ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಳು ಅತ್ಯಾಚಾರ ಕೇಸ್ ನಲ್ಲಿ 3 ತಿಂಗಳು ಜೈಲು ಕಂಡವರ ಗೋಳು

|
Google Oneindia Kannada News

ಬೆಂಗಳೂರು, ಮಾರ್ಚ್ 25: ಸುಳ್ಳು ಅತ್ಯಾಚಾರ ಪ್ರಕರಣದ ಆಘಾತದಿಂದ ಇನ್ನೂ ಹೊರಗೆ ಬರಲಾಗುತ್ತಿಲ್ಲ ಎಂದು ಸುಳ್ಳು ಆರೋಪ ಹೊತ್ತಿದ್ದ ಶ್ರೀನಾಥ್ ಎಂಬುವವರು ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅತ್ಯಾಚಾರವೊಂದರಲ್ಲಿ ಶ್ರೀನಾಥ್ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಕರೆತಂದಾಗ ಸಂತ್ರಸ್ತೆಯ ತಾಯಿ ಹೇಳಿಕೆಯಲ್ಲಿ ಆತ ಯಾರು ಎನ್ನುವುದೇ ನನಗೆ ಗೊತ್ತಿಲ್ಲ, ಆಕೆ ಕಾಣೆಯಾಗಿದ್ದಾಳೆ ಎಂದು ನಾನು ದೂರು ನೀಡಿದ್ದೆ. ಆದರೆ ಅವಳು ಈಗ ನಮ್ಮ ಸಂಬಂಧಿಕರ ಮನೆಯಲ್ಲಿದ್ದಾಳೆ ಈತನನ್ನು ನಾನು ನೋಡಿಯೇ ಇಲ್ಲ ಎಂದು ಹೇಳಿದ್ದಾರೆ.

ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ

17 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಶ್ರೀನಾಥ್ ಅವರನ್ನು ಬಂಧಿಸಲಾಗಿತ್ತು. ಮೊಬೈಲ್ ಸ್ಟೋರ್‌ ಹೊಂದಿರುವಂತಹ 32 ವರ್ಷದ ವ್ಯಕ್ತಿ ಗನ್ ರೀತಿ ಇರುವ ಲೈಟರ್‌ ಇಟ್ಟುಕೊಂಡು ಆಕೆಯನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ದೂರಾಗಿತ್ತು. ಆದರೆ ಈ ಆಘಾತದಿಂದ ಹೊರಬರಲಾಗುತ್ತಿಲ್ಲ ಎಂದು ವ್ಯಕ್ತಿ ತಿಳಿಸಿದ್ದಾರೆ.

False rape case Man says he is still in trauma

2018ರ ಜುಲೈ 23ರಂದು ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಶ್ರೀನಾಥ್ ಅವರನ್ನು ಯಲಹಂಕ ಪೊಲೀಸರು ಬಂಧಿಸಿದ್ದರು. ಪೋಕ್ಸೋ ಕಾಯಿದೆಯಡಿ ದೂರು ದಾಖಲಾಗಿತ್ತು.

ಕರ್ನಾಟಕದ ಮತದಾರರೆ, ನಿಮ್ಮ ಕ್ಷೇತ್ರ ಯಾವುದು? ಕಳೆದ ಬಾರಿ ಗೆದ್ದವರು, ಸೋತವರು ಯಾರು?

ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಶ್ರೀನಾಥ್ ಅವರನ್ನು ನಾನು ನೋಡಿಲ್ಲ, ಅವರು ಯಾರೂ ಎಂದೇ ನನಗೆ ಗೊತ್ತಿಲ್ಲ, ನನ್ನ ಮಗಳಿಗೂ ಅವರ್ಯಾರು ಎಂದು ತಿಳಿದಿಲ್ಲ ಆಕೆಯ ಮೇಲೆ ಅತ್ಯಾಚಾರವೇ ಆಗಿಲ್ಲ ಎಂದು ಹೇಳಿದಾಗ ಎಲ್ಲರೂ ತಬ್ಬಿಬ್ಬಾಗಿದ್ದಾರೆ.

English summary
A 32 year old cellphone shopkeeper accussed of raping a minor girl by brandishing a gun shaped lighter and acwuitted by a local courtmonths later he is yet to overcome the trauma caused by the charges foisted against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X