ಬೆಂಗಳೂರು RRTS vs ನಮ್ಮ ಮೆಟ್ರೋ: ತುಮಕೂರು ಮತ್ತು ಅದರಾಚೆಗೆ ಪ್ರಯಾಣಿಕರಿಗೆ ಯಾವ ಸಾರಿಗೆ ವ್ಯವಸ್ಥೆ ಬೆಸ್ಟ್?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಷ್ಟು ದಿನ ನಮ್ಮ ಮೆಟ್ರೋ ಜಾಲವನ್ನು ತುಮಕೂರು, ದೇವನಹಳ್ಳಿವರೆಗೆ ವಿಸ್ತರಣೆ ಮಾಡುವ ಸುದ್ದಿ ಕೇಳಿ ಬರುತ್ತಿತ್ತು. ಆದರೆ ಈಗ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ (RRTS) ವ್ಯವಸ್ಥೆಯನ್ನು ಬೆಂಗಳೂರಿನ ಸುತ್ತಮುತ್ತಲಿನ 5 ಪ್ರದೇಶಗಳಿಗೆ ವಿಸ್ತರಣೆ ಮಾಡುವ ವಿಚಾರ ಮುನ್ನೆಲೆಗೆ ಬಂದಿದೆ. ಹಾಗಾದರೆ ಈ 'ನಮ್ಮ ಮೆಟ್ರೋ' ಮತ್ತು 'ವಂದೇ ಮೆಟ್ರೋ' (Vande Metro/Namo Bharat Train) ಅಂತಲೂ ಕರೆಯುವ ಆರ್ ಆರ್ ಟಿಎಸ್ ಸಾರಿಗೆ ನಡುವಿನ ವ್ಯತ್ಯಾಸವೇನು? ಯಾವುದು ದೈನಂದಿನ ಸಂಚಾರಕ್ಕೆ ಉತ್ತಮ. ಮೆಟ್ರೋ ಜಾಗದಲ್ಲಿ RRTS ಕಾರಿಡಾರ್ ನಿರ್ಮಾಣವೇ ಸೂಕ್ತ ಎಂಬ ಕೂಗು ಕೇಳಿ ಬರುವುದು ಏಕೆ? ಎಂಬ ಮಾಹಿತಿ ಇಲ್ಲಿದೆ.
ಕೇಂದ್ರದ ಬಳಿ ಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರು-ತುಮಕೂರು ಸೇರಿದಂತೆ ಐದು ಪಟ್ಟಣಗಳಿಗೆ ಪ್ರಪ್ರಥಮ ಬಾರಿಗೆ ಬೆಂಗಳೂರಿನಿಂದ RRTS ರೈಲು ಕಾರಿಡಾರ್ ಸ್ಥಾಪನೆಗೆ ಸಹಕಾರ ಕೋರಿದ್ದಾರೆ. ಇದರ ಬೆನ್ನಲ್ಲೇ ಏನಿದು ಕ್ಷಿಪ್ರ ರೈಲು ಸಾರಿಗೆ ಎಂಬುದರ ಚರ್ಚೆ ಜೋರಾಗಿದೆ. ಬೆಂಗಳೂರು ಮೆಟ್ರೋಗಿಂತಲೂ ಈ ರೈಲು ಸಾರಿಗೆಯ ಪ್ರಯೋಜನ ಹೆಚ್ಚು ಎನ್ನಲಾಗಿದೆ.

ದೇಶದ ಮೊದಲ RRTS ಕಾರಿಡಾರ್ ಎಲ್ಲಿದೆ?
ದೇಶದಲ್ಲಿ ಮೊದಲ RRTS ರೈಲು ಕಾರಿಡಾರ್ ದೆಹಲಿ -ಮೀರತ್ ನಡುವೆ ಇದೆ. ಇದು ಸೆಮಿ ಹೈಸ್ಪೀಡ್ ರೈಲು ಕಾರಿಡಾರ್ ಆಗಿದ್ದು ಪ್ರತಿ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡುವ ಸಾಮರ್ಥ್ಯ ಇದೆ. ದೆಹಲಿಯಿಂದ ಮೀರತ್ ನಡುವಿನ ಸುಮಾರು ಸುಮಾರು 90 ಕಿಲೋ ಮೀಟರ್ ದೂರವನ್ನು ಈ ಕ್ಷಿಪ್ರ ರೈಲು ಕೇವಲ 60 ನಿಮಿಷಗಳಲ್ಲಿ ಕ್ರಮಿಸುತ್ತದೆ. ಈ ಮಾರ್ಗದಲ್ಲಿ ಕೇಲವ 16 ನಿಲ್ದಾಣಗಳಿವೆ. ಇದರಿಂದಾಗಿ ಪ್ರಯಾಣಿಕರಿಗೆ ವೇಗದ ಹಾಗೂ ಸುರಕ್ಷಿತ ಸೇವೆ ಸಿಕ್ಕಂತಾಗಿದೆ.
