• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಛೆ, ಕನ್ನಡಿಗರಿಗೆ ಇದೆಂಥ ಅವಮಾನ? ಇಂಥ ಸೊಕ್ಕಿನ ಮಾತಿಗೆ ಏನೆನ್ನೋಣ?

|
   ಒಬ್ಬ ಮಹಿಳೆಯಿಂದ ಕನ್ನಡಕ್ಕೆ ಅವಮಾನ | ಫೇಸ್ ಬುಕ್ ನಲ್ಲಿ ಕನ್ನಡಿಗರು ಗರಂ

   ಬೆಂಗಳೂರು, ನವೆಂಬರ್ 16: ಕರ್ನಾಟಕದಲ್ಲಿದ್ದುಕೊಂಡು, ಕನ್ನಡದ ಬಗ್ಗೆ ತಾತ್ಸಾರ ತೋರುವವರಿಗೆ ಏನು ಮಾಡಬೇಕು? ಕುಡಿಯುವುದಕ್ಕೆ ಕರ್ನಾಟಕದ ನೀರು, ಸೇವಿಸೋಕೆ ಗಾಳಿ, ದುಡಿಯೋಕೆ ಇಲ್ಲಿಯದೇ ಕಂಪೆನಿ, ಆದರೆ ಕನ್ನಡ ಎಂದರೆ ಮುಖ ಸಿಂಡರಿಸುವ ದುರಹಂಕಾರ!

   ಶರ್ವಾಣಿ ಗೌಡ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡ ಅನುಭವವೊಂದು ಕರ್ನಾಟಕದಲ್ಲಿದ್ದುಕೊಂಡು ಕನ್ನಡ ಮಾತನಾಡದ ಅನ್ಯಭಾಷಿಕರನ್ನು ಕನ್ನಡಿಗರು ನೋಡುವ ದೃಷ್ಟಿಕೋನವನ್ನೇ ಬದಲಿಸುವಂತಿದೆ.

   ಕನ್ನಡಿಗರ ಮೇಲೆ ಹಿಂದಿ ಸವಾರಿ ಏಕೆ ಅಷ್ಟು ಸುಲಭವೆಂದರೆ...

   ಮಾರ್ಕೆಟಿಂಗ್ ಕಂಪೆನಿಯೊಂದರಲ್ಲಿ ವ್ಯವಹರಿಸುವುದಕ್ಕಾಗಿ ಶರ್ವಾಣಿ ಅವರು 'ನಮಸ್ತೆ' ಎಂಬ ಮಾತಿನಿಂದ ಸಂಭಾಷಣೆ ಆರಂಭಿಸಿದ್ದಾರೆ. ಆದರೆ ಅತ್ತೆಡೆಯಿಂದ ಮಾತನಾಡುತ್ತಿದ್ದ ಯುವತಿ, 'ಮ್ಯಾಡಂ, ಇಂಗ್ಲಿಷ್ ಆರ್ ಹಿಂದಿ ಪ್ಲೀಸ್' ಎಂದಿದ್ದಾರೆ. ಅದಕ್ಕೆ ಶರ್ವಾಣಿ ಅವರು, 'where from you are speaking?' ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ಎಂದು ಆಕೆ ಉತ್ತರಿಸಿದ್ದಾಳೆ. 'ಕ್ಷಮಿಸಿ, ನೀವು ಕನ್ನಡದಲ್ಲಿ ಮಾತನಾಡದ ಹೊರತು ನಾನು ನಿಮ್ಮೊಂದಿಗೆ ಮಾತನಾಡಲು ಸಾಧ್ಯವಿಲ್ಲ' ಎಂದು ಹೇಳಿ ಶರ್ವಾಣಿಯವರು ಸಂಪರ್ಕ ಕಡಿತಗೊಳಿಸಿದ್ದಾರೆ.

