• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೀಘ್ರ ಫಾಸ್ಟ್ಯಾಗ್ : ನೈಸ್‌ ರಸ್ತೆಯಲ್ಲೂ ಇನ್ಮುಂದೆ ಪ್ರಯಾಣ ಸುಲಭ

|
Google Oneindia Kannada News

ಬೆಂಗಳೂರು, ನವೆಂಬರ್ 09: ಇನ್ನುಮುಂದೆ ನೈಸ್ ರಸ್ತೆಯಲ್ಲೂ ಫಾಸ್ಟ್ಯಾಗ್ ಅಳವಡಿಸಲಾಗುತ್ತಿದ್ದು, ಸರತಿಯಲ್ಲಿ ನಿಂತು ಕಾಯುವ ತಲೆಬಿಸಿಯಿಂದ ವಾಹನ ಸವಾರರು ಹೊರಬರಲಿದ್ದಾರೆ.

ಎಲ್ಲೆಡೆಯೂ ಈಗಾಗಲೇ ಫಾಸ್ಟ್ಯಾಗ್ ಅಳವಡಿಸಲಾಗಿದೆ, ಆದರೆ ನೈಸ್ ರಸ್ತೆಯಲ್ಲಿ ಇನ್ನೂ ಹಣ ಪಾವತಿಸಿಯೇ ವಾಹನಗಳು ಮುಂದಕ್ಕೆ ಹೋಗಬೇಕಿತ್ತು. ಹೀಗಾಗಿ ಬಹಳ ಸಮಯ ಹಿಡಿಯುತ್ತಿತ್ತು. ಇನ್ನುಮುಂದೆ ಆ ತಲೆ ಬಿಸಿ ಇಲ್ಲ.

ನವೆಂಬರ್ ಎರಡನೇ ವಾರದಿಂದ, ಪ್ರಯಾಣಿಕರು ತಮ್ಮ ಫಾಸ್ಟ್‌ಟ್ಯಾಗ್ ಕಾರ್ಡ್ ಅನ್ನು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ರಸ್ತೆಯಲ್ಲಿ ಬಳಸಬಹುದಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಜ್ಯ ಸರ್ಕಾರ ಮತ್ತು ಸಾರಿಗೆ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಸೆಪ್ಟೆಂಬರ್ 30 ರಂದು ಎಂಒಯುಗೆ ಸಹಿ ಹಾಕಲಾಯಿತು.

ಮಾರ್ಚ್‌ನಲ್ಲಿ ನೈಸ್ ರಸ್ತೆಗೆ ಫಾಸ್ಟ್‌ಟ್ಯಾಗ್ ಅನ್ನು ಪರಿಚಯಿಸಬೇಕಾಗಿತ್ತು, ಆದರೆ ಲೋಕೋಪಯೋಗಿ ಇಲಾಖೆ ಪ್ರಕಾರ, ಕಂಪನಿಯು ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಅದನ್ನು ಕಾರ್ಯಗತಗೊಳಿಸಲಾಗಿಲ್ಲ.