ಇಂಥದ್ದೇ ರೈಲುಗಳ ಕಾರಿಡಾರ್ ನಿರ್ಮಾಣ ಯೋಜನೆಗಳ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಕೇಂದ್ರದ ಮುಂದಿಟ್ಟಿದೆ. ಇನ್ನೂ ನಮ್ಮ ಮೆಟ್ರೋವನ್ನು ತುಮಕೂರಿನವರೆಗೆ ವಿಸ್ತರಣೆ ಮಾಡಬೇಕೆಂಬ ಪ್ರಸ್ತಾವನೆಗೆ ಕೆಲವರ ವಿರೋಧ ಇದೆ. ಏಕೆಂದರೆ ಬೆಂಗಳೂರು-ತುಮಕೂರು ಮಧ್ಯೆ ಸುಮಾರು 59 ಕಿಲೋ ಮೀಟರ್ ದೂರವಿದೆ. ಈ ಯೋಜನೆಗೆ ಸಂಬಂಧಿಸಿದಂಥೆ 1.26 ಕೋಟಿ ರೂ. ವೆಚ್ಚದ ಡಿಪಿಆರ್ ಸಹ ರಾಜ್ಯ ಸರ್ಕಾರದ ಕೈ ಸೇರಿದೆ.
ದಟ್ಟಣೆಯ ಬೆಂಗಳೂರು ಪ್ರದೇಶದಿಂದ ಹೊರವಲಯಕ್ಕೆ, ದೂರದ ಮತ್ತೊಂದು ಜಿಲ್ಲೆ/ಪಟ್ಟಣಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆ ಮೆಲ್ನೋಟಕ್ಕೆ ಅಭಿವೃದ್ಧಿ ಎಂಬಂತೆ ಕಾಣಿಸುತ್ತದೆ. ಆದರೆ ಅದಕ್ಕೆ ಸಾಕಷ್ಟು ಖರ್ಚು ವ್ಯಯಿಸಬೇಕಾಗುತ್ತದೆ. ಇದೊಂದು ದುಬಾರಿ ಯೋಜನೆ ಅಂತಲೂ ಕೆಲವರು ಹೇಳಿದ್ದಾರೆ. ನಗರದಲ್ಲಿ 1-2 ಕಿಲೋ ಮೀಟರ್ ಒಳಗೆನೇ ಮೆಟ್ರೋ ನಿಲ್ದಾಣ ಬರುತ್ತದೆ. ಅದೇ ರೀತಿ ತುಮಕೂರುವರೆಗೆ ಸುಮಾರು 25-28 ನಿಲ್ದಾಣಗಳನ್ನು ನಿರ್ಮಿಸಬೇಕಾಗುತ್ತದೆ. ಮೂಲಗಳ ಪ್ರಕಾರ ತುಮಕೂರುವರೆಗಿನ ಉದ್ದೇಶಿತ ಯೋಜನೆಯಡಿ 25 ನಿಲ್ದಾಣಕ್ಕೆ ಪ್ಲ್ಯಾನ್ ಹಾಕಿಕೊಳ್ಳಲಾಗಿತ್ತು. ಬಳಿಕ ಅದನ್ನು 16 ನಿಲ್ದಾಣಗಳಿಗೆ ಇಳಿಕೆ ಮಾಡಲಾಯಿತು. ನಮ್ಮ ಭಾಗದಲ್ಲಿ ನಿಲ್ದಾಣ ಇಲ್ಲದಿದ್ದ ಮೇಲೆ ಮೆಟ್ರೋ ಈ ಭಾಗಕ್ಕೆ ಯಾಕೆ? ಅಂತಲೂ ಸ್ಥಳೀಯರು ಆಕ್ಷೇಪ ಎತ್ತಿದ್ದಾರೆ.
