Bengaluru Food: ಬೆಂಗಳೂರಿನಲ್ಲಿ ಮಿಸ್ ಮಾಡದೇ ಸವಿಯಲೇಬೇಕಾದ ತಿನಿಸುಗಳಿವು
ಬೆಂಗಳೂರು ಉದ್ಯೋಗ, ಉದ್ಯಾನವಕ್ಕೆ ಹೇಗೆ ಜನಪ್ರಿಯವಾಗಿದೆಯೋ ಇಲ್ಲಿನ ತಿನಿಸುಗಳಿಗೂ ಅಷ್ಟೇ ಫೇಮಸ್. ಅಂತರ್ ಜಿಲ್ಲೆ, ಅಂತರ್ ರಾಜ್ಯ ಮಾತ್ರವಲ್ಲದೇ ಇಲ್ಲಿ ದೇಶ ವಿದೇಶದ ಆಹಾರಗಳು ಕೂಡ ಸಿಗುತ್ತದೆ.
ಆದರೆ ದಕ್ಷಿಣ ಭಾರತದ ಆಹಾರಗಳು ಇಲ್ಲಿ ಸಖತ್ ಫೇಮಸ್. ಇಲ್ಲಿ ಸಿಗುವ ಅಪ್ಪಟ ದಕ್ಷಿಣ ಭಾರತದ ತಿನಿಸುಗಳ ರುಚಿಗೆ ಮರುಳಾಗದವರಿಲ್ಲ. ಬೆಂಗಳೂರಿಗೆ ಭೇಟಿ ನೀಡಿದವರು ಏನೇನು ತಿನಿಸುಗಳನ್ನು ಮಿಸ್ ಮಾಡದೇ ಸವಿಯಬೇಕು ಎನ್ನುವ ಚಿಕ್ಕಪಟ್ಟಿ ಇಲ್ಲಿದೆ ಓದಿ.

ಇಡ್ಲಿ
ಬೆಂಗಳೂರಿನಲ್ಲಿ ಸಿಗುವ ಇಡ್ಲಿ ದೇಶಕ್ಕೆ ಫೇಮಸ್. ಇಲ್ಲಿನ ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ಪುಡಿ ಇಡ್ಲಿ ಹೀಗೆ ವಿವಿಧ ಬಗೆಯ ಇಡ್ಲಿಗಳನ್ನು ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ಈ ತಿನಿಸು ನಿಮ್ಮನ್ನು ಹೋಟೆಲ್‌ಗಳತ್ತ ಸೆಳೆಯುತ್ತದೆ. ದಕ್ಷಿಣ ಭಾರತದ ಪ್ರಮುಖ ತಿನಿಸಾಗಿರುವ ಇಡ್ಲಿ ಕೇವಲ ಉಪಹಾರಕ್ಕೆ ಸೀಮಿತವಲ್ಲ. ಕೆಲವರು ದಿನದ ಮೂರು ಹೊತ್ತು ನೀಡಿದರೂ ಸಹ ಬಾಯಿ ಚಪ್ಪರಿಸಿ ಸವಿಯುತ್ತಾರೆ. ತೆಂಗಿನ ಕಾಯಿ ಚಟ್ನಿ ಜೊತೆಗೆ ಅಥವಾ ಸಾಂಬಾರಿನೊಂದಿಗೆ ಇಡ್ಲಿಯನ್ನು ಸವಿಯಬೇಕು. ಇನ್ನು ಇಡ್ಲಿ ಜೊತೆಗೆ ವಡೆ ಕೂಡ ಒಳ್ಳೆಯ ಕಾಂಬಿನೇಷನ್

