ಮಿಂಚಿನ ನೋಂದಣಿಯಲ್ಲಿ ಮಿಂಚಿದ ಯುವಜನರು

ಬೆಂಗಳೂರು, ಏಪ್ರಿಲ್ 09: ಬಿಬಿಎಂಪಿಯು ಏಪ್ರಿಲ್ 8 ರಂದು ಮತದಾರರ ನೋಂದಣಿಗಾಗಿ ಮಿಂಚಿನ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿತ್ತು. ಅಭಿಯಾನದಲ್ಲಿ ಒಟ್ಟು 1,24,164 ಅರ್ಜಿಗಳು ಸ್ವೀಕೃತವಾಗಿದೆ.

ನಗರದ ಹೊರವಲಯದ ಬಹುತೇಕ ಮತಗಟ್ಟೆಗಳಲ್ಲಿ ನೋಂದಣಿ ವ್ಯವಸ್ಥೆ ಇಲ್ಲದೆ ಪರದಾಡುವಂತಾಯಿತು ಎಂದು ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು ದೂರಿವೆ. ನಗರದ 8,278 ಮತಗಟ್ಟೆಗಳಲ್ಲಿ ನೋಂದಣಿ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿತ್ತು.

ಕಳೆದ ಚುನಾವಣೆಯಲ್ಲಿ ಮತಗಟ್ಟೆಯಾಗಿ ಬಳಸಿಕೊಂಡಿದ್ದ ಎಲ್ಲ ಶಾಲೆಗಳಲ್ಲಿ ನೋಂದಣಿ ವ್ಯವಸ್ಥೆ ಮಾಡಿರಲಿಲ್ಲ. ಅನೇಕ ಮತಗಟ್ಟೆಗಳಲ್ಲಿ ನಿಂತು ಕಾರ್ಯನಿರ್ವಹಿಸಬೇಕಾಗಿದ್ದ ಅಧಿಕಾರಿಗಳು ಶಿಕ್ಷಕರಿಗೆ ಜವಾಬ್ದಾರಿ ಬಿಟ್ಟು ಹೋಗಿದ್ದರಿಂದ ಸಮಸ್ಯೆಯಾಯಿತು.

Failure in Minchina nondani campaign

ಆಂಗ್ಲ ಅರ್ಜಿಗಳಿಂದ ತೊಂದರೆ: ಹಲವು ಮತಗಟ್ಟೆಗಳಲ್ಲಿ ಇಂಗ್ಲಿಷ್ ನಲ್ಲೇ ಅರ್ಜಿಗಳು ಇದ್ದುದರಿಂದ ಕೆಲವರಿಗೆ ಓದಲು ಬಾರದೆ ಅಲ್ಲಿದ್ದವರ ಬಳಿ ಅರ್ಜಿಗಳನ್ನು ನೀವೇ ತುಂಬಿಸಿಕೊಡಿ ಎಂದು ಕೇಳುವಂತಾಯಿತು.

ಮಿಂಚಿದ ಯುವಕರು: ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡಿದ್ದು ವಿಶೇಷವಾಗಿದೆ. 19 ವರ್ಷ , 20 ವರ್ಷ ತುಂಬಿದರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿದವರು ಈ ಅವಕಾಶ ಬಳಸಿಕೊಂಡು ಅರ್ಜಿ ಸಲ್ಲಿಸಿದರು.

ಹಲವು ಕಾರಣಗಳಿಂದ ಮನೆ ಬದಲಾವಣೆ ಮಾಡಿದವರಿಗೂ ಇದು ನೆರವಾಯಿತು. ಮತಗಟ್ಟೆಗಳಲ್ಲಿ ನಿರೀಕ್ಷೆಯಷ್ಟು ಜನರು ಕಂಡುಬರದಿದ್ದರೂ ಅಭಿಯಾನದ ಬಗ್ಗೆ ಜನರು ಜಾಗೃತರಾಗಿರುವುದು ಕಂಡು ಬಂತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+