ಲಾಯರ್ ಜಗದೀಶ್ ಬಗ್ಗೆ ಸ್ಥಳೀಯರಿಂದ ಸ್ಫೋಟಕ ಮಾಹಿತಿ, ವಿಡಿಯೋ ವೈರಲ್!
ಬಿಗ್‌ಬಾಸ್ ಸ್ಪರ್ಧಿ ಹಾಗೂ ಲಾಯರ್ ಜಗದೀಶ್ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಲಾಯರ್ ಜಗದೀಶ್ ಅವರ ಕೆಲವೊಂದು ವಿಡಿಯೋಗಳು ವೈರಲ್ ಆಗುತ್ತಿದ್ದವು. ಈಚೆಗೆ ಅವರ ಮನೆಯ ಬಳಿಯೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಇದರ ನಡುವೆ ಲಾಯರ್ ಜಗದೀಶ್ ಅವರ ಮೇಲೆ ಯಾರು ಹಲ್ಲೆ ಮಾಡಿಸಿದ್ದಾರೆ ಎನ್ನುವುದಕ್ಕೆ ಹಲವರು ಬೇರೆ ಬೇರೆ ಕಾರಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಕೊಟ್ಟಿದ್ದರು. ಇದೀಗ ಲಾಯರ್ ಜಗದೀಶ್ ಅವರ ಮನೆಯ ಬಳಿ ಇರುವ ನಿವಾಸಿಗಳೇ ಜಗದೀಶ್ ಅವರ ಮೇಲೆ ಯಾವ ಕಾರಣಕ್ಕೆ ಹಲ್ಲೆಯಾಗಿದೆ. ಲಾಯರ್ ಜಗದೀಶ್ ಹಾಗೂ ಇಲ್ಲಿನ ನಿವಾಸಿಗಳೊಂದಿಗೆ ಆಗಿದ್ದ ಜಗಳದ ಬಗ್ಗೆ ವಿವರಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಕೊಡಿಗೆಹಳ್ಳಿ ಮೋರ್ ಜಂಕ್ಷನ್ ಸಮೀಪದಲ್ಲಿ ಅಣ್ಣಮ್ಮ ದೇವಿ ಪ್ರತಿಷ್ಠಾಪನೆ ಮಾಡುವ ವಿಚಾರವಾಗಿ ಸ್ಥಳೀಯರು ಹಾಗೂ ಲಾಯರ್ ಜಗದೀಶ್ ನಡುವೆ ಜಗಳವಾಗಿತ್ತು. ಶುಕ್ರವಾರ ತಡರಾತ್ರಿ ಈ ಜಗಳ ತಾರಕಕ್ಕೇರಿದೆ. ಕಳೆದ ಕೆಲವು ದಿನಗಳಿಂದ ಲಾಯರ್ ಜಗದೀಶ್ ಅವರು ಮಾತನಾಡಿದ್ದ ವಿಡಿಯೋಗಳು ಭಾರೀ ಸದ್ದು ಮಾಡಿದ್ದವು. ಕೆಲವೊಂದು ವಿಷಯದಲ್ಲಿ ಜಗದೀಶ್ ಅವರ ವರ್ತನೆಗೆ ಸಾರ್ವಜನಿಕ ವಲಯದಿಂದಲೂ ವಿರೋಧ ವ್ಯಕ್ತವಾಗಿತ್ತು. ಇದೀಗ ನೆನ್ನೆ ಲಾಯರ್ ಜಗದೀಶ್ ಮೇಲೆ ನಡೆದಿರುವ ಹಲ್ಲೆ ಹಾಗೂ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಮಾತನಾಡಿದ್ದು. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸ್ಥಳೀಯರು ಲಾಯರ್ ಜಗದೀಶ್ ಅವರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

ಲಾಯರ್ ಜಗದೀಶ್ ಬೆಂಗಳೂರಿನ ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿರುವ ಅಣ್ಣಮ್ಮ ದೇವಿ ದೇವಸ್ಥಾನ ಹಾಗೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಸ್ಥಳೀಯ ನಿವಾಸಿ ಪೃಥ್ವಿ ಎನ್ನುವವರು ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಪ್ರತಿ ವರ್ಷವೂ ಅಣ್ಣಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ವರ್ಷ ಅವರಿಗೆ ಏನು ಸಮಸ್ಯೆ ಆಗಿದೆ ಅಂತ ಗೊತ್ತಿಲ್ಲ. ಉದ್ದೇಶಪೂರ್ವಕವಾಗಿ ಕಾರ್ಯಕ್ರಮ ನಡೆಸುವುದಕ್ಕೆ ಅಡಚಣೆ ಉಂಟು ಮಾಡುತ್ತಿದ್ದರು. ಈ ಕಾರ್ಯಕ್ರಮವನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಅಂತ ಸೀನ್ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆರೋಪ ಮಾಡಿದ್ದಾರೆ.

ಟ್ರಾಫಿಕ್ ಜಾಮ್ ಮಾಡಿದ್ದರು: ಇನ್ನು ಲಾಯರ್ ಜಗದೀಶ್ ಅವರು ಇಲ್ಲಿ ಟ್ರಾಫಿಕ್ ಜಾಮ್ ಮಾಡಿದ್ದರು. ಇದರಿಂದ ಜನರಿಗೆ ಅವರ ಮೇಲೆ ಕೋಪ ಬಂದಿದೆ. ಜಗಳ ಬಿಡಿಸಲು ಬಂದವರ ಮೇಲೆಯೂ ಅವರು ಹಲ್ಲೆ ಮಾಡಿದ್ದಾರೆ. ಇನ್ನು ಅವರ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿರುವುದಕ್ಕೂ ಭಾರೀ ವಿರೋಧ ವ್ಯಕ್ತವಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಗುಂಡುಗಳು ಯಾರಿಗಾದರೂ ತಗುಲಿದ್ದರೆ ಪರಿಸ್ಥಿತಿ ಏನು ಅಂತ ಜನ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications