• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಸ್ಕ್ ; ದಂಡದ ಮೊತ್ತ ಕಡಿಮೆ ಇಲ್ಲ ಬಿಬಿಎಂಪಿ ಸ್ಪಷ್ಟನೆ

|

ಬೆಂಗಳೂರು, ಅಕ್ಟೋಬರ್ 07: ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದಿದ್ದರೆ 1 ಸಾವಿರ ರೂ. ದಂಡ ಕಟ್ಟಬೇಕು. ದಂಡ ಮೊತ್ತದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, "ಯಾವುದೇ ಕಾರಣಕ್ಕೂ ದಂಡ ಮೊತ್ತವನ್ನು ಇಳಿಕೆ ಮಾಡುವ ಪ್ರಸ್ತಾಪವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಡಿಸ್ಚಾರ್ಜ್; ಮಾಸ್ಕ್ ಇಲ್ಲದೆ ಸಂಚಾರ!

"ಮನೆಯಲ್ಲಿಯೇ ತಯಾರು ಮಾಡಿದ ಮಾಸ್ಕ್ ಧರಿಸಬಹುದು. ಆದರೆ, ಜನರು ಪದೇ ಪದೇ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ದಂಡ ಮೊತ್ತವನ್ನು ಕಡಿಮೆ ಮಾಡುವುದಿಲ್ಲ" ಎಂದು ಆಯುಕ್ತರು ಹೇಳಿದರು.

ಮಾಸ್ಕ್ ಧರಿಸದಿದ್ದರೆ 1 ಸಾವಿರ ದಂಡ: ಬಿಬಿಎಂಪಿಯಿಂದ ಜನರ ಲೂಟಿ

"ಮಾಸ್ಕ್ ಧರಿಸದೇ ಪದೇ ಪದೇ ನಿಯಮಗಳನ್ನು ಉಲ್ಲಂಘನೆ ಮಾಡುವವರು ದಂಡ ಕಟ್ಟಲಿ. ದಂಡ ಮೊತ್ತವನ್ನು 1 ಸಾವಿರ ರೂ.ಗಳಿಂದ ಇಳಿಕೆ ಮಾಡುವ ಪ್ರಸ್ತಾಪವಿಲ್ಲ" ಎಂದು ಆಯುಕ್ತರು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 1 ಸಾವಿರ ರೂ. ದಂಡ

ಜನರ ಆಕ್ರೋಶ : ಬಿಬಿಎಂಪಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದಿದ್ದರೆ 1 ಸಾವಿರ ರೂ. ದಂಡ ವಿಧಿಸುತ್ತಿದೆ. ಇದಕ್ಕಾಗಿ ಮಾರ್ಷಲ್‌ಗಳನ್ನು ನಿಯೋಜನೆ ಮಾಡಿದೆ. ದಂಡ ಮೊತ್ತದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾರ್ಷಲ್‌ಗಳ ಜೊತೆ ಜಗಳವಾಡುತ್ತಿದ್ದಾರೆ.

ಮೊದಲು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದಿದ್ದರೆ ನಗರ ಪ್ರದೇಶದಲ್ಲಿ 200 ರೂ., ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡವನ್ನು ಕಟ್ಟಬೇಕಿತ್ತು. ಕಳೆದ ವಾರ ಸರ್ಕಾರ ದಂಡಮೊತ್ತವನ್ನು ಏರಿಕೆ ಮಾಡಿತ್ತು.

ನಗರ ಪ್ರದೇಶದಲ್ಲಿ 1000 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಸರ್ಕಾರದ ಈ ತೀರ್ಮಾನಕ್ಕೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷಗಳು ಸಹ ಸರ್ಕಾರವನ್ನು ಟೀಕಿಸುತ್ತಿವೆ.

   ಒನ್‌ ಇಂಡಿಯಾ ಫಲಶ್ರುತಿ: ನೀಗಿತು ಹಾಸ್ಮಿನಗರ ಬಡಾವಣೆ ಜನರ ಬವಣೆ.. ವಿದ್ಯುತ್ ಕಂಬ, ತಂತಿಗಳ ತ್ವರಿತ ದುರಸ್ತಿ

   English summary
   Karnataka government hiked the penalty for not wearing a mask in public places to Rs 1,000. BBMP said that fine will not reduced.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X