ಬೆಂಗಳೂರು:ಅಣ್ಣ ಸಾಲ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರದ ಶಿಕ್ಷೆ

ಬೆಂಗಳೂರು, ಮಾರ್ಚ್ 5: ಅಣ್ಣ ಸಾಲ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರದ ಶಿಕ್ಷೆ ನೀಡಿರುವ ಅಮಾನವೀಯ ಘಟನೆ ಬೆಂಗಳೂರಲ್ಲಿ ನಡೆದಿದೆ.

ಅಣ್ಣ ಕೊಡಬೇಕಾದ ಸಾಲದ ಹಣಕ್ಕೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಹೋದರಿಯನ್ನು ಬೆದರಿಸಿ ಫೈನಾನ್ಶಿಯರ್ ಒಬ್ಬ ಎರೆಡು ವರ್ಷಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗುತ್ತಿರುವ ಘೋರ ಘಟನೆ ಇದಾಗಿದೆ.

ಜಾರ್ಖಂಡ್ ಮೂಲದ ಸಂತ್ರಸ್ತೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕ ಕಾರಣ ತನ್ನ ಅಣ್ಣ ಮತ್ತು ಅತ್ತಿಗೆ ಜೊತೆಗೆ ಬೆಂಗಳೂರಿಗೆ ಬಂದು ದೊಡ್ಡಕಮ್ಮನಹಳ್ಳಿಯಲ್ಲಿ ಮನೆ ಮಾಡಿದ್ದರು.

Financier sexually assault techie after her brother fails repay loan

ಅಣ್ಣ ತಾರಕನಾಥ್ ಶೇರು ಮಾರುಕಟ್ಟೆ ವ್ಯವಹಾರ ಶುರು ಮಾಡಿದ್ದ, ಫೈನಾನ್ಶಿಯರ್ ಬಾಲಾಜಿ ಸಣ್ಣ ಮಟ್ಟದ ಬಂಡವಾಳ ಹೂಡಿದ್ದ, ನೋಟು ನಿಷೇಧದ ಪರಿಣಾಮ ವ್ಯವಹಾರ ನೆಲಕಚ್ಚಿತ್ತು.

ತಾರಕನಾಥ್ ಆರು ಲಕ್ಷವನ್ನು ಬಾಲಾಜಿಗೆ ಹಿಂದಿರುಗಿಸಬೇಕಿತ್ತು. ಖಾಲಿ ಕೈ ಆಗಿದ್ದ ತಾರಕನಾಥ್ ಅಸಹಾಯಕತೆ ವ್ಯಕ್ತಪಡಿಸಿದಾಗ ಇವರನ್ನು ಅಪಹರಣ ಮಾಡಿಸಿದ್ದ ಬಾಲಾಜಿ ಎರಡು ಮೂರು ದಿನ ಕೂಡಿ ಹಾಕಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ. ಅವರ ವರ್ಷದ ಮಗಳನ್ನೂ ಅಪಹರಿಸುವ ಬೆದರಿಕೆಯನ್ನೂ ಒಡ್ಡಿದ್ದ.

ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಕಿರಿ ವಯಸ್ಸಿನಲ್ಲೇ ಉನ್ನತ ಹುದ್ದೆಯಲ್ಲಿರುವ ಪ್ರತಿಭಾವಂತ ಟೆಕ್ಕಿ ಈ ಬಗ್ಗೆ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದು ಎಫ್‌ಐಆರ್ ದಾಖಲಾಗಿದೆ.

ಅಣ್ಣನ ನರಳಾಟ ನೋಡಲಾರದೆ ತಂಗಿ ಬಂದು ಸಮಯಾವಕಾಶ ಕೇಳಿದಳು. ಅದಕ್ಕೂ ಒಪ್ಪ ಈತ ಪತ್ನಿ , ಮಗಳು, ತಂಗಿ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ತಾರಕನಾಥ್ ತಂಗಿ ದೈಹಿಕವಾಗಿಯೂ ಬಳಕೆಯಾದಳು. ಆತನಿಂದ ದೂರವಾಗಲು ಯತ್ನಿಸಿದಾಗಲೆಲ್ಲ ಅಣ್ಣನನ್ನು ಅಪಹರಿಸಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+