   ಹಿಂದಿ ಹೇರಿಕೆ ಮೆಟ್ಟಿ ನಿಲ್ಲಲು ನಾಲಕ್ಕು ಸೂತ್ರಗಳು!

   ನಂತರ ಅವರ ದೂರವಾಣಿ ಸಂಖ್ಯೆಗೆ ಮಾರ್ಕೆಟಿಂಗ್ ಕಂಪೆನಿಯ ಯುವತಿ ಸಂದೇಶವೊಂದನ್ನು ಕಳಿಸಿದ್ದಾಳೆ. ಕರ್ನಾಟಕದಲ್ಲಿದ್ದುಕೊಂಡು ಕನ್ನಡದ ಬಗ್ಗೆ ಕೀಳಾಗಿ ಮಾತನಾಡುವ ಆಕೆಯ ದುರಹಂಕಾರಕ್ಕೆ ಈ ಸಂದೇಶ ಒಂದು ಉದಾಹರಣೆ: "More than 50% of population in Bangalore can't speak Kannada. Do hell with your language" ಇದು ಆಕೆ ಕಳಿಸಿದ ಸಂದೇಶ. ಈ ಸಂದೇಶದ ಸ್ಕ್ರೀನ್ ಶಾಟ್ ಅನ್ನೂ ಶರ್ವಾಣಿ ಅವರು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

   ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ!

   ಕನ್ನಡ ಮಾಸದ ಶುಭ ಸಮಯದಲ್ಲಿ, ಎಲ್ಲೆಲ್ಲೂ ಕನ್ನಡ ತೇರು ಎಳೆದು ಸಂಭ್ರಮಿಸುತ್ತಿದ್ದೇವೆ. ಸಿರಿಗನ್ನಡಂ ಗೆಲ್ಗೆ ಎಂದು ಜೋರುದನಿಯಲ್ಲಿ ಕೂಗುತ್ತೇವೆ. ಬೆಂಗಳೂರಿನಲ್ಲಿದ್ದುಕೊಂಡೂ ಕನ್ನಡದ ಬಗ್ಗೆ ಅಭಿಮಾನವನ್ನು ತೋರದಿರುವ ಹಲವು ಅನ್ಯಭಾಷಿಕರ ಇಂಥ ಸೊಕ್ಕಿನ ಮಾತಿಗೆ ಏನೆನ್ನೋಣ?

   ಶರ್ವಾಣಿ ಗೌಡ ಅವರ ಸ್ಟೇಟಸ್ ನಲ್ಲೇನಿದೆ?

   "ಕನ್ನಡಿಗರೇ ಈ ದಿನ ಮಾರ್ಕೆಟಿಂಗ್ ಕಂಪನಿಯೊಂದರ ಜೊತೆಗೆ ವ್ಯವಹರಿಸಲು ಮಾತನಾಡಲು ನಾನು ನಮಸ್ತೇ ಎಂದು ಆರಂಭಿಸಿ ಕನ್ನಡದಲ್ಲಿ ಮಾತನಾಡಿದೆ.ಆಕೆ madam pl Hindi or English ಅಂದರು. ನಾನು where from you are speaking ಅಂದೆ ಆಕೆ ಬ್ಯಾಂಗಲೂರ್ ಅಂದರು ನಾನು ಕೇಳಿದೆ ಬೆಂಗಳೂರಲ್ಲಿ ಇದ್ದು ಕನ್ನಡ ಬರಲ್ವಾ ಕ್ಷಮಿಸಿ ನೀವು ಕನ್ನಡದಲ್ಲಿ ಮಾತನಾಡದ ಹೊರತು ನಾನು ನಿಮ್ಮೊಡನೆ ವ್ಯವಹರಿಸೊಲ್ಲ ಎಂದು ಸಂಪರ್ಕ ಕಡಿತಗೊಳಿಸಿದೆ ಅದಕ್ಕೆ ಆಕೆ ಕಳಿಸಿರುವ ಸಂದೇಶ ಇದು ಬೆಂಗಳೂರು ನಮ್ಮದೇ ನಾವಿರೋದು ನಿಷ್ಪ್ರಯೋಜಕ ಕ್ಷಮಿಸು ಕನ್ನಡಾಂಬೆ ಅವಳು ಕ್ಷಮೆ ಕೇಳೋಹಾಗೆ ಮಾಡಬೇಕು ನಾವು" ಎಂದು ಶರ್ವಾಣಿ ಗೌಡ ಅವರು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ.

