Get Updates
Get notified of breaking news, exclusive insights, and must-see stories!

ಖ್ಯಾತ ವಿದ್ವಾಂಸ ಡಾ. ಕೆ.ಎಸ್. ನಾರಾಯಣಾಚಾರ್ಯ ನಿಧನ; ಸಿಎಂ ಬೊಮ್ಮಾಯಿ ಸಂತಾಪ

ಬೆಂಗಳೂರು, ನವೆಂಬರ್ 26: ಖ್ಯಾತ ಚಿಂತಕರಾದ ಕನಕನಹಳ್ಳಿ ಶ್ರೀನಿವಾಸ ದೇಶಿಕಾಚಾರ್ಯ ನಾರಾಯಣಾಚಾರ್ಯ (ಡಾ. ಕೆ.ಎಸ್.ಎನ್) ಶುಕ್ರವಾರ ಬೆಳಗಿನ ಜಾವ 2.06 ಗಂಟೆಗೆ ನಿಧನರಾಗಿದ್ದಾರೆ.

ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಜಲದರ್ಶಿನಿ ಲೇಔಟ್‌ನಲ್ಲಿರುವ ನಾರಾಯಣಚಾರ್ಯರ ನಿವಾಸದಲ್ಲಿ ಶುಕ್ರವಾರ ಸಂಜೆ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ.

ಡಾ.ಕೆ.ಎಸ್. ನಾರಾಯಣಾಚಾರ್ಯರು ಅಕ್ಟೋಬರ್ 30, 1933ರಂದು ಕನಕನಹಳ್ಳಿ (ಈಗಿನ ಕನಕಪುರ) ಯಲ್ಲಿ ಶ್ರೀನಿವಾಸ ದೇಶಿಕಾಚಾರ್ಯ ಮತ್ತು ರಂಗನಾಯಕಮ್ಮ ದಂಪತಿಗಳಿಗೆ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮತ್ತು ಯುವರಾಜ ಕಾಲೇಜಿನಲ್ಲಿ ಶಿಕ್ಷಣ ಪಡೆದರು.

Famous Scholar Dr. KS Narayanacharya Passed Away; CM Basavaraj Bommai Condolence

ಡಬ್ಲ್ಯೂ.ಬಿ. ಯೀಟ್ಸ್ ಮತ್ತು ಟಿ.ಎಸ್. ಎಲಿಯಟ್‌ರವರ ಕಾವ್ಯದ ಮೇಲೆ ಭಾರತೀಯ ಚಿಂತನೆಯ ಪ್ರಭಾವ ಎಂಬ ವಿಷಯ ಮಂಡನೆಗೆ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸರೂ, ಭಾರತೀಯ ಸಂಸ್ಕೃತಿಯ ಪ್ರವಚನ ಹರಿಕಾರರೂ ಆಗಿದ್ದ ಡಾ.ಕೆ.ಎಸ್. ನಾರಾಯಣಾಚಾರ್ಯರು ರಾಮಾಯಣಸಹಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ,ಅಗಸ್ತ್ಯ, ಶ್ರೀಮಾತೇ ಕುಂತಿ ಕರೆದಾಗ, ಚಾಣಕ್ಯ ನೀತಿ ಸೂತ್ರಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ವನದಲ್ಲಿ ಪಾಂಡವರು, ದಶಾವತಾರ ಇನ್ನೂ ಹಲವಾರು 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದರು.

ಕನ್ನಡದ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು. ತಮ್ಮ ಪ್ರವಚನಗಳು ಮತ್ತು ವಿವಿಧ ಮಾಧ್ಯಮಗಳ ಚರ್ಚೆಗಳಲ್ಲಿ ನಿರಂತರವಾಗಿ ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಆಧಿಕಾರಯುತವಾಗಿ ಮಾತನಾಡುತ್ತಿದ್ದ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ನಾರಾಯಣಚಾರ್ಯರು, ಕನ್ನಡ, ಸಂಸ್ಕೃತ, ತಮಿಳು, ಇಂಗ್ಲೀಷ್ ಭಾಷಾ ಪರಿಣಿತರಾಗಿದ್ದರು. ಡಾ.ಕೆ.ಎಸ್. ನಾರಾಯಣಾಚಾರ್ಯರ ನಿಧನವು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

Famous Scholar Dr. KS Narayanacharya Passed Away; CM Basavaraj Bommai Condolence

ಕನ್ನಡ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟ; ಸಿಎಂ ಬೊಮ್ಮಾಯಿ
ಖ್ಯಾತ ಚಿಂತಕರು, ಸುಪ್ರಸಿದ್ಧ ಲೇಖಕರು, ಮೇರು ವಿದ್ವಾಂಸರಾಗಿದ್ದ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಇಂದು ಬೆಳಗಿನ ಜಾವ ನಿಧನರಾಗಿದ್ದು, ಅತೀವ ದುಃಖ ತಂದಿದೆ. ಅವರು ರಾಷ್ಟ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು.