ಮೈಸೂರು ಪಾಕ್
ಜಗತ್ತಿನ ಜನಪ್ರಿಯ ಸಿಹಿ ತಿನಿಸುಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಮೈಸೂರು ಪಾಕ್‌ಅನ್ನು ಬೆಂಗಳೂರಿಗೆ ಭೇಟಿ ನೀಡಿದಾಗ ಮಿಸ್ ಮಾಡದೇ ಸವಿಯಿರಿ. ಮೂಲತಃ ಮೈಸೂರಿನಲ್ಲಿ ಹುಟ್ಟಿಕೊಂಡ ಈ ತಿನಿಸು ಸಮೀಪದ ಬೆಂಗಳೂರಿನಲ್ಲಿ ಅತ್ಯಂತ ರುಚಿಕರವಾಗಿ ಸಿಗುತ್ತದೆ. ಹೀಗಾಗಿ ಒಮ್ಮೆ ಮೈಸೂರು ಪಾಕ್ ತಿಂದವರು ಮತ್ತೆ ಹುಡುಕಿ ಬಂದು ತಿನ್ನುತ್ತಾರೆ. ಸರಳ ವಿಧಾನದಿಂದ ತಯಾರಿಸುವ ಈ ಸಿಹಿ ತಿಂಡಿ ವಿದೇಶಿಗರಿಗೂ ಕೂಡ ಅಚ್ಚುಮೆಚ್ಚು. ಬೆಂಗಳೂರಿನ ಕೆಲವು ಬೇಕರಿ ಹೋಟೆಲ್‌ಗಳಲ್ಲಿ ಮೈಸೂರಿನಲ್ಲಿ ಸಿಗುವಂತಹ ರುಚಿಯಾದ ಮೈಸೂರು ಪಾಕ್ ದೊರೆಯುತ್ತದೆ. ಬೆಂಗಳೂರಿಗೆ ಭೇಟಿ ನೀಡಿದವರು ಮಿಸ್ ಮಾಡದೇ ಸಿಹಿ ತಿಂಡಿಯಲ್ಲಿ ಮೈಸೂರು ಪಾಕ್ ಮಿಸ್ ಮಾಡದೇ ಸವಿಯಿರಿ.

ಫಿಲ್ಟರ್ ಕಾಫಿ
ಬೆಂಗಳೂರಿನಲ್ಲಿ ಬಹುತೇಕ ಜನರ ಸ್ಟ್ರೆಸ್ ಬೂಸ್ಟರ್ ಕಾಫಿ. ಅದರಲ್ಲೂ ಫಿಲ್ಟರ್ ಕಾಫಿ..ಬೆಂಗಳೂರಿನಲ್ಲಿ ಚಹಾ ಹಾಗೂ ಕಾಫಿಯನ್ನು ಇಷ್ಟಪಡದವರಿಲ್ಲ. ಯಾವುದೇ ಒತ್ತಡವಿದ್ದರೂ ಒಂದು ಕಾಫಿ ಕುಡಿಯುತ್ತಿದ್ದಂತೆ ರಿಲೀಫ್ ಅನುಭವವಾಗುತ್ತದೆ. ಹೀಗಾಗಿ ಅನೇಕರಿಗೆ ದಿನಕ್ಕೆ ಹೆಚ್ಚು ಬಾರಿ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ತಾಜಾ ಕಾಫಿ ಬೀಜಗಳಿಂದ ಹಾಗೂ ಹಾಲಿನ ಸರಿಯಾದ ಮಿಶ್ರಣದಿಂದ ಸಿದ್ಧಗೊಳ್ಳುವ ಫಿಲ್ಟರ್ ಕಾಫಿಯನ್ನು ಬೆಂಗಳೂರಿಗೆ ಬಂದಾಗ ಮಿಸ್ ಮಾಡದೇ ಟ್ರೈ ಮಾಡಿ.

ಮದ್ದೂರು ವಡಾ
ಹೆಸರಿಗೆ ತಕ್ಕಂತೆ ಮಂಡ್ಯದ ಮದ್ದೂರು ವಡೆ ಬೆಂಗಳೂರಿನಲ್ಲೂ ಸಖತ್ ಫೇಮಸ್. ಇದೊಂದು ಸ್ನ್ಯಾಕ್ಸ್ ಆಗಿದ್ದು, ಸಂಜೆಯ ಕಾಫಿ ಅಥವಾ ಟಿ ಜೊತೆಗೆ ಸವಿಯಬೇಕು. ಬೆಂಗಳೂರಿನ ಕೆಲವು ಹೋಟೆಲ್‌ಗಳಲ್ಲಿ ಹಿಂದಿನ ಪಾಕಪದ್ಧತಿಯಲ್ಲೇ ಈ ಮದ್ದೂರು ವಡಾ ತಯಾರಿಸುತ್ತಾರೆ. ಬೆಂಗಳೂರು ಹಾಗೂ ಸಮೀಪದ ಜಿಲ್ಲೆಯವರಿಗೆ ಮಾತ್ರವಲ್ಲದೇ ಮದ್ದೂರು ವಡೆ ಎಲ್ಲರಿಗೂ ಇಷ್ಟವಾಗುವ ತಿನಿಸಾಗಿದೆ. ಈ ಮದ್ದೂರು ವಡೆಗೆ ಸುಮಾರು ನೂರು ವರ್ಷಗಳಷ್ಟು ಇತಿಹಾಸವಿದೆ.

