BMTC Bus: ಎಂಜಿ ರಸ್ತೆಯಲ್ಲಿ ಸುಟ್ಟು ಕರಕಲಾದ ಬಸ್

ಬೆಂಗಳೂರು, ಜುಲೈ 09: ಬೆಂಗಳೂರಿನಲ್ಲಿ ಎಂಜಿ ರಸ್ತೆಯಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದೆ. ಎಂದಿನಂತೆ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಬೆಂಗಳೂರಿನ ಎಂಜಿ ರಸ್ತೆಯ ಅನೀಲ್ ಕುಂಬ್ಳೆ ವೃತ್ತದಲ್ಲಿ ಮಂಗಳವಾರ ಬೆಳಗ್ಗೆ ಬಿಎಂಟಿಸಿ ಬಸ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಿಎಂಟಿಸಿ ಬಸ್ ಮಾರ್ಗ 144E ನಲ್ಲಿ ಎಂದಿನಂತೆ ಸಂಚಾರ ನಡೆಸಿತ್ತು. ಪ್ರಯಾಣಿಕರು ಬಸ್‌ನಲ್ಲಿ ತುಂಬಿದ್ದರು. ಈ ವೇಳೆ ಬಸ್ ಎಂಜಿನಲ್ಲಿ ಬೆಂಕಿ ಕಾನಿಸಿಕೊಂಡದನ್ನು ಚಾಲಕ ಗಮನಿಸಿದ್ದಾರೆ.

Fire Breaks Out in BMTC Bus Engine at MG Road Passengers Safely Evacuated

ನೋಡ ನೋಡುತ್ತಿದ್ದಂತೆ ಹೊಗೆ ಜೊತೆಗೆ ಬೆಂಕಿ ಬಸ್‌ ಅನ್ನು ಸಂಪೂರ್ಣವಾಗಿ ಆವರಿಸಲು ಶುರುವಾಗಿದೆ. ನಿಮಿಷಗಳಲ್ಲೇ ಇಡೀ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಎಂಜಿ ರಸ್ತೆಯಲ್ಲಿ ಏನಾಯಿತು ಎಂದು ನೋಡುವಷ್ಟರಲ್ಲಿ ಬೆಂಕಿಗೆ ಬಸ್ ಆಹುತಿ ಆಗಿದೆ.

ಇಂಜಿನ್‌ನಲ್ಲಿ ಹೊಗೆ, ಬೆಂಕಿ ಕಾಣಿಸುತ್ತಿದ್ದಂತೆ ತುಂಬಿಕೊಂಡಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಚಾಲಕ ಮತ್ತು ನಿರ್ವಾಹಕರ ಸಮಯ ಪ್ರಜ್ಞೆಯಿಂದಾಗಿ ಅದೃಷ್ಟವಶಾತ್ ಯಾರಿಗೆ ತೊಂದರೆ ಆಗಿಲ್ಲ ಎನ್ನಲಾಗಿದೆ. ಸದ್ಯ ಬಸ್‌ ಭಾಗಶಃ ಸುಟ್ಟು ಕರಕಲಾಗಿದೆ.

ದಿಢೀರ್ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು?, ಬೇಸಿಗೆ ಆದರೆ ಬಿಸಿಲಿಗೆ ಈ ರೀತಿ ಆಗಬಹುದು ಎನ್ನಬಹುದಾಗಿತ್ತು. ಅದರೆ ಮಳೆಗಾದಲ್ಲಿ ಇಂಜಿನ್‌ನಲ್ಲಿ ಹೀಗೆ ಆಗಲು ಕಾರಣ, ಎಲ್ಲ ಕುರಿತು ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+