ಬಿಜೆಪಿಗೆ ಸೇರುವ ವದಂತಿಗೆ ತೆರೆ ಎಳೆದ ಜಿಟಿಡಿ: ಅಷ್ಟಕ್ಕೂ ಅವರಂದಿದ್ದೇನು?
Recommended Video
ಬೆಂಗಳೂರು, ಸೆಪ್ಟೆಂಬರ್ 9: "ನನಗೆ ಇದುವರೆಗೂ ಬಿಜೆಪಿಗೆ ಬರುವಂತೆ ಯಾರೂ ಕರೆದಿಲ್ಲ. ನಾನು ಸಹ ಎಲ್ಲಿಯೂ ಬಿಜೆಪಿಗೆ ಹೋಗುತ್ತೇನೆ ಎಂದು ತಿಳಿಸಿಲ್ಲ" ಎಂದು ಹೇಳಿಕೆ ಕೊಡುವ ಮೂಲಕ ಮಾಜಿ ಸಚಿವ ಜಿ.ಟಿ ದೇವೇಗೌಡ ಬಿಜೆಪಿ ಸೇರ್ಪಡೆ ಕುರಿತ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಚಾಮುಂಡೇಶ್ವರಿ ಕ್ಷೇತ್ರದ ಕಾಮಗಾರಿಗಳಿಗೆ ತಡೆಯಾಗಿದೆ. ಹೀಗಾಗಿ ಸಿಎಂ ಬಿಎಸ್ ವೈ ಭೇಟಿಯಾಗಿ ಮಾಹಿತಿ ನೀಡಿದ್ದೇನೆ. ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ" ಎಂದು ತಿಳಿಸಿದರು.

ಈ ಮಧ್ಯೆ ಜಿಟಿಡಿ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಅವರು, "ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಹೇಳಿಲ್ಲ. ನನಗೆ ತುಂಬಾ ನೋವಾಗಿದೆ. ಹೀಗಾಗಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ಧೇನೆ. ಮೂರೂವರೆ ವರ್ಷಗಳ ತನಕ ನಾನು ಏನನ್ನೂ ಹೇಳುವುದಿಲ್ಲ. ಬೇರೆ ಪಕ್ಷ ಸೇರ್ಪಡೆಯಾಗುವ ವಿಚಾರವೇ ಇಲ್ಲ. ಜನರು ವೋಟು ಕೊಟ್ಟು ಬೆಳೆಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಕೆಲಸ ಮಾಡುತ್ತೇನೆ. ಅದಕ್ಕಾಗಿ ಸಿಎಂ ಭೇಟಿಯಷ್ಟೇ" ಎಂದರು.

"ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕಾನೂನಾತ್ಮಕವಾಗಿ ವ್ಯವಹಾರ ಮಾಡಿದ್ದಾರೆ. ಹೀಗಾಗಿ ಅವರು ಹೊರಬರುವ ವಿಶ್ವಾಸವಿದೆ. ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ" ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ತಿಳಿಸಿದರು.
ಹುಣಸೂರಿನಲ್ಲಿ ತಮ್ಮಮಗ ಸ್ಪರ್ಧಿಸುವ ವಿಚಾರದ ಕುರಿತು ಮಾತನಾಡಿ, "ನನ್ನ ಮಗ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿಲ್ಲ. ವಿ.ಸೋಮಣ್ಣ ನನ್ನ ಸ್ನೇಹಿತರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ. ಹೀಗಾಗಿ ಭೇಟಿಯಾಗಿದೆ. ಇದಕ್ಕೆ ಬೇರೆ ಅರ್ಥ ಬೇಡ" ಎಂದರು.












Click it and Unblock the Notifications