ಅವರ ನಿಧನವು ಕನ್ನಡ ಸಾರಸ್ವತ ಹಾಗೂ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕೃತಿಗಳ ಮೂಲಕ ಸದಾಕಾಲ ಅವರ ನೆನಪು ಸದಾಕಾಲ ಉಳಿಯಲಿ ಮತ್ತು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ದತ್ತಾತ್ರೇಯ ಹೊಸಬಾಳೆ ಸಂತಾಪ
ಸುಪ್ರಸಿದ್ಧ ಲೇಖಕರೂ, ಮೇರು ವಿದ್ವಾಂಸರೂ, ಹಿಂದುತ್ವ - ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರೂ ಆಗಿದ್ದ ಪ್ರೊ.ಕೆ.ಎಸ್. ನಾರಾಯಣಾಚಾರ್ಯರ ನಿಧನ ನಾಡಿಗೆ ಅತೀವ ದುಃಖ ತಂದಿದೆ. ಅವರ ಮರಣದಿಂದಾಗಿ ವಿದ್ವತ್ ಲೋಕಕ್ಕಷ್ಟೇ ಅಲ್ಲ, ಸಾಮಾನ್ಯ ಜನತೆಗೂ ಅಪಾರ ನೋವು ಹಾಗೂ ನಷ್ಟ ಉಂಟಾಗಿದೆ.

ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದು, ಅವುಗಳ ಬಗ್ಗೆ ಆಗ್ರಹದಿಂದ ಅಧಿಕಾರಪೂರ್ವಕವಾಗಿ ಹೇಳುತ್ತಿದ್ದ ಆಚಾರ್ಯರ ನಿಧನಕ್ಕೆ ತೀವ್ರ ಸಂತಾಪಗಳು. ಪರಮಾತ್ಮ ಎಲ್ಲರಿಗೂ ನೋವನ್ನು ಭರಿಸುವ ಶಕ್ತಿಯನ್ನೂ ದಿವಂಗತರಿಗೆ ಸದ್ಗತಿಯನ್ನೂ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದಾರೆ.

ರಾಷ್ಚ್ರಭಕ್ತಿ ಮತ್ತು ಸಂಸ್ಕೃತಿಗಳ ಆರಾಧಕ

ಹಿರಿಯ ವಿದ್ವಾಂಸರು ಮತ್ತು ಸುಪ್ರಸಿದ್ಧ ಲೇಖಕರೂ ಆಗಿದ್ದ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರೊ। ಕೆ.ಎಸ್. ನಾರಾಯಣಾಚಾರ್ಯ ಅವರು ಹಿಂದುತ್ವ ಮತ್ತು ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರಾಗಿದ್ದರು. ಅವರ ನಿಧನವು ಅತ್ಯಂತ ಬೇಸರದ ವಿಚಾರ. ಇದರಿಂದ ಕೇವಲ ವಿದ್ವತ್ ಲೋಕಕ್ಕಷ್ಟೇ ಅಲ್ಲ, ಸಾಮಾನ್ಯ ಜನತೆಗೂ ಅಪಾರ ನೋವು ಹಾಗೂ ನಷ್ಟ ಉಂಟಾಗಿದೆ. ರಾಷ್ಚ್ರಭಕ್ತಿ ಮತ್ತು ಸಂಸ್ಕೃತಿಗಳ ಆರಾಧಕರಾಗಿದ್ದು ಅವುಗಳ ಬಗ್ಗೆ ಅಧಿಕಾರಪೂರ್ವಕವಾಗಿ ಮಾರ್ಗದರ್ಶನ ನೀಡುತ್ತಿದ್ದರು. ಅವರ ಕುಟುಂಬ, ಬಂಧುವರ್ಗ, ಅಭಿಮಾನಿಗಳಿಗೆ ದೇವರು ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ವಿದ್ವಾಂಸ ಶೆಲ್ವಪಿಳ್ಳೈ ಅಯ್ಯಂಗಾರ್ ಸಂತಾಪ
ಓಂ ನಮೋ ನಾರಾಯಣಾಯ... ಅತ್ಯಂತ ಶ್ರೇಷ್ಠ ವಿದ್ವಾಂಸರೂ, ಲೇಖಕರು, ಭಾರತೀಯ ತತ್ವ ಶಾಸ್ತ್ರಗಳ ನಿಷ್ಣಾತರು, ವೇದ ವಾರಿಧಿಗಳು, ವೇದಾಂತದ ಅನುಪಮ ಸಾಧಕರು, ಅನುಷ್ಠಾನ ಪರರು, ನಿರ್ಭೀತಿಯಿಂದ ಸಾವಿರ ಜನದ ಮಧ್ಯದಲ್ಲೂ ಸತ್ಯ ಹೇಳುತ್ತಿದ್ದ ಮಹಾತ್ಮರು, ಭಾರತದ ರಾಷ್ಟ್ರೀಯವಾದಿಗಳು, ಇಂಗ್ಲೀಷ್ ಭಾಷೆಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು, ಭರತ ಖಂಡದ ಜನರಿಗೆ ಮತ್ತು ಸಾವಿರಾರು ಪಾಶ್ಚಿಮಾತ್ಯರಿಗೆ ಸ್ಫೂರ್ತಿಯಾಗಿದ್ದವರು ಆದ ಶ್ರೀ ಕೆ.ಎಸ್. ನಾರಾಯಣಾಚಾರ್ಯರು ಇಂದು ಬೆಳಿಗ್ಗೆ ಎರಡು ಗಂಟೆಯ ಸುಮಾರಿಗೆ ಆಚಾರ್ಯ ತಿರುವಡಿಗಳ ಮೂಲಕ ಶ್ರೀಮನ್ನಾರಾಯಣ ಸಾಯುಜ್ಯ ಸೇರಿದ್ದಾರೆ.