   ಅವರನ್ನು ನೋಡುವ ದೃಷ್ಟಿ ಬದಲಾಗಬೇಕು

   "ಇಲ್ಲಿ ಕಮ್ಮಿ ಜಾಸ್ತಿ ಬರುದಿಲ್ಲ. ನಾವು ಕನ್ನಡ ಬರದವರನು ನೋಡುವ ದೃಷ್ಟಿ ಬದಲಾಗಬೇಕು .ಕನ್ನಡ ಬಂದಿಲ್ಲವಾದರೆ ಅವ್ನು ಕೋಟಿಬೆಲೆಯ ಮನೆ ಕಟ್ಟಿರಲಿ, ನಮ್ಮ ಊರಿಗೆ ಕೆಲಸವನ್ನು ಹುಡುಕಿಕೊಂಡು ಬಂದ ಭಿಕಾರಿ ತರ ನಾವು ಮಾತಾಡಬೇಕು.ಇದು ನಾವು ಮಂಗಳೂರಿನವರು ತುಳು ಭಾಷೆ ಬರದವರ ಹತ್ತಿರ ನಡೆದುಕೊಳ್ಳುವ ರೀತಿ. ಬೆಂಗಳೂರಿಗರಿಗೆ ಯಾಕೆ ಆಗಲ್ಲ? ಎಂದು ಶರ್ವಾಣಿ ಅವರ ಸ್ಟೇಟಸ್ ಗೆ ಪ್ರೇಮ್ ನಾಥ್ ಶೆಟ್ಟಿ ಎನ್ನುವವರು ಪ್ರತಿಕ್ರಿಯೆ ನೀಡಿದ್ದಾರೆ.

   ಆಕೆ ಹೇಳಿದ್ದು ಸರಿ!

   ಆಕೆ ಹೇಳಿದ್ದು ಸರಿ... ಮೊದಲು ನೀವು ಕನ್ನಡದವರು ಹೌದೇ ಅಲ್ಲವೇ ಎಂದು ಕೇಳಬೇಕು. ಬೆಂಗಳೂರಿನಲ್ಲಿರುವವ ಕನ್ನಡಿಗರಿಗೆಯೇ ಕನ್ನಡ ಬರುವುದಿಲ್ಲ. ಮೊದಲು ನಾವು ಕನ್ನಡ ಅಭ್ಯಾಸ ಮತ್ತು ಚಾಲನೆ ಮಾಡಬೇಕು. ಆಮೇಲೆ ಉಳಿದವರ ಕಥೆ ಎಂದು ಎ.ವಿ.ಚಿತ್ತರಂಜನ್ ದಾಸ್ ಎನ್ನವವರು ಕಮೆಂಟ್ ಮಾಡಿದ್ದಾರೆ.

   ಎಂಥ ಹೀನಾಯ ಸ್ಥಿತಿ!

   ಎಂಥ ವಿಚಿತ್ರ, ಎಂಥ ಹೀನಾಯ ಸ್ಥಿತಿಗೆ ನಮ್ಮ ಕನ್ನಡಿಗರು ತಲುಪಿಬಿಟ್ಟಿದ್ದಾರೆ! ಯಾಕಂದ್ರೆ ನಮ್ಮ ಕೆಲವು ಕನ್ನಡಿಗರ ಅಭಿಮಾನ ನೋಡಿ ತೂ ನಾಚಿಕೆ ಆಗ್ಬೇಕು!

