18 ಸಾವಿರಕ್ಕೂ ಅಧಿಕ ಮನೆ, ವಾಹನಕ್ಕೆ ಉಚಿತ ಸ್ಯಾನಿಟೈಸ್!

ಬೆಂಗಳೂರು, ಜೂನ್ 11: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂಬೈ ಮೂಲದ ವೀರ್ ಫೌಂಡೇಷನ್‍ ಇದುವರೆಗೆ 18 ಸಾವಿರಕ್ಕೂ ಅಧಿಕ ಸ್ಥಿರ ಹಾಗೂ ಚರಾಸ್ಥಿಗಳನ್ನು ಸ್ಯಾನಿಟೈಸ್ ಮಾಡಿದೆ ಹಾಗೂ ತನ್ನ ಸ್ವಚ್ಛತಾ ಕಾರ್ಯವನ್ನು ಬೆಂಗಳೂರು, ಹೈದರಾಬಾದ್ ಮತ್ತು ಅಹ್ಮದಾಬಾದ್‍ಗೆ ವಿಸ್ತರಿಸಲು ನಿರ್ಧರಿಸಿದೆ.

ಸ್ಯಾನಿಟೈಸೇಷನ್‍ಗೆ ಅಗತ್ಯವಾದ ರಾಸಾಯನಿಕ ಸೇರಿದಂತೆ ಈ ನೈರ್ಮಲ್ಯ ಅಭಿಯಾನಕ್ಕೆ ತಗುಲಿದ ಸಂಪೂರ್ಣ ವೆಚ್ಚವನ್ನು ವೀರ್ ಫೌಂಡೇಷನ್ ಭರಿಸಿದೆ.

ಲಾಕ್‍ಡೌನ್ ಹಂತಹಂತವಾಗಿ ಸಡಿಲಿಕೆಯಾಗುತ್ತಿದ್ದರೂ, ಸಾರ್ವಜನಿಕರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಹಾಗೂ ಕೊರೋನಾ ವೈರಸ್‍ನಿಂದ ಬಾಧೆಗೆ ಒಳಗಾಗದಂತೆ ಖಾತರಿ ವಹಿಸುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕೋವಿಡ್-19 ತಡೆಯುವ ಏಕೈಕ ಉದ್ದೇಶದಿಂದ ವೀರ್ ಫೌಂಡೇಷನ್ ಈ ತನ್ನ ನೈರ್ಮಲ್ಯ ಅಭಿಯಾನವನ್ನು ಮುಂದುವರಿಸಲಿದ್ದು, ಎಲ್ಲ ಅಪಾರ್ಟ್‍ಮೆಂಟ್ ಸಂಕೀರ್ಣಗಳು, ಆಸ್ಪತ್ರೆಗಳು, ಆ್ಯಂಬುಲೆನ್ಸ್, ಕಚೇರಿ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳನ್ನು ನಿಯತವಾಗಿ ಸ್ಯಾನಿಟೈಸ್ ಮಾಡುವುದು ಅಗತ್ಯ.

Fight against Covid-19: Veer Foundation sanitises 18,000 housing societies

"ಭಾರತದಾದ್ಯಂತ, ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟಲು ನಾವು ನಿರಂತರ ಶ್ರಮ ವಹಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಭಾರತದ ನಾಗರಿಕರಿಗೆ ನೆರವಾಗಲು ನಾವು ಸಜ್ಜಾಗಿದ್ದೇವೆ. ನಮ್ಮ ಸಹ ಟ್ರಸ್ಟಿಗಳು ಹಾಗೂ ಸ್ವಯಂಸೇವಕರು ನಿಯತವಾಗಿ ಸ್ಯಾನಿಟೈಸೇಷನ್ ಕೈಗೊಳ್ಳುವಂತೆ ಎರಡು ತಿಂಗಳ ಕಾಲ ಅವಿರತವಾಗಿ ಶ್ರಮಿಸಿ ಜಾಗೃತಿ ಮೂಡಿಸಿದ್ದಾರೆ" ಎಂದು ವೀರ್ ಫೌಂಡೇಷನ್‍ನ ಟ್ರಸ್ಟಿ ನಿತೀಶ್ ಸಾಂಘ್ವಿ, ಕೋವಿಡ್-19 ತಡೆಗಟ್ಟುವ ತನ್ನ ಪ್ರಯತ್ನದ ಬಗ್ಗೆ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+