ಮೆಟ್ರೋ ಮಾರ್ಗದ ನಿರ್ಮಾಣದ ವೆಚ್ಚ ಅಧಿಕ!
ಆರ್‌ಆರ್‌ಟಿಎಸ್ ಸಾರಿಗೆಗೆ ಹೋಲಿಕೆ ಮಾಡಿದರೆ ನಮ್ಮ ಮೆಟ್ರೋ ಕಾರಿಡಾರ್ ನಿರ್ಮಾಣದ ವೆಚ್ಚ ಅಧಿಕ ಎನ್ನಬಹುದು. ಹೆಚ್ಚಿನ ನಿಲ್ದಾಣಗಳನ್ನು ನಿರ್ಮಿಸಲು, ಎತ್ತರಿಸಿದ ಕಾರಿಡಾರ್, ಪ್ರಮುಖ ಪ್ರದೇಶಗಳಲ್ಲಿ ಭೂಮಿ ಸ್ವಾಧೀನ, ಮರಗಳ ಕಡಿತ ಇವೆಲ್ಲವು ಹೆಚ್ಚುವರಿ ಖರ್ಚಿನ ಜೊತೆಗೆ ಯೋಜನೆ ವಿಳಂಬಕ್ಕೆ ಅವಕಾಶ ಕಾರಣವಾಗುತ್ತವೆ.
ಇನ್ನೂ ಒಂದೂವರೆ ಎರಡು ಕಿಲೋ ಮೀಟರ್ ವ್ಯಾಪ್ತಿಯ ನಿಲ್ದಾಣಗಳಿಗೆ ಮೆಟ್ರೋ ನಿಲ್ಲಿಸುತ್ತಾ ಸಾಗಿದರೆ ಬಸ್‌ನಲ್ಲಿ ಒಂದು ಗಂಟೆಗೆ ಸೇರಬೇಕಾದ ಸ್ಥಳವನ್ನು ಎರಡು ಗಂಟೆಗೆ ತಲುಪಬೇಕಾಗುತ್ತದೆ. ಮೆಟ್ರೋ ರೈಲಿನ ಸಂಚಾರ ವೇಗ ಪ್ರತಿ ಗಂಟೆಗೆ 60 ಕಿಮೀಗೆ ಕುಸಿಯಬಹುದು. ಇದರಿಂದ ಯೋಜನೆಯ ಉದ್ದೇಶ ಸಾಕಾರವಾಗುವುದಿಲ್ಲ. ನಮ್ಮ ಮೆಟ್ರೋ ಸಾರಿಗೆ ಏನಿದ್ದರೂ ನಗರ ಒಳಗಡೆ ಸಂಚಾರಕ್ಕೆ ಉತ್ತಮ, ಅಂತರ ನಗರ ವಿಸ್ತರಣೆಗೆ ಅಲ್ಲ ಎಂಬ ವಾದಗಳು ನಮ್ಮ ಮುಂದಿವೆ.
RRTS ಯಾಕೆ ಬೆಸ್ಟ್?
ಸದ್ಯ ಬೆಂಗಳೂರಿನಿಂದ ಕನಕಪುರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ರಾಮನಗರವರೆಗೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಯೋಜನೆ ಅನುಷ್ಠಾನದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಕೇಂದ್ರ ಮುಂದಿಟ್ಟಿದೆ. ಇವುಗಳ ಜಾರಿಗೆ ಅನುಮತಿ ನೀಡುವಂತೆ ಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಕೋರಿದ್ದಾರೆ.
