ದೇವನಹಳ್ಳಿಯಲ್ಲಿ ಮಾನವ ಹಕ್ಕುಗಳ ಸಂಘಟನೆ ಹೆಸರಲ್ಲಿ 24 ಲಕ್ಷ ರೂಪಾಯಿ ಸುಲಿಗೆ, 9 ಮಂದಿ ಬಂಧನ

ದೇವನಹಳ್ಳಿ: ಮಾನವ ಹಕ್ಕುಗಳ ರಕ್ಷಣಾ ತಂಡದ ಸದಸ್ಯರೆಂದು ಹೇಳಿಕೊಂಡು ಸಾರ್ವಜನಿಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಒಂಬತ್ತು ಮಂದಿ ಆರೋಪಿಗಳ ಗ್ಯಾಂಗ್‌ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 14.60 ಲಕ್ಷ ರೂಪಾಯಿ ನಗದು, ಎರಡು ವಾಹನಗಳು ಮತ್ತು 13 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಕ್ಕಿಬಿದ್ದಿದ್ದೇಗೆ?

ಫೆಬ್ರವರಿ 13ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ 50 ವರ್ಷದ ವ್ಯಕ್ತಿಯೊಬ್ಬರು ದೇವನಹಳ್ಳಿಯ ಚಿನ್ನಗಾನಹಳ್ಳಿ ಬಳಿ ಮತ್ತೊಬ್ಬರಿಗೆ ನೀಡಲು 24 ಲಕ್ಷ ರೂಪಾಯಿ ನಗದು ಹಿಡಿದುಕೊಂಡು ನಿಂತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಗ್ಯಾಂಗ್, ತಮ್ಮ ಕಾರಿನ ಮೇಲೆ 'ಮಾನವ ಹಕ್ಕುಗಳ ರಕ್ಷಣಾ ಮತ್ತು ಭ್ರಷ್ಟಾಚಾರ ವಿರೋಧಿ ದಳ' ಎಂಬ ಬೋರ್ಡ್ ಹಾಕಿಕೊಂಡಿದ್ದರು.

Fake Human Rights

ಅಧಿಕಾರಿಗಳಂತೆ ವರ್ತಿಸಿದ ಈ ತಂಡದವರು "ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಎಲ್ಲಿಂದ ತಂದೆ? ದಾಖಲೆ ಎಲ್ಲಿದೆ?" ಎಂದು ಸಂತ್ರಸ್ತ ವ್ಯಕ್ತಿಯನ್ನು ತೀವ್ರವಾಗಿ ಬೆದರಿಸಿದ್ದಾರೆ. ಇದರಿಂದ ಆ ವ್ಯಕ್ತಿ ಭಯಬಿದ್ದಿದ್ದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಆ ಹಣದೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ.

ಬಂಧಿತರ ವಿವರ

ಬಂಧಿತರಲ್ಲಿ ಬ್ಯಾಂಕ್ ಉದ್ಯೋಗಿಯಿಂದ ಹಿಡಿದು ದಿನಗೂಲಿ ಕಾರ್ಮಿಕರವರೆಗೆ ವಿವಿಧ ವೃತ್ತಿಯವರಿದ್ದಾರೆ. ಖಾಸಗಿ ಬ್ಯಾಂಕ್ ಉದ್ಯೋಗಿ ಸಿ. ಕೃಷ್ಣಕುಮಾರ್ ರೆಡ್ಡಿ (50), ರಿಯಲ್ ಎಸ್ಟೇಟ್ ಏಜೆಂಟ್ ಎಸ್. ಅಹಮದ್ ಷರೀಫ್ (48), ವೇಣುಗೋಪಾಲ್ (49), ಸಂಪಂಗಿರಾಮ (47), ನಾರಾಯಣ ಸ್ವಾಮಿ (52), ಶಿವ ಕೆ.ವಿ (42), ಟಿ.ವಿ ಮುರುಗೇಶನ್ (65), ಮಲಯಂ ಲತೀಫ್ (53) ಮತ್ತು ವೆಂಕಟೇಶ್ (57).

ಸುಲಿಗೆಗೊಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ದೇವನಹಳ್ಳಿ ಪೊಲೀಸರು, ಒಂಬತ್ತು ಮಂದಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಇನ್ನೂ ಐವರು ಭಾಗಿಯಾಗಿರುವ ಮಾಹಿತಿ ಸಿಕ್ಕಿದ್ದು, ಅವರು ಸದ್ಯ ತಲೆಮರೆಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ನಕಲಿ ಸಂಘಟನೆಗಳ ಬಗ್ಗೆ ಎಚ್ಚರ

ಇತ್ತೀಚಿನ ದಿನಗಳಲ್ಲಿ ಇಂತಹ ನಕಲಿ ಬೋರ್ಡ್‌ಗಳನ್ನು ಹಾಕಿಕೊಂಡು ದರೋಡೆ ಮಾಡುವ ಗ್ಯಾಂಗ್‌ಗಳು ಸಕ್ರಿಯವಾಗಿದ್ದು, ಯಾರಾದರೂ ಅಧಿಕಾರಿಗಳೆಂದು ಹೇಳಿಕೊಂಡು ಬಂದರೆ ಮೊದಲು ಅವರ ಅಧಿಕೃತ ಗುರುತಿನ ಚೀಟಿ (ID Card) ಕೇಳಿ ಅಥವಾ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ. 'ಮಾನವ ಹಕ್ಕುಗಳ ರಕ್ಷಣೆ' ಎಂಬ ಹೆಸರಿನಲ್ಲಿ ಅನೇಕ ಖಾಸಗಿ ಎನ್‍ಜಿಒಗಳು (NGO) ಕಾರ್ಯನಿರ್ವಹಿಸುತ್ತವೆ. ಆದರೆ, ಅವರಿಗೆ ಯಾರನ್ನೂ ತಡೆದು ನಿಲ್ಲಿಸುವ, ಹಣ ವಶಪಡಿಸಿಕೊಳ್ಳುವ ಅಥವಾ ವಿಚಾರಣೆ ಮಾಡುವ ಯಾವುದೇ ಕಾನೂನುಬದ್ಧ ಅಧಿಕಾರ ಇರುವುದಿಲ್ಲ.

ಅಂತಹ ಅಧಿಕಾರ ಇರುವುದು ಕೇವಲ ಪೊಲೀಸರಿಗೆ ಮತ್ತು ಲೋಕಾಯುಕ್ತದಂತಹ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ. ಯಾರಾದರೂ ನಿಮ್ಮನ್ನು ಬೆದರಿಸಲು ಪ್ರಯತ್ನಿಸಿದರೆ, ಕೂಡಲೇ ಜನರ ಓಡಾಟವಿರುವ ಕಡೆಗೆ ಹೋಗಿ ಅಥವಾ ಸಹಾಯಕ್ಕಾಗಿ ಕೂಗಿ. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಇಂತಹ ನಕಲಿ ಅಧಿಕಾರಿಗಳು ಕಂಡುಬಂದಲ್ಲಿ ತಕ್ಷಣವೇ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+