ಮತ್ತೆ ಭುಗಿಲೇಳಲಿದೆ ದೇಶಾದ್ಯಂತ ರೈತರ ಮುಷ್ಕರ

Recommended Video

      ಜೂನ್ 1ರಿಂದ 10ರವರೆಗೆ ಭಾರತದಾದ್ಯಂತ ರೈತರ ಮುಷ್ಕರ | Oneindia Kannada

      ಬೆಂಗಳೂರು, ಮೇ 31: ದೇಶದ 130 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ರಾಷ್ಟ್ರೀಯ ಕಿಸಾನ್ ಮಹಾಸಂಘದ ಬ್ಯಾನರ್‌ನಡಿ ಜೂನ್‌ 1ರಿಂದ ಭಾರಿ ಪ್ರಮಾಣದ ಹೋರಾಟವನ್ನು ದೇಶಾದ್ಯಂತ ಆರಂಭಿಸಲಿವೆ.

      ಹತ್ತು ದಿನಗಳ ಕಾಲ ನಡೆಯಲಿರುವ ಈ ರೈತರ ಹೋರಾಟದಲ್ಲಿ 130 ಸಂಘಟನೆಗಳು ಭಾಗವಹಿಸುತ್ತಿದ್ದರೆ ಕಳೆದ ವರ್ಷ ಇದೇ ಸಂಘಟನೆಗಳ ಅಡಿಯಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ 193 ಸಂಘಟನೆಗಳು ಈ ಬಾರಿ ಹೋರಾಟದಿಂದ ದೂರ ಉಳಿದಿರುವುದು ರೈತರ ಹೋರಾಟದ ಯಶಸ್ಸು ಕುರಿತಂತೆ ಹಲವಾರು ಅನುಮಾನಗಳನ್ನು ಹುಟ್ಟಿಸಿದೆ.

      ಕಳೆದ ವರ್ಷ ಮಹಾರಾಷ್ಟ್ರದಿಂದ ಮಧ್ಯಪ್ರದೇಶದವರೆಗೆ ಹತ್ತು ದಿನಗಳ ಕಾಲ ಭಾರಿ ಪ್ರಮಾಣದ ರೈತರ ಹೋರಾಟ ದೇಶದಲ್ಲೇ ಸಂಚಲವನ್ನು ಸೃಷ್ಟಿಸಿತ್ತು. ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಯ ಕಿಸಾನ್ ಮಹಾಸಂಘದ ನಿಯೋಜಕ ಶಿವಕುಮಾರ್‌ ಕಕ್ಕಾಜೆ ಶರ್ಮಾ ಎರಡು ಬಗೆಯ ರೈತ ಸಂಘಟನೆಗಳಿವೆ.

      Farmers across India are set to go on 10 day strike from June 1

      ಒಂದು ಬಗೆಯ ಸಂಘಟನೆಗಳು ರೈತರ ಕಲ್ಯಾಣಕ್ಕಾಗಿ ಹೋರಾಡುತ್ತವೆ. ಇನ್ನು ಕೆಲವು ಸಂಘಟನೆಗಳು ರೈತರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತದೆ. ಅಂತಹ ಸಂಘಟನೆಗಳು ಈ ಬಾರಿ ಹೋರಾಟದಿಂದ ದೂರ ಉಳಿದಿವೆ. 150 ಕ್ಕೂ ಹೆಚ್ಚು ಸಂಘಟನೆಗಳು ರೈತರ ಪರವಾಗಿ ರಾಜಕೀಯೇತರ ಸಂಘಟನೆಗಳಾಗಿ ಕೆಲಸ ಮಾಡುತ್ತಿದ್ದು, ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

      ಆದರೆ ಸ್ವರಾಜ್ ಅಭಿಯಾನ ಸಂಸ್ಥಾಪಕ ಯೋಗೇಂದ್ರ ಯಾದವ್ ಈ ಕುರಿತು ಹೇಳಿಕೆ ನೀಡಿ ನಾವು ಕೇವಲ ಮಾಧ್ಯಮಗಳಿಂದ ರೈತರ ಮುಷ್ಕರದ ಬಗ್ಗೆ ತಿಳಿದುಕೊಂಡಿದ್ದೇವೆ ಈ ಬಗ್ಗೆ ಅಧಿಕೃತವಾದ ಯಾವುದೇ ಮಾಹಿತಿ ಇರಲಿಲ್ಲ, ಹೀಗಾಗಿ ನಾವು ಈ ಮುಷ್ಕರದಿಂದ ದೂರ ಉಳಿದಿದ್ದೇವೆ ರೈತರ ಪರವಾದ ಹೋರಾಟಕ್ಕೆ ನಾವು ಶುಭ ಕೋರುತ್ತೇವೆ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+