Breaking: ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ- ಕ್ಯಾನ್ಸರ್‍‌ಗೆ ಹೆದರಿ ಕುಟುಂಬವೇ ಆತ್ಮಹತ್ಯೆ!

ಬೆಂಗಳೂರು, ಆಗಸ್ಟ್ 18: ಬೆಂಗಳೂರಿನಲ್ಲಿ ಕ್ಯಾನ್ಸರ್‍‌ನಿಂದ ಬಳಲುತ್ತಿದ್ದ ವ್ಯಕ್ತಿಯ ಜೊತೆಗೆ ಹೆಂಡತಿ ಮತ್ತು ಪುಟ್ಟ ಬಾಲಕನು ನೇಣಿಗೆ ಶರಣಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹೇಶ್ ಮತ್ತು ಜ್ಯೋತಿ ಎಂಬ ದಂಪತಿ ಬಹಳ ಅನ್ಯೋನ್ಯವಾಗಿದ್ದರು. ಇಬ್ಬರಿಗೆ ಸುಮಾರು 6 ವರ್ಷದ ಮುದ್ದಾದ ಮಗನಿದ್ದನು. ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂಬಂತಿದ್ದ ಸಂಸಾರದಲ್ಲಿ ಅನಾರೋಗ್ಯದ ಬಿರುಗಾಳಿ ವೇಗವಾಗಿ ಬೀಸಿತ್ತು. ಮಹೇಶ್ ತೀವ್ರ ಹೊಟ್ಟೆ ನೋವು ಉಂಟಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಪರೀಕ್ಷಿಸಿದಾಗ ಮಹೇಶ್‌ಗೆ ಕ್ಯಾನ್ಸರ್ ಇರುವುದು ತಿಳಿದು ಬಂದಿದೆ.

ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ಮಹೇಶ್
ಮಹೇಶ್ ಕೋಣನಕುಂಟೆಯ ಎಸ್‌ಬಿಎಂ ಲೇಔಟ್ ನಲ್ಲಿ ವಾಸವಾಗಿದ್ದು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರು ಎಂದು ತಿಳಿದು ಬಂದಿದೆ. ಈತ ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ.

Family commits suicide in Bangalore due to cancer!

ಮಗನನ್ನು ಕೊಂದು ದಂಪತಿ ಆತ್ಮಹತ್ಯೆ?
ಮಹೇಶ್ ಮತ್ತು ಜ್ಯೋತಿ ಮೊದಲು ಮಗನ್ನು ಕತ್ತು ಹಿಸುಕಿ ಕೊಂದು ಬಳಿಕ ತಾವು ನೇಣಿಗೆ ಶರಣಾಗಿರುವ ಅನುಮಾನ ಪೊಲೀಸರಿಗೆ ಮೂಡಿದೆ. ಮಹೇಶ್ ಈ ಹಿಂದೆ ಕೂಡ ಹರ್ನಿಯಾ ಆಪರೇಷನ್ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ಮಹೇಶ್ ಆಗಿಂದಾಗ್ಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ.

Family commits suicide in Bangalore due to cancer!

ಸ್ನೇಹಿತ ನಾಗೇಶ್‌ಗೆ ಕರೆಯನ್ನು ಮಾಡಿದ್ದ ಮಹೇಶ್
ಸ್ನೇಹಿತ ನಾಗೇಶ್‌ಗೆ ಮೃತ ಮಹೇಶ್ ಕರೆಯನ್ನು ಮಾಡಿ ಆಸ್ಪತ್ರೆಯಿಂದ ರಿಪೋರ್ಟ್‌ ತರಲು ಹೇಳಿದ್ದ. ಅದರಂತೆ ನಾಗೇಶ್ ರಿಪೋರ್ಟ್‌ ತೆಗೆದುಕೊಂಡು ಮಹೇಶ್ ಗೆ ಫೋನ್ ಮಾಡಿದರು ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಇದರಿಂದ ಮನೆಯ ಬಳಿಗೆ ತೆರಳಿದಾಗ ಬಾಗಿಲನ್ನು ತೆರೆಯಲಿಲ್ಲ. ಕಿಟಕಿಯಲ್ಲಿ ಇಣುಕಿ ನೋಡಿದಾಗ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ.

ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಸದ್ಯ ಕೋಣನಕುಂಟೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಂಬಂಧಿಕರು ಮತ್ತು ನೆರೆಹೊರೆಯವರ ಬಳಿಯಲ್ಲೂ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇನ್ನು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದೂ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆತ್ಮಹತ್ಯೆಯ ನಿಖರ ಕಾರಣ ಸ್ಪಷ್ಟವಾಗಬೇಕಿದೆ.

Recommended Video

      KL Rahul ಮಾಡಿದ ತ್ಯಾಗದಿಂದ ಟೀಂ‌ ಇಂಡಿಯಾ ಗೆದ್ದಿದ್ದು ಹೇಗೆ ಗೊತ್ತಾ? | *Cricket | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+