• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಸ್ತಾನ್‌ಬುಲ್ ಗನ್ ನೋಡಿ ಏರ್ ಪೋರ್ಟ್ ಸಿಬ್ಬಂದಿಗೆ ನಡುಕ!

|
Google Oneindia Kannada News

ಬೆಂಗಳೂರು, ಜು. 28: ಇಸ್ತಾನ್‌ಬುಲ್‌ನಿಂದ ಬಂದ ಗನ್‌ಗಳನ್ನು ನೋಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿರುವ ಗನ್‌ಗಳನ್ನು ಪರಿಶೀಲನೆ ನಡೆಸಿದಾಗ ಆಟಿಕೆ ಗನ್ ಎಂದು ಎಂದು ಗೊತ್ತಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಇಸ್ತಾನ್‌ಬುಲ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಗೋ ಪಾರ್ಸೆಲ್ ಫ್ಲೈಟ್ ಬಂದಿತ್ತು. ಪಾರ್ಸಲ್ ಶಿಫ್ಟ್ ಮಾಡುತ್ತಿದ್ದ ಸಿಬ್ಬಂದಿ ಪಾರ್ಸಲ್ ಬಗ್ಗೆ ಅನುಮಾನಗೊಂಡಿದ್ದು, ಅದನ್ನು ತೆಗೆದು ನೋಡಿದ್ದಾರೆ. ಪಾರ್ಸಲ್‌ನಲ್ಲಿ ಗನ್‌ಗಳು ಇರುವುದು ಗೊತ್ತಾಗಿದ್ದು, ಟರ್ಮಿನಲ್ ಸಿಬ್ಬಂದಿ ಕೂಡಲೇ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪರಿಣಿತ ಭದ್ರತಾ ಸಿಬ್ಬಂದಿ ಇಸ್ತಾನ್‌ಬುಲ್‌ನಿಂದ ಬಂದಿದ್ದ ಗನ್‌ಗಳನ್ನು ಪರಿಶೀಲಿಸಿದ್ದಾರೆ.

   ಬೊಂಬೆ ಹೇಳುತೈತೆ ಹಾಡು ಹೇಳ್ತಾ ಬೊಮ್ಮಾಯಿಗೆ ವಿಶ್ ಮಾಡಿದ ಕುಟುಂಬ | Oneindia Kannada

   ಈ ವೇಳೆ ಇವೆಲ್ಲವೂ ನಕಲಿ ಗನ್ ಎಂಬುದು ಗೊತ್ತಾಗಿದೆ. ಮಷಿನ್ ಗನ್ ಹೋಲುವ ನಕಲಿ ಗನ್‌ಗಳನ್ನು ಪಾರ್ಸೆಲ್ ಮಾಡಿದವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಜತೆಗೆ ಕೊರಿಯರ್ ಮಾಡಿದವರ ವಿವರ ಸಂಗ್ರಹಿಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮುಂದಾಗಿದ್ದಾರೆ. ಅಂತೂ ನಕಲಿ ಗನ್‌ಗಳಿಂದ ಹೆದರಿದ್ದ ಏರ್‌ ಪೋರ್ಟ್ ಸಿಬ್ಬಂದಿ ನಿರಾತಂಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

   English summary
   Duplicate guns from Istanbul to the parcel have posed a threat to international airport staff know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X