ತಂದೂರಿ ಚಿಕನ್
ಕೇವಲ ವೆಜ್ ಮಾತ್ರವಲ್ಲದೇ ನಾನ್ ವೆಜ್ ಆಹಾರಗಳಿಗೂ ಬೆಂಗಳೂರು ಫೆಮಸ್. ಅದರಲ್ಲೂ ಮುಖ್ಯವಾಗಿ ತಂದೂರಿ ಚಿಕನ್. ಒಂದು ಸಂಪೂರ್ಣ ಕೋಳಿಗೆ ಮೊಸರಿನಿಂದ ಮಿಶ್ರಣ ಮಾಡಿದ ಮಸಾಲೆ ಸೇರಿಸಿ ಬೆಂಕಿಯಲ್ಲಿ ಸುಡುವ ಪಾಕಪದ್ಧತಿಯನ್ನು ತಂದೂರಿ ತಯಾರಿಸುವಲ್ಲಿ ಅನುಸರಿಸಲಾಗುತ್ತದೆ. ಬಿಸಿಬಿಸಿಯಾದ ತಂದೂರಿ ಚಿಕನ್‌ಅನ್ನು ಮಯಾನಿಸ್‌ನೊಂದಿಗೆ ಅದ್ದಿ ತಿನ್ನುತ್ತುದ್ದರೆ, ನಾನ್ ವೆಜ್ ಪ್ರಿಯರಿಗೆ ಕುಳಿತಲ್ಲೇ ಸ್ವರ್ಗವೆನಿಸುತ್ತದೆ. ಇಂತಹ ರುಚಿಕರವಾದ ತಂದೂರಿ ಚಿಕನ್ ಅನ್ನು ಬೆಂಗಳೂರಿಗೆ ತೆರಳಿದಾಗ ಮಿಸ್ ಮಾಡದೇ ಸವಿಯಿರಿ.

ಬೇಬಿ ಕಾರ್ನ್ ಮಂಜೂರಿ
ಮಂಜೂರಿಯಲ್ಲಿ ಅನೇಕ ವಿಧಗಳನ್ನು ನೀವು ಕಾಣಬಹುದು. ಬೆಂಗಳೂರಿನ ಹೋಟೆಲ್‌ಗಳಲ್ಲಿ ಎಲ್ಲಾ ರೀತಿಯ ಮಂಜೂರಿಗಳು ಲಭ್ಯವಿರುತ್ತದೆ. ಆದರೆ ಅದರಲ್ಲಿ ಮುಖ್ಯವಾಗಿ ಬೇಬಿ ಕಾರ್ನ್ ಮಂಜೂರಿ ಆಹಾರ ಪ್ರಿಯರಿಗೆ ಇಷ್ಟವಾಗುತ್ತದೆ. ಎಳೆ ಜೋಳವನ್ನು ಬಳಸಿಕೊಂಡು ಮಂಜೂರಿ ರೀತಿಯಲ್ಲಿ ತಯಾರಿಸುವ ಈ ಖಾದ್ಯವನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ.

