ಯಲಹಂಕ ಕೆಪಿಟಿಸಿಎಲ್ ಘಟಕದಲ್ಲಿ ಬೆಂಕಿ; ಇಬ್ಬರು ಸಾವು

ಬೆಂಗಳೂರು, ಅಕ್ಟೋಬರ್ 12: ಬೆಂಗಳೂರಿನ ಯಲಹಂಕದ ಕೆಪಿಟಿಸಿಎಲ್ ಘಟಕದಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಇಬ್ಬರು ಇಂಜಿನಿಯರ್‌ಗಳು ಮೃತಪಟ್ಟಿದ್ದಾರೆ. ಅಕ್ಟೋಬರ್ 2ರಂದು ನಡೆದ ದುರಂತದಲ್ಲಿ 15 ಸಿಬ್ಬಂದಿಗಳು ಗಾಯಗೊಂಡಿದ್ದರು.

ಮೃತಪಟ್ಟವರನ್ನು ಕಾರ್ಯಪಾಲಕ ಇಂಜಿನಿಯರ್ (ಮೆಕಾನಿಕಲ್) ಕೃಷ್ಣ ಭಟ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಲೆಕ್ಟ್ರಿಕಲ್) ಮಂಜಪ್ಪ ಎಂದು ಗುರುತಿಸಲಾಗಿದೆ. ಸುಟ್ಟಗಾಯಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ಅಕ್ಟೋಬರ್ 2ರಂದು ಮುಂಜಾನೆ 3.30ರ ವೇಳೆಗೆ 370 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕ - 1ರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಟರ್ಬೈನ್ ಬಳಿ ಬೆಂಕಿಯ ಜ್ವಾಲೆ ಆವರಿಸಿದ ಕಾರಣ 15 ಸಿಬ್ಬಂದಿಗಳು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Fire Accident At KPTCL Plant Two Dead

ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಇಬ್ಬರೂ ಮೃತಪಟ್ಟಿದ್ದಾರೆ. ಅನಿಲ ಆಧಾರಿತ ಘಟಕ ಇದಾಗಿದ್ದು, ಬೆಂಕಿ ತಕ್ಷಣ ಘಟಕದ ತುಂಬಾ ವ್ಯಾಪಿಸಿತ್ತು. 7 ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದವು.

ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮರಿಸ್ವಾಮಿ, ಅಶ್ವತ್ಥ್ ನಾರಾಯಣ, ಕೆ. ಪಿ. ರವಿ, ಡಿ. ಪಿ. ಶ್ರೀನಿವಾಸ್, ರಘುರಾಮ್, ಅಶೋಕ್ ಸೇರಿದಂತೆ ಇತರ ಸಿಬ್ಬಂದಿಗಳು ಸಹ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+