ದಿ. ಧರ್ಮಸಿಂಗ್ ಸೋದರ ಸಂಬಂಧಿ ಪುತ್ರನ ಹತ್ಯೆ: ಆರೋಪಿ ಆತ್ಮಹತ್ಯೆ!
ಬೆಂಗಳೂರು, ಫೆಬ್ರವರಿ 02: ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಸಹೋದರ ಸಂಬಂಧಿಯ ಪುತ್ರನನ್ನು ಹತ್ಯೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ಶ್ಯಾಮ್ ಎಂಬಾತ ಪೊಲೀಸರ ತನಿಖೆಗೆ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶ್ಯಾಮ್ ಆತ್ಮಹತ್ಯೆ ಮಾಡಿಕೊಂಡವ. ಆಂಧ್ರ ಪ್ರದೇಶದ ತಿರುಪತಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮೆರಿಕಾಗೆ ತೆರಳಲು ಮುಂದಾಗಿದ್ದ ಸಿದ್ಧಾರ್ಥ ನನ್ನು ಬೆಂಗಳೂರಿನಲ್ಲಿ ಅಪಹರಿಸಿದ್ದರು. ಆರೋಪಿ ವಿನೋದ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮತ್ತೊಬ್ಬ ಆರೋಪಿ ಶ್ಯಾಮ್ ಗಾಗಿ ಶೋಧ ನಡೆಸುತ್ತಿದ್ದರು. ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿಯನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಸಹೋದರ ಸಂಬಂಧಿ ದೇವೆಂದರ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ದಾಸರಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಜ. 19 ರಂದು ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಇದಾದ ನಂತರ ಸಿದ್ಧಾರ್ಥ ಸಿಂಗ್ ನಾಪತ್ತೆಯಾಗಿದ್ದರು. ಈ ಮಧ್ಯೆ ನಾನು ಸ್ನೇಹಿತರನ್ನು ನೋಡಲು ಅಮೆರಿಕಾಗೆ ಹೋಗುತ್ತಿರುವುದಾಗಿ ಪೋಷಕರಿಗೆ ಮೊಬೈಲ್ ನಲ್ಲಿ ಸಂದೇಶ ರವಾನಿಸಿದ್ದರು. ಆನಂತರ ಎಲ್ಲಾ ಕಡೆ ವಿಚಾರಿಸಿದರೂ ಸಿದ್ಧಾರ್ಥ ಪತ್ತೆಯಾಗಿರಲಿಲ್ಲ. ಕುಟುಂಬಕ್ಕೆ ಅನುಮಾನ ವ್ಯಕ್ತವಾಗಿ ಜ. 25 ರಂದು ಅಮೃತಹಳ್ಳಿ ಪೊಲೀರಿಗೆ ಸಿದ್ಧಾರ್ಥ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಕೂರಿಸಿಕೊಂಡು ಅಪಹರಣ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದರು.

Recommended Video
ಆಂಧ್ರ ಪ್ರದೇಶದ ನೆಲ್ಲೂರಿನ ಅರಣ್ಯದಲ್ಲಿ ಅನುಮಾನಸ್ಪದವಾಗಿ ಬಿದ್ದಿದ್ದ ಮೃತ ದೇಹ ಪತ್ತೆಯಾಗಿತ್ತು. ನೆಲ್ಲೂರು ಪೊಲೀಸರು ಸ್ಥಳ ಮೃತ ದೇಹ ಪರಿಶೀಲನೆ ನಡೆಸಿದಾಗ ಸಿದ್ದಾರ್ಥ ಸಿಂಗ್ ಬಗ್ಗೆ ಬಗ್ಗೆ ಕುರುಹು ಪತ್ತೆಯಾಗಿತ್ತು. ನೆಲ್ಲೂರು ಪೊಲೀಸರನ್ನು ಸಂಪರ್ಕಿಸಿದ್ದ ಅಮೃತಹಳ್ಳಿ ಪೊಲೀಸರಿಗೆ ಸಿದ್ಧಾರ್ಥ ಸಿಂಗ್ ಮೃತ ದೇಹ ಎಂಬುದು ಖಚಿತವಾಗಿತ್ತು. ವಿನೋದ್ ಮತ್ತು ಶ್ಯಾಮ್ ಎಂಬುವರು ಸಿದ್ಧಾರ್ಥನನ್ನು ಕಾರಿನಲ್ಲಿ ಅಪಹರಿಸಿ ಹತ್ಯೆ ಮಾಡಿದ್ದರು.












Click it and Unblock the Notifications