ಸಿನಿಮಾ, ಧಾರಾವಾಹಿಯಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ವಂಚಿಸಿದವನನ್ನು ಬಂಧಿಸಿದ ಪೊಲೀಸರು
ಬೆಂಗಳೂರು, ಏಪ್ರಿಲ್. 03: ಚಲನಚಿತ್ರ ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಪಾತ್ರಗಳನ್ನು ಕೊಡಿಸುವ ನೆಪದಲ್ಲಿ ಹತ್ತಾರು ನವ ಕಲಾವಿದರಿಗೆ ವಂಚಿಸಿದ ಫಿಲ್ಮ್ ಇನ್‌ಸ್ಟಿಟ್ಯೂಟ್ ಮಾಲೀಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಬೆಂಗಳೂರಿನ ರಾಜಾಜಿನಗರ ಪೊಲೀಸರು 18 ವರ್ಷದ ಯುವತಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಫ್ಲೆಮಿಂಗೊ ಸೆಲೆಬ್ರಿಟೀಸ್ ವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಎಂಬ ಉದ್ಯಮವನ್ನು ನಡೆಸುತ್ತಿದ್ದ ಕೆ ನಾಗೇಂದ್ರ ಅಲಿಯಾಸ್ ಧವನ್ ಸೋಹಾ ಎಂಬ 31 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ನವ ಕಲಾವಿದರಿಗೆ ಕೆಲಸ ಕೊಡಿಸಲು, ಪೋರ್ಟ್ಫೋಲಿಯೊಗಳು ಮತ್ತು ಪ್ರೋಮೋಗಳನ್ನು ಮಾಡಿಕೊಡಲು 75,000 ರೂಪಾಯಿಗಳನ್ನು ಪಡೆದಿದ್ದಾರೆ ಎಂಬ ಆರೋಪವಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಂದಿತ ವ್ಯಕ್ತಿ ಸುಮಾರು 58 ಹಾಲಿ ಆಕಾಂಕ್ಷಿಗಳು ಈತ ಮತ್ತು ಆತನ ಸಹಚರರಿಂದ ವಂಚನೆಗೆ ಒಳಗಾಗಿರಬಹುದು ಎಂದು ತಿಳಿದುಬಂದಿದೆ. ಮಾರ್ಚ್ 30 ರಂದು ನಾಗೇಂದ್ರ ಮತ್ತು ಐವರು ಮಹಿಳೆಯರು ಸೇರಿದಂತೆ ಇತರ ಆರು ಮಂದಿಯ ವಿರುದ್ಧ ದಾಖಲಾದ ದೂರಿನಲ್ಲಿ, ಸಂತ್ರಸ್ತೆ ತಾನು 2021 ರಲ್ಲಿ ಈ ಸಂಸ್ಥೆಗೆ ಸೇರಿದ್ದಾಗಿ ತಿಳಿಸಿದ್ದಾರೆ.
2021 ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸಂಸ್ಥೆಯ ಪ್ರೊಫೈಲ್ ಅನ್ನು ನೋಡಿ, ಕಲಾವಿದೆಯಾಗಬೇಕು, ನಟನೆ ಮಾಡಬೇಕು ಎಂದು ತರಬೇತಿಗಾಗಿ ಅವರನ್ನು ಸಂಪರ್ಕಿಸಿದ್ದೆ. ಇನ್‌ಸ್ಟಿಟ್ಯೂಟ್‌ನ ಸಿಬ್ಬಂದಿ ಸಂತ್ರಸ್ತ ಯುವತಿಗೆ ಚಲನಚಿತ್ರ ಮತ್ತು ದೂರದರ್ಶನ ಧಾರಾವಾಹಿ ಉದ್ಯಮಗಳಲ್ಲಿ ಒಳ್ಳೆಯ ಸಂಪರ್ಕವನ್ನು ಹೊಂದಿರುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಸಿನಿಮಾ, ಸಿರೀಯಲ್‌ಗಳಲ್ಲಿ ಪ್ಲೇಸ್‌ಮೆಂಟ್ ಗ್ಯಾರಂಟಿ ಎಂದು ಹೇಳಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆ ತರಬೇತಿಗಾಗಿ ಸಂಸ್ಥೆ ಸೇರಿದ ಕೆಲವು ದಿನಗಳ ನಂತರ, ತರಬೇತಿಗಾಗಿ ವಿಶೇಷ ಶುಲ್ಕವಾಗಿ 30,000 ರೂಪಾಯಿಗಳನನ್ನು ಪಾವತಿಸಿದ್ದಾರೆ. ಬಳಿಕ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ನೀಡುವುದಾಗಿ ಸಂತ್ರಸ್ತೆಗೆ ಹೇಳಲಾಗಿದೆ. ಕೋರ್ಸ್ ಪ್ರಾರಂಭವಾದ ಹತ್ತು ದಿನಗಳ ನಂತರ, ಟಿವಿ ಧಾರಾವಾಹಿ ನಿರ್ದೇಶಕರಿಗೆ ಕಳುಹಿಸಲು ಪೋರ್ಟ್‌ಫೋಲಿಯೊವನ್ನು ರಚಿಸಲು ಹೆಚ್ಚುವರಿ 25,000 ರೂಪಾಯಿಗಳನ್ನು ಪಾವತಿಸಲು ತಿಳಿಸಲಾಗಿದೆ.