RRTS ಕಾರಿಡಾರ್ ನಲ್ಲಿ ನಮ್ಮ ಮೆಟ್ರೋದಂತೆ ಹೆಚ್ಚಿನ ನಿಲ್ದಾಣಗಳು ಬರುವುದಿಲ್ಲ. ಎತ್ತರಿಸಿದ ಕಾರಡಾರ್‌ಗಳು ಈ ಮಾರ್ಗದಲ್ಲಿ ಬರುವುದು ಅನುಮಾನ. ವೇಗದ ಸಾರಿಗೆ ಇದಾಗಿದ್ದರಿಂದ ಗಂಟೆಗೆ ನೂರು ಕಿಲೋ ಮೀಟರ್‌ಗೂ ಹೆಚ್ಚಿನ ವೇಗದಲ್ಲಿ ಸಂಚರಿಸಬಹುದಾಗಿದೆ. ತ್ವರಿತ ಸಾರಿಗೆ ಸೇವೆ ಲಭ್ಯವಾಗುವು ಕಾರಣಕ್ಕೆ ಅಂತರ್ ನಗರ ಸಂಪರ್ಕಕ್ಕೆ ಈ RRTS ಸೇವೆ ಸೂಕ್ತ ಎನ್ನಲಾಗುತ್ತದೆ. ಇದೆಲ್ಲ ಕಾರಣಗಳಿಂದ ನಮ್ಮ ಮೆಟ್ರೋಗಿಂತ ಆರ್‌ಆರ್‌ಟಿಎಸ್ ಕಾರಿಡಾರ್‌ಗೆ ತಗುಲುವ ವೆಚ್ಚ ಕಡಿಮೆ.
ಇದೆಲ್ಲ ಕಾರಣಗಳಿಂದ ನಗರದಲ್ಲಿ ಓಡಾಡಲು ನಮ್ಮ ಮೆಟ್ರೋ ಇರಲಿ. ಅಂತರ್ ಜಿಲ್ಲಾ ಸಂಚಾರಕ್ಕೆ RRTS ಸೂಕ್ತ. ಇದರಿಂದ ಸಂಚಾರ ದಟ್ಟಣೆ ಬೆಂಗಳೂರಿಗೆ ತ್ವರಿತವಾಗಿ ಬಂದು ಹೋಗಲು ಅನುಕೂಲವಾಗುತ್ತದೆ. ಇದರು ಟ್ರಾಪಿಕ್ ನಿಯಂತ್ರಣಕ್ಕೂ ಅನುಕೂಲ ಮಾಡಲಿದೆ. ಈ ಹಿಂದೆ ತುಮಕೂರಿನವರೆಗೆ ಮೆಟ್ರೋ ವಿಸ್ತರಣೆ ಸುದ್ದಿ ಕೇಳಿ ಬರುತ್ತಿದ್ದಂತೆ ಸಂಸದ ಪಿಸಿ ಮೋಹನ್ ಅವರು ದುಬಾರಿ ಮೆಟ್ರೋ ಯೋಜನೆ ಬದಲಾಗಿ ಆರ್‍ಆರ್‍ಟಿಎಸ್ ಯೋಜನೆ ಬೆಸ್ಟ್ ಎಂದು ತಿಳಿಸಿದ್ದರು.
ಬೆಳೆಯುತ್ತಿರುವ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ, ರೈಲ್ವೆ ಹಳಿ ಡಬ್ಲಿಂಗ್ ಕಾರ್ಯ, ಉಪನಗರ ರೈಲು ಯೋಜನೆಗಳು ಪ್ರಗತಿಯಲ್ಲಿವೆ. ಕೇಂದ್ರ ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ನಗರದಲ್ಲಿ ಆರ್‌ಆರ್‌ಟಿಎಸ್ ಯೋಜನೆಗಳ ಕೆಲಸಗಳು ಆರಂಭವಾಗುವ ಸಾಧ್ಯತೆ ಇದೆ.
ಕರ್ನಾಟಕ ಸರ್ಕಾರದ ಉದ್ದೇಶಿತ RRTS ಯೋಜನೆ
1. ಬೆಂಗಳೂರು-ಬಿಡದಿ-ಮೈಸೂರು (145 ಕಿಮೀ)
2. ಬೆಂಗಳೂರು-ಹಾರೋಹಳ್ಳಿ-ಕನಕಪುರ (60 ಕಿಮೀ)
3. ಬೆಂಗಳೂರು-ನೆಲಮಂಗಲ-ತುಮಕೂರು (60 ಕಿಮೀ)
4. ಬೆಂಗಳೂರು-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಚಿಕ್ಕಬಳ್ಳಾಪುರ (64 ಕಿಮೀ)
5. ಬೆಂಗಳೂರು-ಹೊಸಕೋಟೆ-ಕೋಲಾರ (65 ಕಿಮೀ)














Click it and Unblock the Notifications