Fire Accident : ಬೆಂಗಳೂರಿನ ಸರ್ಜಾಪುರ ರಸ್ತೆ ದೊಡ್ಡಕನೇಲಿಯಲ್ಲಿ ಅಗ್ನಿ ಅವಘಡ: ಆಕಾಶದೆತ್ತರಕ್ಕೆ ಧಗಧಗಿಸಿದ ಬೆಂಕಿ
ಬೆಂಗಳೂರಿನ ಸರ್ಜಾಪುರ ರಸ್ತೆ ದೊಡ್ಡಕನೇಲಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಬೆಂಕಿ ಆಕಾಶದೆತ್ತರಕ್ಕೆ ಧಗಧಗಿಸಿದೆ.
ಬೆಂಗಳೂರು ಮಾರ್ಚ್ 9: ಬೆಂಗಳೂರಿನ ಸರ್ಜಾಪುರ ರಸ್ತೆ ದೊಡ್ಡಕನೇಲಿಯಲ್ಲಿ (Doddakannelli) ಅಗ್ನಿ ಅವಘಡ ಸಂಭವಿಸಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Fire accident in Sarjapur road Doddakaneli #SarjapurRoad #Bangaloretraffic #TrafficJam @blrcitytraffic pic.twitter.com/igrtfYDLuC
— ChanakyaVishnuDatta (@ChanakyaDatta) March 9, 2023
ರಸ್ತೆಯ ಬದಿಯಲ್ಲಿ ಶಾಪ್‌ಯೊಂದಕ್ಕೆ ಬೆಂಕಿ ತಗುಲಿದ್ದು ಬೆಂಕಿ ಧಗಿಸುತ್ತಿದೆ. ಆಕಾಶದೆತ್ತರಕ್ಕೆ ಹೊಗೆ ಆವರಿಸಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಬೆಂಕಿ ಕೆನ್ನಾಲಿಗೆ ಪಕ್ಕದ ಶಾಪ್‌ಗಳಿಗೂ ಹರಡುತ್ತಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಯಿಂದಾಗಿ ರಸ್ತೆ ಬದಿ ಟ್ರಾಫಿಕ್ ಜಾಮ್ ಉಂಟಾಗಿದೆ.
ತಕ್ಷಣಕ್ಕೆ ಯಾವುದೇ ಸಾವು ನೋವು ವರದಿಯಾಗಿಲ್ಲ. ಪೊಲೀಸರು ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದ ಜೊತೆಗೆ ಘಟನೆಗೆ ಕಾರಣ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ.












Click it and Unblock the Notifications