ಕೌನ್ಸಿಲ್ ಸಭೆಯಲ್ಲಿ ಪಿಡಬ್ಲ್ಯುಡಿ ಸಚಿವ ಗೋವಿಂದ್ ಕಾರಜೋಳ ಕೂಡ ಇದೇ ಹೇಳಿಕೆ ನೀಡಿದ್ದರು. ರಾಜ್ಯ ಮತ್ತು ಕೇಂದ್ರದ ನಡುವಿನ ಸಮನ್ವಯ ಸಮಸ್ಯೆಗಳಿಂದಾಗಿ ಈ ಹಿಂದೆ ಸಮಸ್ಯೆ ಉಂಟಾಗಿತ್ತು ಎಂದು ನೈಸ್ ಲಿಮಿಟೆಡ್‌ನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಇದು ಸರ್ಕಾರದ ಯೋಜನೆಯಾಗಿರುವುದರಿಂದ ಇನ್ನೂ ಹಲವು ವಿವರಗಳನ್ನು ಸರಿಪಡಿಸಬೇಕಾಗಿದೆ. ಫಾಸ್ಟ್‌ಟ್ಯಾಗ್ ಮೂಲಕ ಪಾವತಿಸಿದ ಹಣವು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್‌ಇಟಿಸಿ) ವ್ಯವಸ್ಥೆಯ ಮೂಲಕ ಕಂಪನಿಗೆ ನೀಡಲಾಗುತ್ತದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅತ್ಯಂತ ಜನನಿಬಿಡ ರಸ್ತೆಗಳಲ್ಲೊಂದಾದ ನೈಸ್ ರಸ್ತೆಯಲ್ಲಿ ಇದುವರೆಗೂ ಫಾಸ್ಟ್ ಟ್ಯಾಗ್ ಸೌಲಭ್ಯವಿರಲಿಲ್ಲ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳಂತೆ ಎಲ್ಲಾ ವಾಹನಗಳಿಗೆ ಅಧಿಕೃತವಾಗಿ ಫಾಸ್ಟ್ ಟ್ಯಾಗ್ ಬಳಕೆ ಮಾಡಲು ನೈಸ್ ರಸ್ತೆ ಲಿಮಿಟೆಡ್‌ನ ಅಧಿಕಾರಿಗಳು ಇದೀಗ ತಾಂತ್ರಿಕ ದೋಷಗಳನ್ನು ಸರಿ ಪಡಿಸುತ್ತಿದ್ದಾರೆ.

ಫಾಸ್ಟ್‌ಟ್ಯಾಗ್‌ನ ಇಲ್ಲದ ಕಾರಣ ಟೋಲ್ ಪ್ಲಾಜಾಗಳಲ್ಲಿ ಉದ್ದನೆಯ ಸರತಿ ಸಾಲುಗಳಿಗೆ ಕಾರಣವಾಗುತ್ತದೆ, ಏಕೆಂದರೆ ಪಾಸ್ ಬಳಸಲು ಹಣವನ್ನು ಮಾತ್ರ ಸ್ವೀಕರಿಸಲಾಗುತ್ತಿತ್ತು ಎಂದು ನೈಸ್ ಸಂಸ್ಥೆ ಮೂಲಗಳುತಿಳಿಸಿವೆ.

ದರಗಳು ಪ್ರಸ್ತುತ ಇರುವಂತೆಯೇ ಇರುತ್ತವೆ. ಪಾವತಿಯ ವಿಧಾನವು ಈಗ ನಗದು ಅಥವಾ ಫಾಸ್ಟ್ ಟ್ಯಾಗ್ ಸ್ಮಾರ್ಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಬೇಕಾಗುತ್ತದೆ.

ಸರ್ಕಾರವು ಡಿಜಿಟಲೀಕರಣದ ವ್ಯವಸ್ಥೆಗೆ ಒತ್ತು ನೀಡಲು ವಿವಿಧ ಯೋಜನೆಗಳನ್ನು ಆನ್‌ಲೈನ್‌ ವ್ಯವಸ್ಥೆಗೆ ತರುತ್ತಿವೆ. ದೇಶದ ಜನತೆ ಕೂಡ ನಿತ್ಯ ಕ್ಯಾಶ್‌ಲೆಸ್‌ ವಹಿವಾಟು ನಡೆಸಲು ಒತ್ತು ನೀಡುತ್ತಿದ್ದಾರೆ. ಈಗಾಗಲೇ ಇದಕ್ಕೆ ದೇಶದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗೇಟ್‌ಗಳು ಹೊರತಾಗಿಲ್ಲ. ಆದರೆ, ಇದೀಗ ನೀವು ಕಡ್ಡಾಯವಾಗಿ ಫಾಸ್ಟ್ಯಾಗ್ ಅನ್ನು ಪಡೆಯಲೇಬೇಕಾಗಿದೆ. ನೀವು ಫಾಸ್ಟ್ಯಾಗ್ ಅನ್ನು ಪಡೆದು ನಿಮ್ಮ ವಾಹನದ ವಿಂಡ್ ಸ್ಕ್ರೀನ್‌ಗೆ ಅಂಟಿಸಿದ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಗೇಟ್‌ಗಳಲ್ಲಿ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಸಾಧ್ಯವಾಗುತ್ತದೆ.

