ತೇಜಸ್ವಿನಿ ಭಾವುಕ ಟ್ವೀಟ್ ಗೆ ಅಭಿಮಾನಿಗಳ ಅಕ್ಕರೆಯ ಸಾಂತ್ವನ

Recommended Video

      ತೇಜಸ್ವಿನಿ ಅನಂತ್ ಕುಮಾರ್ ಭಾವುಕ ಟ್ವೀಟ್ ಗೆ ಟ್ವಿಟ್ಟಿಗರ ಸಾಂತ್ವನ | Oneindia Kannada

      ಬೆಂಗಳೂರು, ಏಪ್ರಿಲ್ 05: "ನಾವು ಅಧೀರರಾಗುವ ಸನ್ನಿವೇಶ ಬಂದರೆ ದೇವರು ನಮ್ಮ ಪ್ರಗತಿಗಾಗಿ ಮುಂದೆಲ್ಲೋ ಅಮೂಲ್ಯವಾದ ಸನ್ನವೇಶ ಸೃಷ್ಟಿಸುತ್ತಾನೆ ಎಂದರ್ಥ" ಎಂಬರ್ಥದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಮಾಡಿರುವ ಟ್ವೀಟ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

      ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರೂ ಪಕ್ಷದ ವಿರುದ್ಧ ಯಾವುದೇ ಬೇಸರ ತೋರದೆ, ಪಕ್ಷಕ್ಕಾಗಿಯೇ ದುಡಿಯುತ್ತೇನೆ ಎನ್ನುವ ಮೂಲಕ ಪ್ರಬುದ್ಧತೆ ಮೆರೆದವರು ತೇಜಸ್ವಿನಿ ಅನಂತ್ ಕುಮಾರ್. ಪತಿ ಕೇಂದ್ರದ ಮಾಜಿ ಸಚಿವ ದಿ. ಅನಂತ್ ಕುಮಾರ್ ಅವರಂತೆ ಬಿಜೆಪಿಯ ಪರವಾಗಿಯೇ ಪ್ರಚಾರ ಮಾಡುತ್ತೇನೆ ಎಂದವರು ಅವರು.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಆದರೆ ಗುರುವಾರ ಅವರು ಮಾಡಿದ ಟ್ವೀಟ್ ಅವರಿಗೂ ತೀವ್ರ ಬೇಸರವಾಗಿದೆ ಎಂಬ ಸತ್ಯವನ್ನು ಅರ್ಥಮಾಡಿಸಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅವರೇ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂದು ಅವರ ಅಭಿಮಾನಿಗಳು ಪ್ರಚಾರವನ್ನೂ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ದೊರಕಿತು. ಇದರಿಂದ ತೇಜಸ್ವಿನಿ ಅವರಿಗೆ ಆಘಾತವಾದರೂ ಅವರು ತೇಜಸ್ವಿ ಸೂರ್ಯ ಅವರನ್ನು ಆಶೀರ್ವದಿಸಿ, ಅವರ ಬಗ್ಗೆ ಒಳ್ಳೆಯ ಮಾತನ್ನಾಡಿ ತಮ್ಮ ವ್ಯಕ್ತಿತ್ವಕ್ಕೆ ಮತ್ತಷ್ಟು ಘನತೆ ಬರುವಂತೆ ನಡೆದುಕೊಂಡರು.

      ಬಿಜೆಪಿ ಅವರನ್ನು ರಾಜ್ಯ ಉಪಾಧ್ಯಕ್ಷೆಯನ್ನಾಗಿ ನೇಮಿಸಿದೆಯಾದರೂ, ಪತಿಯ ಕ್ಷೇತ್ರದಿಂದ ನಿಂತು ಗೆದ್ದು, ಆ ಕ್ಷೇತ್ರದ ಜನರ ಸೇವೆ ಮಾಡುವ, ಅನಂತ್ ಕುಮಾರ್ ಅವರು ಉಳಿಸಿಕೊಂಡು ಬಂದ ಪರಂಪರೆಯನ್ನು ಮುಂದುವರಿಸುವ ಆಸೆ ಮಾತ್ರ ಈಡೇರಲಿಲ್ಲ.

      "ಮೋಡ ಮುರಿದರೆ ಮಳೆ ಬರುತ್ತದೆ. ಮಣ್ಣು ಮುರಿದರೆ ಹೊಲವಾಗುತ್ತದೆ. ಬೆಳೆ ಮುರಿದರೆ ಇಳುವರಿ ಬರುತ್ತದೆ. ಬೀಜ ಮುರಿದರೆ ಗಿಡವಾಗುತ್ತದೆ. ನಮಗೆ ನೋವಾಗುವ ಸನ್ನಿವೇಶ ಎದುರಾದರೆ ಮುಂದೆಲ್ಲೋ ದೇವರು ನಮ್ಮ ಪ್ರಗತಿಗಾಗಿ ಅವಕಾಶ ನೀಡಿದ್ದಾನೆ ಎಂದರ್ಥ. ಶಾಂತಿಯಿಂದ ಬದುಕುವುದನ್ನು ಕಲಿಯೋಣ" ಎಂದು ತೇಜಸ್ವಿನಿ ಟ್ವೀಟ್ ಮಾಡಿದ್ದರು.

