ್ಕೆ ಬೆಂಕಿ ತಗುಲಿ ಕಟ್ಟಡಕ್ಕೆ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ. ಇನ್ನೊಂದು ಮೂಲದ ಪ್ರಕಾರ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿರುವ ಅನುಮಾನ ಬಂದಿದೆ.

ಪ್ರತ್ಯಕ್ಷ ದರ್ಶಿಗಳ ಪ್ರಕಾರ ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೆಲ ಕ್ಷಣಗಳಲ್ಲೇ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು. ಕಟ್ಟಡದ ಸಮೀಪದಲ್ಲೇ ಟೈಮ್ ಆಫ್ ಇಂಡಿಯಾ ಕಚೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಮಳಿಗೆ ಮುಂತಾದ ಕಚೇರಿಗಳಿದ್ದು, ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಮಳಿಗೆಯಲ್ಲಿರುವ ಚಿನ್ನಾಭರಣಗಳನ್ನು ವರ್ಗಾಯಿಸಲಾಗುತ್ತಿದೆ. ಬೆಳ್ಳಿ, ಕಂಚಿನ ಆಭರಣಗಳನ್ನು ಸಿಬ್ಬಂದಿಗಳು ನೆಲಕ್ಕೆ ಎಸೆಯುತ್ತಿದ್ದಾರೆ.

ಘಟನಾ ಸ್ಥಳದಲ್ಲಿ ಎಂಟಕ್ಕೂ ಅಧಿಕ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಈಗ ಸಂಚಾರವನ್ನು ಸುಗಮಗೊಳಿಸಲಾಗಿದೆ. ಎಂಜಿ ರಸ್ತೆ ಸಂಚಾರ ಬದಲಾವಣೆ ಬಗ್ಗೆ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..

ನವರತನ್ ಜ್ಯುವೆಲ್ಲರ್ಸ್ ಕಟ್ಟಡದಲ್ಲಿ ಬೆಂಕಿ

ನವರತನ್ ಜ್ಯುವೆಲ್ಲರ್ಸ್ ಕಟ್ಟಡದಲ್ಲಿ ಬೆಂಕಿ

ಪ್ರತ್ಯಕ್ಷ ದರ್ಶಿಗಳ ಪ್ರಕಾರ ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೆಲ ಕ್ಷಣಗಳಲ್ಲೇ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು. ಮಳಿಗೆ ಇನ್ನೂ ತೆರೆದಿರಲಿಲ್ಲ. ಹೀಗಾಗಿ ಸಿಬ್ಬಂದಿ ಯಾರೂ ಇರಲಿಲ್ಲ. ಸಾವು ನೋವಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು.

ಸಂಚಾರ ಬದಲಾವಣೆ ಬಗ್ಗೆ ಟ್ವೀಟ್

ಸಂಚಾರ ಬದಲಾವಣೆ ಬಗ್ಗೆ ಟ್ವೀಟ್

ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಈಗ ಸಂಚಾರವನ್ನು ಸುಗಮಗೊಳಿಸಲಾಗಿದೆ. ಎಂಜಿ ರಸ್ತೆ ಸಂಚಾರ ಬದಲಾವಣೆ ಬಗ್ಗೆ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಚಿತ್ರಕೃಪೆ: @pankajontech

ಟ್ರಾಫಿಕ್ ಪೊಲೀಸರಿಂದ ತುರ್ತು ಕ್ರಮ

ಬೆಂಗಳೂರು ಸಿಟಿ ಟ್ರಾಫಿಕ್ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ. ಎಂಜಿ ರಸ್ತೆ ಆಸುಪಾಸಿನಲ್ಲಿ ಸಂಚಾರ ನಿರ್ಬಂಧಿಸಿ, ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ.

ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸದಂತೆ ಕ್ರಮ

ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸದಂತೆ ಕ್ರಮ

ನವರತನ್ ಜ್ಯುವೆಲ್ಲರ್ ಕಟ್ಟಡದ ಸಮೀಪದಲ್ಲೇ ಟೈಮ್ ಆಫ್ ಇಂಡಿಯಾ ಕಚೇರಿ, ರಿಲಯನ್ಸ್ ಮಳಿಗೆ ಮುಂತಾದ ಕಚೇರಿಗಳಿದ್ದು, ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಗಿದೆ.

ಆಭರಣಗಳನ್ನು ನೆಲಕ್ಕೆ ಎಸೆಯುತ್ತಿದ್ದಾರೆ

ಆಭರಣಗಳನ್ನು ನೆಲಕ್ಕೆ ಎಸೆಯುತ್ತಿದ್ದಾರೆ

ಮಳಿಗೆಯಲ್ಲಿರುವ ಚಿನ್ನಾಭರಣಗಳನ್ನು ವರ್ಗಾಯಿಸಲಾಗುತ್ತಿದೆ. ಬೆಳ್ಳಿ, ಕಂಚಿನ ಆಭರಣಗಳನ್ನು ಸಿಬ್ಬಂದಿಗಳು ನೆಲಕ್ಕೆ ಎಸೆಯುತ್ತಿದ್ದಾರೆ.

ಇತರೆ ಕಚೇರಿಗಳಿಂದಲೂ ನೆರವು

ನವರತನ್ ಜ್ಯುವೆಲ್ಲರಿ ಕಟ್ಟಡ ಸಮೀಪದ ಇತರೆ ಕಚೇರಿಗಳಿಂದಲೂ ನೆರವು ಪಡೆದುಕೊಳ್ಳಲಾಗುತ್ತಿದೆ.

ಎಂಜಿ ರಸ್ತೆಯ ನವರತನ್ ಜ್ಯುವೆಲ್ಲರ್ಸ್

ಎಂಜಿ ರಸ್ತೆಯ ನವರತನ್ ಜ್ಯುವೆಲ್ಲರ್ಸ್ ಕಟ್ಟಡದಲ್ಲಿ ಬೆಂಕಿ ನಂದಿಸುತ್ತಿರುವ ಕಾರ್ಯದ ಚಿತ್ರ

ಆಭರಣಗಳನ್ನು ನೆಲಕ್ಕೆ ಎಸೆಯುತ್ತಿದ್ದಾರೆ

ಆಭರಣಗಳನ್ನು ನೆಲಕ್ಕೆ ಎಸೆಯುತ್ತಿದ್ದಾರೆ

ಮಳಿಗೆಯಲ್ಲಿರುವ ಚಿನ್ನಾಭರಣಗಳನ್ನು ವರ್ಗಾಯಿಸಲಾಗುತ್ತಿದೆ. ಬೆಳ್ಳಿ, ಕಂಚಿನ ಆಭರಣಗಳನ್ನು ಸಿಬ್ಬಂದಿಗಳು ನೆಲಕ್ಕೆ ಎಸೆಯುತ್ತಿದ್ದಾರೆ.

ಆಭರಣಗಳನ್ನು ನೆಲಕ್ಕೆ ಎಸೆಯುತ್ತಿದ್ದಾರೆ

ಆಭರಣಗಳನ್ನು ನೆಲಕ್ಕೆ ಎಸೆಯುತ್ತಿದ್ದಾರೆ

ಮಳಿಗೆಯಲ್ಲಿರುವ ಚಿನ್ನಾಭರಣಗಳನ್ನು ವರ್ಗಾಯಿಸಲಾಗುತ್ತಿದೆ. ಬೆಳ್ಳಿ, ಕಂಚಿನ ಆಭರಣಗಳನ್ನು ಸಿಬ್ಬಂದಿಗಳು ನೆಲಕ್ಕೆ ಎಸೆಯುತ್ತಿದ್ದಾರೆ.

English summary
Fire Breaks out in Navratna Jewellers MG road, Bangalore today(July.3). As many as 8 fire tenders rushed to the spot and doused the flames. No casualty or injury has been reported in the incident, while exact loss has not been ascertained yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X