ಇದಾದ ನಂತರ ಸಂತ್ರಸ್ತೆಗೆ ತೆಲುಗು ಚಲನಚಿತ್ರೋದ್ಯಮದಲ್ಲಿ ಒಂದು ಪಾತ್ರಕ್ಕಾಗಿ ಆಡಿಷನ್ ಮಾಡಲು 20,000 ರೂ.ಗಳನ್ನು ನೀಡುವಂತೆ ತಿಳಿಸಲಾಗಿದೆ. ಬಳಿಕ ಸುಮಾರು ನಾಲ್ಕು ತಿಂಗಳ ನಂತರ, ಆಕೆಗೆ ಇನ್ನೂ ಯಾವುದೇ ಕೆಲಸದ ಅವಕಾಶ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಆದರೆ ಯಾಕೆ ಇನ್ನು ಅವಕಾಶ ಸಿಕ್ಕಿಲ್ಲ ಎಂದು ಪ್ರಶ್ನೆಗಳನ್ನು ಎತ್ತಿದಾಗ, ಆಕೆಯನ್ನು ನಿಂದಿಸಿ, ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಸ್ಥೆ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಪಾತ್ರಗಳನ್ನು ನೀಡುವುದಾಗಿ ನಕಲಿ ಭರವಸೆ ನೀಡಿ ಹತ್ತಾರು ಜನರನ್ನು ವಂಚಿಸಿದೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಬೆಂಗಳೂರು ಪೊಲೀಸರ ಪ್ರಕಾರ, ಸಂಸ್ಥೆಗೆ ಭೇಟಿ ನೀಡಿದ ಹಲವು ಆಕಾಂಕ್ಷಿಗಳಿಗೆ ನಟನೆಯ ಕೋರ್ಸ್‌ಗಳು ಮತ್ತು ಉದ್ಯೋಗ ನೀಡುತ್ತೇವೆ ಎಂದು ವಂಚಿಸಿದ್ದಾರೆ.
ಜೊತೆಗೆ ಬಂಧಿತ ಸಂಸ್ಥೆಯ ಮಾಲೀಕ ಕೆ ನಾಗೇಂದ್ರ ಅಲಿಯಾಸ್ ಧವನ್ ಸೋಹಾ ಭಾರತೀಯ ಚಲನಚಿತ್ರೋದ್ಯಮದ ಹಲವಾರು ಸೆಲೆಬ್ರಿಟಿಗಳ ಜೊತೆಗೆ ಫೋಟೋಗಳನ್ನು ತೆಗೆದುಕೊಂಡು ತಮಗೂ ಅವರಿಗೂ ಉತ್ತಮ ಸಂಬಂಧ ಹೊಂದಿರುವ ರೀತಿ ಬಿಂಬಿಸಿಕೊಂಡಿದ್ದಾನೆ ಎಂದಿದ್ದಾರೆ.












Click it and Unblock the Notifications