ಮೋದಿ ಮೋಡಿ: ದೊಡ್ಡಗೌಡ್ರ ಹೃದಯ ಗೆದ್ದ ಮೋದಿ

ಬೆಂಗಳೂರು, ಜೂ.24: ಜಾತ್ಯಾತೀತ ಜನತಾ ದಳದ ದಳಪತಿಗಳು ಅತ್ತ ಶ್ರೀಲಂಕಾಕ್ಕೆ ತೆರಳಿ ತಮ್ಮ ಮಧ್ಯೆ ಉದ್ಭವಿಸಿದ್ದ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಿಕೊಳ್ಳುವ ಯತ್ನದಲ್ಲಿದ್ದಾಗ ಇತ್ತ ಪಕ್ಷದ ಅಧಿನಾಯಕ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ ಅವರು ಪಕ್ಷದ ಮತ್ತೊಬ್ಬ ಸಂಸದ ಪುಟ್ಟರಾಜು ಅವರನ್ನು ಜತೆಗೂಡಿಸಿಕೊಂಡು ನವದೆಹಲಿಗೆ ತೆರಳಿದ್ದರು.

ಮೋದಿ ಮೋಡಿ: ನವದೆಹಲಿಯಲ್ಲಿ ಕಳೆದ ಶುಕ್ರವಾರ ಪ್ರಧಾನಿ ನರೇದ್ರ ಮೋದಿ ಅವರನ್ನು ಇಬ್ಬರೂ ನಾಯಕರು ಭೇಟಿಯಾಗಿದ್ದರು.

ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಶುಕ್ರವಾರದ ಭೇಟಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿಯ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಸುದೀರ್ಘ ಮಾತುಕತೆಯಲ್ಲಿ ತೊಡಗಿದ್ದ ಮೋದಿ ಅವರು ದೇವೇಗೌಡರ ಸಲಹೆಗಳನ್ನು ತದೇಕಚಿತ್ತದಿಂದ ಆಲಿಸಿದ್ದಾರೆ.

ಮೋದಿ ಅವರನ್ನು ಹತ್ತಿರದಿಂದ ನೋಡಿ ಅವರ ಸೌಜನ್ಯ ತಾಳ್ಮೆ ಮತ್ತು ವಿಷಯ ಗ್ರಹಿಕೆಯ ದೊಡ್ಡ ಗುಣ ದೇವೇಗೌಡರಿಗೆ ಖುಷಿ ತಂದಿದೆ ಎಂದು ಮಂಡ್ಯ ಸಂಸದ ಸಿಎಸ್ ಪುಟ್ಟರಾಜು ಈ ಇಬ್ಬರು ನಾಯಕರ ಭೇಟಿಯನ್ನು ವರ್ಣಿಸಿದ್ದಾರೆ.

ex-pm-hd-deve-gowda-mandya-mp-puttaraju-meet-pm-narendra-modi-june-20

ಇನ್ನು ಸ್ವತಃ ಪುಟ್ಟರಾಜು ಅವರು ತಮ್ಮ ಹೆಸರು ಹೇಳುತ್ತಾ, ಪರಿಚಯ ಮಾಡಿಕೊಳ್ಳಲು ಮುಂದಾದಾಗ 'ನೀವು ಮಂಡ್ಯದವರಲ್ಲವೇ, ಹೇಗಿದ್ದೀರಿ? ಪ್ರಥಮ ಬಾರಿಗೆ ಸಂಸದರಾಗಿ ಇಲ್ಲಿಗೆ ಬಂದಿದ್ದೀರಿ. ಒಳ್ಳೆಯ ಕೆಲಸ ಮಾಡಿ' ಎಂದು ಪ್ರಧಾನಿ ಮೋದಿ ಅವರು ಬೆನ್ನು ತಟ್ಟಿದಾಗ ಸಂಸದ ಪುಟ್ಟರಾಜು ಅವರು ಆಶ್ಚರ್ಯದ ಮಡುವಿಗೆ ಬಿದ್ದಿದ್ದಾರೆ.

ಅಷ್ಟೇ ಅಲ್ಲ, ನಿಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ನನಗೆ ಮಾಹಿತಿ ಕೊಡಿ. ಖಂಡಿತವಾಗಿಯೂ ಅವುಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದೂ ಸಂಸದ ಪುಟ್ಟರಾಜು ಅವರಿಗೆ ಪ್ರಧಾನಿ ಮೋದಿ ಅಭಯ ನೀಡಿದ್ದಾರೆ.

ಮಾಜಿ ಮತ್ತು ಹಾಲಿ ಪ್ರಧಾನಿಗಳ ಮಧ್ಯೆ ನನಗೇನು ಕೆಲಸವೆಂದು ಹೊರಗಡೆ ಬಂದೆ. ಆದರೆ ದೇವೇಗೌಡರು ಮತ್ತು ಮೋದಿ ಸುಮಾರು 40 ನಿಮಿಷ ಕಾಲ ಪರಸ್ಪರ ಮಾತುಕತೆ ನಡೆಸಿದರು.
ದೇವೇಗೌಡರು ಕೋಣೆಯಿಂದ ಹೊರ ಬರುತ್ತಿದ್ದಂತೆ ಪ್ರಧಾನಿ ಮೋದಿ ಕೂಡ ಜೊತೆಗೆ ಬಂದು ಮಾತನಾಡುತ್ತಲೇ ಕಾರಿನ ಬಳಿ ಬಂದು ದೇವೇಗೌಡರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.

ಪ್ರಧಾನಿಯ ಸೌಜನ್ಯ ಹಾಗೂ ಸರಳತೆಯನ್ನು ದೇವೇಗೌಡರು ಸಹ ಮೆಚ್ಚಿಕೊಂಡರು ಎಂದು ಪುಟ್ಟರಾಜು ವಿವರಿಸಿದರು. (ಕೊಲಂಬೋದಿಂದ ವಾಪಸಾದ ಜೆಡಿಎಸ್ ನಾಯಕರು)

ಗೌಡರು ಸದ್ಯಕ್ಕೆ ಪ್ರಕೃತಿ ಚಿಕಿತ್ಸೆಯಲ್ಲಿ: ದೆಹಲಿಯಿಂದ ಶುಕ್ರವಾರವೇ ಬೆಂಗಳೂರಿಗೆ ಬಂದ ಗೌಡರು ಸೋಮವಾರ ಧರ್ಮಸ್ಥಳದ ಶಾಂತಿವನದಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದಾರೆ.

ಧರ್ಮಸ್ಥಳಕ್ಕೆ ಭಾನುವಾರ ಸಂಜೆ ಆಗಮಿಸಿದ ದೇವೇಗೌಡರು ವಿಶ್ರಾಂತಿ ಪಡೆದು ಸೋಮವಾರ ಮುಂಜಾನೆ ಒಂದು ಹಂತದ ಚಿಕಿತ್ಸೆ ಪಡೆದರು. ಯೋಗ, ಸೋನಾ ಬಾತ್‌, ಕಟಿ ಸ್ನಾನದ ಬಳಿಕ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಅನಂತರ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜತೆ ಮಾತುಕತೆ ನಡೆಸಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡರು, ಶಾಂತಿವನದಲ್ಲಿ 15 ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದೇನೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+