   ನಮ್ಮ ತಾಯಿ ಭಾಷೆನಾ ಅವಮಾನ ಮಾಡಿ ಸಂದೇಶ ಕಳಿಸಿ ದುರಾಹಂಕಾರ ಮೆರೆದಿರುವ ಆಕೆಯ ವರ್ತನೆ ಬಗ್ಗೆ ಮಾತಾಡೋದು ಬಿಟ್ಟು ಆಕೆಯ ನಂಬರ್ ಯಾಕ್ ಹಾಕಿದಿರಾ? ಯಾಕ್ ಹಾಕಿಲ್ಲ ಅಂತ ಚರ್ಚೆ ಮಾಡುತ್ತಿದ್ದೇವಲ್ಲ! ನಿಜಕ್ಕೂ ನಮ್ಮಂತ ಭಾಷಾ ಅಭಿಮಾನ ಇಲ್ಲದ ಜನ ದೇಶದ ಯಾವ ರಾಜ್ಯದಲ್ಲೂ ಇಲ್ಲ... ಅದಕ್ಕೆ ಇವತ್ತು ನಮ್ಮನ್ನು ನಾಯಿಗಳ ಹಾಗೆ ನೋಡೋದು... ಇದಕ್ಕೆಲ್ಲ ಕಾರಣ ಅಭಿಮಾನ ಇಲ್ಲದ ಕೆಲವು ನಿಷ್ಪ್ರಯೋಜಕರು.. ಹಾಗಾದ್ರೆ ನಮ್ಮ ಭಾಷೆಯನ್ನು ಯಾರು ಬೇಕಾದ್ರೂ ಬೈಬೋದು ಏನ್ ಬೇಕಾದ್ರೂ ಅನ್ನಬಹುದು... ಅದು ಅಪರಾಧ ಅಲ್ಲ.. ಯಾಕಂದ್ರೆ ನಮ್ಮ ಭಾಷೆ ಒಂದು ಪವಿತ್ರವಾದ ವಿಷಯ ಅನ್ನೋದು ನಮಗೆ ಇನ್ನು ಅರ್ಥ ಆಗ್ಲಿಲ್ಲ... ಅಪರಾಧ ಮಾಡಿರುವವ್ರ ಫೋಟೋಗಳನ್ನು ರಸ್ತೆಯ ಕೆಲವು ಕಡೆ ಹಾಕಿರುತ್ತಾರೆ. ಹಾಗಾದ್ರೆ ಪಬ್ಲಿಕ್ ಅಲ್ಲಿ ಅವರ ಫೋಟೋ ಹಾಕೋದು ತಪ್ಪು ಅಂತ ಹೇಳ್ತಿರೇನು..?

   ಹೆಣ್ಣಿಗೆ ಅಲಂಕಾರ ಇದ್ರು ಪರ್ವಾಗಿಲ್ಲ ಅಹಂಕಾರ ಇರಬಾರದು.... ನಮ್ಮ ನಾಡಲ್ಲೇ ಇದ್ದು, ನಮ್ಮ ಅನ್ನ ತಿಂದು, ನಮ್ಮ ಭಾಷೆಯನ್ನು, ನಮ್ಮ ನುಡಿಯನ್ನು ಗೌರವಿಸದ ಯಾರೇ ಆದರೂ ಕನ್ನಡಿಗರ ಎಕ್ಕಡಕ್ಕೂ ಸಮ ಅಲ್ಲ. ಶರ್ವಾಣಿ ಗೌಡ ನಿಮ್ಮ ನಡೆಗೆ ನಮ್ಮ ಬೆಂಬಲ ಇದೆ ಎಂದು ರೂಪೇಶ್ ಎನ್ನುವವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   "More than 50% of population in Bangalore can't speak Kannada. Do hell with your language" this is a message by a non Kannadiga lady who resides in Bengaluru. She has sent this message to a Kannadiga for asking her to speak Kannada. Social media people in Facebook are opposing her arrogance continuously.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more