ದೋಸೆ
ದಕ್ಷಿಣ ಭಾರತದ ತಿನಿಸುಗಳಲ್ಲಿ ಮತ್ತೊಂದು ಜನಪ್ರಿಯ ತಿನಿಸೆಂದರೆ ದೋಸೆ. ಬೆಂಗಳೂರಿನಲ್ಲಿ ವಿವಿಧ ಬಗೆಯ ದೋಸೆಗಳನ್ನು ಸವಿಯಬಹುದು.ಮಸಾಲೆ ದೋಸೆ, ಬೆಣ್ಣೆ ದೋಸೆ, ಸೆಟ್ ದೋಸೆ, ಪ್ಲೇನ್ ದೋಸೆ, ರಾಗಿ ದೋಸೆ, ಈರುಳ್ಳಿ ದೋಸೆ, ತರಕಾರಿ ದೋಸೆ, ಪಾಲಕ್ ದೋಸೆ, ಗೋದಿ ದೋಸೆ, ಅವರೆ ಕಾಳಿನ ದೋಸೆ, ತುಪ್ಪದ ದೋಸೆ ಹೀಗೆ ದೋಸೆಗಳಲ್ಲಿ ನೂರಾರು ರೀತಿಯ ವಿಧಗಳಿದ್ದು, ಬೆಂಗಳೂರಿಗೆ ಬಂದಾಗ ಮಿಸ್ ಮಾಡದೇ ದೋಸೆ ಸವಿಯಿರಿ

ಬಿರಿಯಾನಿ
ದೇಶದಲ್ಲಿ ಅಂತ್ಯಂತ ಹೆಚ್ಚು ಜನರು ಇಷ್ಟಪಡುವ ಹಾಗೂ ಅಂತ್ಯಂತ ಹೆಚ್ಚು ಮಾರಾಟವಾಗುವ ಖಾದ್ಯವೆಂದರೆ ಅದು ಬಿರಿಯಾನಿ. ವೆಜ್ ಬಿರಿಯಾನಿಗಿಂತಲೂ ನಾನ್ ವೆಜ್ ಬಿರಿಯಾನಿ ಬಲು ಜನಪ್ರಿಯ. ಬೆಂಗಳೂರಿನಲ್ಲೂ ಅಂತ್ಯಂತ ಹೆಚ್ಚು ಮಾರಾಟವಾಗುವ ಹಾಗೂ ಬೇಡಿಕೆಯಿರುವ ಖಾದ್ಯವೆಂದರೆ ಅದು ಬಿರಿಯಾನಿಯೇ. ಹೈದರಬಾದ್ ಬಿರಿಯಾನಿ, ಧಮ್ ಬಿರಿಯಾನಿ, ದೊಣ್ಣೆ ಬಿರಿಯಾನಿ, ಬ್ಯಾಂಬೂ ಬಿರಿಯಾನಿ, ನಾಟಿ ಶೈಲ್ ಬಿರಿಯಾನಿ, ಅಂಬೂರ್ ಬಿರಿಯಾನಿ, ಮಲಬಾರ್ ಬಿರಿಯಾನಿ ಹೀಗೆ ವಿವಿಧ ರೀತಿಯ ಬಿರಿಯಾನಿಯನ್ನು ನೀವು ಸವಿಯಬಹುದು.

ಬಿಸಿಬೇಳೆ ಬಾತ್
ಬೆಂಗಳೂರು ಎಂದಾಕ್ಷಣ ಬಿಸಿಬೇಳೆ ಬಾತ್ ಎನ್ನುವವರಿದ್ದಾರೆ. ಯಾಕೆಂದರೆ ಬೆಂಗಳೂರಿನ ಬಿಸಿಬೇಳೆ ಬಾತ್ ದೇಶದ ಮೂಲೆಮೂಲೆಗೂ ಜನಪ್ರಿಯತೆ ಪಡೆದಿದೆ. ಬೆಂಗಳೂರಿನ ಬೆಸ್ಟ್ ಆಹಾರಗಳಲ್ಲಿ ಪಟ್ಟಿಯಲ್ಲಿ ಬಿಸಿಬೇಳೆ ಬಾತ್ ಅಗ್ರಸ್ಥಾನ ಪಡೆಯುತ್ತದೆ. ಬಿಸಿಬೇಳೆ ಬಾತ್ ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಕ್ಕಿ, ಬೇಳೆ ಹಾಗೂ ತರಕಾರಿಗಳಿಂದ ತಯಾರಿಸುವ ಈ ಖಾದ್ಯ ಬೆಳೆಯುವ ಮಕ್ಕಳ ಹಾಗೂ ವಯಸ್ಸಾದವರ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಬೆಂಗಳೂರಿಗೆ ಬಂದವರು ಮಿಸ್ ಮಾಡದೇ ಬಿಸಿಬೇಳೆ ಬಾತ್ ಸವಿಯಿರಿ.












Click it and Unblock the Notifications