ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್ ನಿಯಮ ಉಲ್ಲಂಘನೆ: ಪ್ರತಿಷ್ಠಿತ ಹೋಟೆಲ್ಸ್ ವಿರುದ್ಧ ಕೇಸ್

|
Google Oneindia Kannada News

ಬೆಂಗಳೂರು, ಜೂನ್ 29: ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಸೆವನ್ ಸ್ಟಾರ್ ಹೊಟೆಲ್ ಲಾ ಕ್ಲಾಸಿಕ್ ಮತ್ತು ಗೆಸ್ಟ್ ಲೈನ್ ಹೋಟೆಲ್ ವಿರುದ್ಧ ಎಫ್ ಐ ದಾಖಲಾಗಿದೆ.

ಕೊರೊನಾ ವೈರಸ್ ಭೀತಿ ಹಾಗೂ ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡಿ ರಾಯಲ್ ಡ್ರೀಮ್ ಟು ಫ್ಲೈ ಕಂಪನಿ ಸ್ಟಾರ್‌ ಹೋಟೆಲ್‌ಗಳಲ್ಲಿ ಅದ್ಧೂರಿ ಸಮಾರಂಭ ಆಯೋಜನೆ ಮಾಡಿದೆ. ಹೀಗಾಗಿ, ಡ್ರೀಮ್ ಟು ಫ್ಲೈ ಕಂಪನಿ ವಿರುದ್ಧವೂ ಕೇಸ್ ದಾಖಲಾಗಿದೆ.

ದೆಹಲಿಯ ಹೋಟೆಲ್‌ಗಳಿಗೆ ಚೀನಾ ಪ್ರವಾಸಿಗರ ಪ್ರವೇಶ ನಿಷೇಧದೆಹಲಿಯ ಹೋಟೆಲ್‌ಗಳಿಗೆ ಚೀನಾ ಪ್ರವಾಸಿಗರ ಪ್ರವೇಶ ನಿಷೇಧ

ಜೂನ್ 28ರ ಮಧ್ಯಾಹ್ನ ರಾಯಲ್ ಡ್ರೀಮ್ ಟು ಫ್ಲೈ ಕಂಪನಿ ಕಡೆಯಿಂದ ಲಾ ಕ್ಲಾಸಿಕ್ ಹೋಟೆಲ್‌ನಲ್ಲಿ ಪಾರ್ಟಿ ಆಯೋಜನೆಯಾಗಿದ್ದು, ಇದರಲ್ಲಿ 80 ರಿಂದ 100 ಭಾಗವಹಿಸಿದ್ದರು. ಲಾಕ್‌ಡೌನ್‌ ಮಾರ್ಗಸೂಚಿ ಅನ್ವಯ ಪಾರ್ಟಿ, ಸಭೆ ಮಾಡುವಂತಿಲ್ಲ. ಒಂದು ವೇಳೆ ಅನುಮತಿ ಪಡೆದುಕೊಂಡು ಆಯೋಜಿಸಿದರು 50ಕ್ಕೆ ಮಾತ್ರ ಅನುಮತಿ.

Fir Filed Against Hotel Law Classic And Guest Line For Lockdown Violation

ಈ ಘಟನೆಗೆ ಸಂಬಂಧಿಸಿದಂತೆ ರಾಯಲ್ ಡ್ರಿಮ್ ಟು ಫ್ಲೈ ಕಂಪನಿ ಸಿ.ಇ.ಒ. ಪ್ರಶಾಂತ ಹಾಗೂ ಇನ್ನಿತರರನ್ನು ವಶಕ್ಕೆ ಪಡೆದಿರುವ ಅತ್ತಿಬೆಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲಾ ಕ್ಲಾಸಿಕ್ ಹೋಟೆಲ್ ಮಾತ್ರವಲ್ಲ ಗೆಸ್ಟ್ ಲೈನ್ ಹೋಟೆಲ್‌ನಲ್ಲಿ ಪಾರ್ಟಿ ಆಯೋಜನೆಯಾಗಿದ್ದು, ಅಲ್ಲಿ 150 ರಿಂದ 200 ಜನರು ಪಾಲ್ಗೊಂಡಿದ್ದರು ಎಂಬ ಆರೋಪ ಇದೆ.

ಡ್ರೀಮ್ ಟು ಫ್ಲೈ ಕಂಪನಿ ವಂಚಕ ಕಂಪನಿಗಳಲ್ಲೊಂದು, ಇದು ಎಂ.ಎಲ್.ಎಂ. ಕಂಪನಿ ಆಗಿದ್ದು ಈ ತರಹದ ಹಲವಾರು ಮಕ್ಮಲ್ ಟೋಪಿ ಹಾಕುವ ಕಂಪನಿಗಳಿಗೆ ಈಗಾಗಲೇ RBI ಮತ್ತು sebi ನಿರ್ಬಂಧ ಹೇರಿವೆ. ಆದರೂ ಕೂಡ ಈ ಕಂಪನಿಯು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಸಾರ್ವಜನಿಕರಿಗೆ ಕೋಟ್ಯಾಂತರ ರೂ ವಂಚಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗುತ್ತಿದೆ.

ಪೊಲೀಸರು ಸೂಕ್ತ ತನಿಖೆ ನಡೆಸಿ ಕೂಲಂಕೂಷ ಪರಿಶೀಲಿಸಿದರೆ ಕೋಟ್ಯಾಂತರ ರೂ.ಗಳ ವಂಚನೆ ಹೊರಬರಲಿದೆ.

English summary
FIR Filed against Seven star hotel Law classic and Guest line Hotel for Lockdown rule violation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X