ಮಾಜಿ ಸಚಿವ ಜಾಫರ್ ಷರೀಫ್ ಮೃತದೇಹ ಕೆಪಿಸಿಸಿ ಕಚೇರಿಗೆ
ಬೆಂಗಳೂರು, ನವೆಂಬರ್ 26: ಕೇಂದ್ರದ ಮಾಜಿ ಸಚಿವ ಸಿಕೆ ಜಾಫರ್ ಜರೀಫ್ ಅನಾರೋಗ್ಯದ ಹಿನ್ನೆಲೆಯಲ್ಲಿ ನವೆಂಬರ್ 25ರಂದು ನಿಧನರಾಗಿದ್ದಾರೆ.
ಸೋಮವಾರ ಫ್ರೇಜರ್ ಟೌನ್ ನಲ್ಲಿರುವ ನಿವಾಸದಿಂದ ಜಾಫರ್ ಷರೀಪ್ ಅವರ ಮೃತದೇಹವನ್ನು ಮೆರವಣಿಗೆ ಮೂಲಕ ಖಾದ್ರಿಯಾ ಮಸೀದಿಗೆ ಕೊಂಡೊಯ್ದು, ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಿಲ್ಸರ್ಸ್ ರಸ್ತೆಯಲ್ಲಿರುವ ಖುದ್ದುಸ್ ಸಾಬ್ ಖಬರಸ್ತಾನ್ ನಲ್ಲಿ ಇಸ್ಲಾಂ ಧಾರ್ಮಿಕ ವಿಧಿವಿಧಾನದ ಮೂಲಕ ಅಂತ್ಯಕ್ರಿಯೆ ನೆರವೇರಲಿದೆ.
ಜಾಫರ್ ಷರೀಫ್ ಅವರ ಅಳಿಯ ಸೈಯದ್ ಯಾಸಿನ್ ಹಿರಿಯ ಪುತ್ರ ಉಜೇರ್ ಸ್ಕಾಟ್ಲಂಡ್ ನಲ್ಲಿ ಇರುವುದರಿಂದ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಸೋಮವಾರ ಮಾಡಲು ನಿರ್ಧರಿಸಲಾಗಿತ್ತು.

ಜಾಫರ್ ಷರೀಫ್ ಅಂತ್ಯಕ್ರಿಯೆಯು ಸೋಮವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಕೆಪಿಸಿಸಿ ಕಚೇರಿಗೆ ಷರೀಫ್ ಮೃತದೇಹ ಮೆರವಣಿಗೆ ಮೂಲಕ ಆಗಮಿಸಲಿದ್ದು ಅಂತಿಮ ದರ್ಶನಕ್ಕಾಗಿ ಇರಿಸಲಾಗುತ್ತದೆ.
ಜಾಫರ್ ಅವರು ಕಳೆದ ಶುಕ್ರವಾರವಷ್ಟೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಾಫರ್ ಷರೀಫ್ ಸರಿಸುಮಾರು ನಾಲ್ಕೂವರೆ ದಶಕಗಳಿಗಿಂತ ಹೆಚ್ಚು ಕಾಲ ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಪಿವಿ ನರಸಿಂಹರಾವ್ ಅವರ ಕಾಲದಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ ರಾಜ್ಯದ ರೈಲು ಮಾರ್ಗವನ್ನು ಬ್ರಾಡ್‌ಗೇಜ್ ಆಗಿ ಪರಿವರ್ತಿಸಿದ್ದರು.












Click it and Unblock the Notifications