ದ್ವಿಚಕ್ರ ಹೊರತುಪಡಿಸಿ ತ್ರಿಚಕ್ರ, ಕಾರ್‌, ಲಾರಿ ಸೇರಿ ಎಲ್ಲ ವಾಹನಗಳಿಗೂ ಫಾಸ್ಟ್ಯಾಗ್ ಅಳವಡಿಕೆ ಮಾಡಬೇಕಿದ್ದು, ಇದೊಂದು ರೀತಿಯ ವ್ಯಾಲೆಟ್ ಅಕೌಂಟ್ ಇದ್ದ ಹಾಗೆ ಎಂದು ಹೇಳಿದರೆ ನಿಮಗೆ ಸುಲಭವಗಾಗಿ ಅರ್ಥವಾಗಬಹುದು.

ಆದರೆ, ಇದರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿಯಬೇಕೆಂದರೆ, RFID (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಇರುವ ಸ್ಮಾರ್ಟ್ ಲೇಬಲ್‌ಗಳನ್ನು FasTag ಎಂದು ಕರೆಯಲಾಗುತ್ತದೆ. ಇದನ್ನು ವಾಹನಕ್ಕೆ ಅಂಟಿಸಿರುವ ಫಾಸ್ಟ್ಯಾಗ್ ರೀಡ್ ಆಗಿ ಫಾಸ್ಟ್ಯಾಗ್ ಖಾತೆಯಿಂದ ರಸ್ತೆ ಬಳಕೆ ಶುಲ್ಕ ಪಾವತಿಯಾಗಲಿದೆ.

ಯಾವುದೇ ವಾಹನದ ಮಾಲಿಕ ತನ್ನ ಬ್ಯಾಂಕ್‌ ಖಾತೆ ಇರುವುದಕ್ಕೆ ಫಾಸ್ಟ್ಯಾಗ್ ಲಿಂಕ್‌ ಮಾಡಿಸಬಹುದಾಗಿದೆ. ಇಲ್ಲವೇ ಪ್ರತ್ಯೇಕ ಹಣ ಜಮೆ ಮಾಡಿಕೊಳ್ಳಬಹುದು. ಯಾವುದೇ ವಾಹನ ಮಾಲೀಕರು ಖಾತೆದಾರರಾಗಿರುವ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್ ಖರೀದಿಸಬಹುದಾಗಿದೆ.

ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲಾದ ನೋಂದಾಯಿತ 23 ಬ್ಯಾಂಕ್‌ಗಳ ಆಯ್ದ ಶಾಖೆಗಳಲ್ಲಿ ಫಾಸ್ಟ್ಯಾಗ್ ಲಭ್ಯವಿದೆ.ಇದಲ್ಲದೆ ಬ್ಯಾಂಕ್ ನ್ಯೂಟ್ರಲ್ (Bank Neutral ) ಫಾಸ್ಟ್ಯಾಗ್‌ಗಳು ಆಯ್ದ ಪೆಟ್ರೋಲ್ ಬಂಕ್ ಮತ್ತು ಅಮೆಜಾನ್, ಪೇಟಿಎಂ ಮತ್ತು ಏರ್‌ಟೆಲ್ ಥ್ಯಾಂಕ್ಸ್ App ನಲ್ಲಿ ಲಭ್ಯವಿವೆ.

   ಸೆಹ್ವಾಗ್ ಹೇಳಿದ ಭಾರತದ ಉಪನಾಯಕ ವೇಗದ ಬೌಲರ್ ಯಾರು? | Oneindia Kannada
   English summary
   From the second week of November, commuters can use their FasTag card on the Nandi Infrastructure Corridor Enterprises (NICE) Road, which is amongst the busiest roads.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X