ಇವರಿಗೆ ರಾಮಾಯಣಾಚಾರ್ಯ ಎಂದೆ ಹೆಸರು. ಶ್ರೀ ವಾಲ್ಮೀಕಿ ರಾಮಾಯಣದ ಸರ್ವಸ್ವ ಇವರ ಕಣ ಕಣದಲ್ಲಿ ಸೇರಿತ್ತು. ಮಹಾಭಾರತ, ಭಗವದ್ಗೀತೆ, ಪಾದುಕಾಸಹಸ್ರ, ಶ್ರೀ ರಾಮಾನುಜರ ನವಗ್ರಂಥಗಳು, ಪುರಾಣಗಳು, ಇತರ ದಾರ್ಶನಿಕರ‌ ಗ್ರಂಥಗಳು ಇವರ ಅಧ್ಯಯನದ ಮತ್ತು ಪ್ರವಚನದ ಪ್ರಮುಖ ಆಕರಗಳಾಗಿದ್ದವು. ಶ್ರೀ ವೈಷ್ಣವ ಧರ್ಮದ ಸಕಲ ಆಚಾರ್ಯರ ಎಲ್ಲ ಗ್ರಂಥಗಳು ಇವರಿಗೆ ಕರತಲಾಮಲಕವಾಗಿದ್ದವು. ಆಂಗ್ಲಭಾಷೆಯಲ್ಲಿ ಅಪೂರ್ವ ಪ್ರೌಢಿಮೆ ಹೊಂದಿದ್ದು ಎಲ್ಲ ರೀತಿಯ ಆಂಗ್ಲ ಸಾಹಿತ್ಯ ಓದಿದ್ದರು.

ಭಾರತದ ಆತ್ಮವನ್ನು ಅದರ ಮೂಲ ಸಿದ್ಧಾಂತಗಳನ್ನು ಋಷಿಗಳ ವಾಣಿಯೊಂದಿಗೆ ಉದ್ಧರಿಸಿ ಭಯವಿಲ್ಲದೆ ಸಿದ್ಧಾಂತ ಪ್ರತಿಪಾದನೆ ಮಾಡುತ್ತಿದ್ದರು. ನಾವೂ ಸಹ ಅವರ ಪ್ರವಚನಗಳನ್ನು ಕೇಳುತ್ತಲೇ ಬೆಳೆದವು ಎಂದು ವಿದ್ವಾಂಸ ಶೆಲ್ವಪಿಳ್ಳೈ ಅಯ್ಯಂಗಾರ್ ಸ್ಮರಿಸಿದ್ದಾರೆ.

Recommended Video

      New Zealand ವಿರುದ್ಧದ ಪಂದ್ಯದಲ್ಲಿ Pakistan ಬಗ್ಗೆ ಕೂಗು | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+