      ಈ ಅವರ ಈ ಭಾವುಕ ಟ್ವೀಟ್ ಗೆ ಅವರ ಅಭಿಮಾನಿಗಳು ಅಷ್ಟೇ ಭಾವುಕತೆ, ಅಕ್ಕರೆಯಿಂದ ಸಾಂತ್ವನ ಹೇಳಿದ್ದಾರೆ.

      Array

      ಇದು ದುಷ್ಟರ ವಿರುದ್ಧದ ಹೋರಾಟ

      ಸತ್ಯ ಮೇಡಂ, ದೇವರು ನಿಮಗೆ ಬೇರೆಯದೇ ದಾರಿಯನ್ನು ಹುಡುಕಿದ್ದಾನೆ. ನಾವು ಅನಂತ್ ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮಗೆ ದೇವರು ಶಕ್ತಿ, ಆರೋಗ್ಯ ನೀಡಲಿ. ನಮಗೆಲ್ಲರಿಗೂ ನಮ್ಮದೇ ಆದ ಕರ್ತವ್ಯವಿದೆಯಲ್ಲ, ಆದ್ದರಿಂದ ನೀವೂ ಪ್ರಚಾರದಲ್ಲಿ ಭಾಗಿಯಾಗಿ. ಈ ಲೋಕಸಭೆ ಚುನಾವಣೆ ದುಷ್ಟರ ವಿರುದ್ಧ ಶಿಷ್ಟರ ಹೋರಾಟ. ಅದಕ್ಕೆ ನೀವೂ ಕೈಜೋಡಿಸಿ- ರಾಜೀವ್ ಚಧಾ

      ನೀವು ಸರಿಯಾದ ದಾರಿಯಲ್ಲಿದ್ದೀರಾ

      ನಿಮ್ಮ ಮೇಲಿನ ಅತ್ಯಂತ ಗೌರವದಿಂದ ಹೇಳುತ್ತಿದ್ದೇನೆ. ನಮ್ಮ ಗುರಿಯೇನಿದ್ದರೂ ಪಕ್ಷಕ್ಕೆ ಮತ್ತು ದೇಶಕ್ಕೆ ಕೊಡುಗೆ ನೀಡುವುದು. ಒಬ್ಬರ ವೈಯಕ್ತಿಕ ಬೆಳವಣಿಗೆ ಬಗ್ಗೆ ಚಿಂತಿಸುವುದು ಬೇಡ. ನಾವು ನಿಸ್ವಾರ್ಥಿಗಳಾಗಿರುವಾಗ ನಮಗೆ ನೋವಾಗುವ ಪರಿಸ್ಥಿತಿ ಬರುವುದಿಲ್ಲ. ನೀವು ಸರಿಯಾದ ಹಾದಿ ತುಳಿಯುತ್ತಿದ್ದೀರಿ. ದೇವರು ನಿಮಗೆ ಆಶೀರ್ವದಿಸಲಿ- ಶ್ರೀಧರ್

      ನಿಮ್ಮಿಂದ ಅನಂತ್ ಕುಮಾರ್ ಕನಸು ನನಸಾಗಲಿ

      ಗ್ರೇಟ್ ಮೆಸೇಜ್ ಮೇಡಂ. ಅನಂತ್ ಕುಮಾರ್ ಅವರ ಕನಸು ನಿಮ್ಮಿಂದ ಈಡೇರಲಿ ಎಂಬುದು ನಮ್ಮ ಆಸೆ. ಇದು ಮೊದಲ ಹೆಜ್ಜೆ ಅಷ್ಟೆ. ನೀವು ನಿಮ್ಮ ಪ್ರಬುದ್ಧತೆ ತೋರಿದ್ದೀರಿ. ಹಾಗೆಯೇ ನಿಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುವಂತಾಗಲಿ- ಸಂಜಯ್ ಐ

      ರಾಜಕಾರಣದಲ್ಲಿ ನಂಬಿಕೆ ಬಂದಿದ್ದು ನಿಮ್ಮಿಂದ

      ನಮಗೆಲ್ಲ ರಾಜಕೀಯ ಕ್ಷೇತ್ರದ ಬಗ್ಗೆ ಇದ್ದ ಕೆಟ್ಟ ಭಾವನೆಯನ್ನು ತೊಡೆದು ಹಾಕಿದ್ದು ನೀವು. ನಿಮ್ಮಂಥ ಬೆರಳೆಣಿಕೆಯ ರಾಜಕಾರಣಿಗಳಿಂದ ನಮಗೆ ರಾಜಕೀಯದ ಮೇಲೆ ನಂಬಿಕೆ ಬಂದಿದೆ. ನಾವೆಲ್ಲ ನಿಮ್ಮೊಂದಿಗಿದ್ದೇವೆ- ಮೀನಾಕ್ಷಿ ದೇವಿ

      ಎಲ್ಲರಿಗೂ ಅಧಿಕಾರ ಬೇಕೆಂದರೆ ಹೇಗೆ?

      Sometimes ನಮ್ಮ expectations ನಡೆಯದೆ ಇರಬಹುದು!! ಹಾಗಂತ ಎಲ್ಲರಿಗೂ ಅಧಿಕಾರನೆ ಬೇಕು ಅಂದರೆ ಹೇಗೆ!! ನಾವು ದೇಶಕ್ಕೆ ಏನಾದರೂ ಮಾಡಬೇಕು ಅಂತ ಯೋಚನೆ ಮಾಡಿದಾಗ ಮಾತ್ರ ಬದಲಾವಣೆ ಸಾಧ್ಯ-ಅನಿತಾ ಪೂಜಾರಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+