ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಪ್ರತಿಭಟನೆ ಏಕೆ ಎಂದು ಗೊತ್ತಿತ್ತೆ?

ಬೆಂಗಳೂರು, ಏಪ್ರಿಲ್ 20 : ಕೇಂದ್ರ ಸರ್ಕಾರದ ನೂತನ ಭವಿಷ್ಯ ನಿಧಿ (ಪಿಎಫ್) ನೀತಿ ಖಂಡಿಸಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆಯಿತು. ಯಾವುದೇ ನಾಯಕರಿಲ್ಲದೇ, ಸಂಘಟನೆಗಳ ಬೆಂಬಲವಿಲ್ಲದೇ ಈ ಬೃಹತ್ ಹೋರಾಟ ನಡೆಯಿತು.

ಆಸಕ್ತಿಕರ ಸಂಗತಿ ಎಂದರೆ ಮಂಗಳವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶೇ 60ರಷ್ಟು ನೌಕರರಿಗೆ ಏಕೆ ನಾವು ಹೋರಾಟ ಮಾಡುತ್ತಿದ್ದೇವೆ? ಎಂಬುದು ತಿಳಿದಿರಲಿಲ್ಲ. ಮೊದಲು ಪ್ರತಿಭಟನೆ ನಡೆಸುತ್ತಿದ್ದ ಜನರು ನಂತರ ಬಸ್ಸುಗಳಿಗೆ ಬೆಂಕಿ ಹಚ್ಚಿದರು, ಕಲ್ಲು ತೂರಾಟ ನಡೆಸಿದರು. [ಗಾರ್ಮೆಂಟ್ಸ್ ನೌಕರರ ಗೋಳಿನ ಕಥೆ ಬಿಚ್ಚಿಟ್ಟ ಸಾವಿತ್ರಿ]

protest

ರಾಜಕೀಯ ಪ್ರೇರಿತ : ಕರ್ನಾಟಕ ಬಿಜೆಪಿ ಇದೊಂದು ರಾಜಕೀಯ ಪ್ರೇರಿತ ಪ್ರತಿಭಟನೆ ಎಂದು ಹೇಳಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿ ನಡೆದ ಬೃಹತ್ ಪ್ರತಿಭಟನೆ ಇದಾಗಿದೆ. ರಾಜಕೀಯ ಪ್ರೇರಿತವಾಗಿ ನಡೆದ ಹೋರಾಟವಿದು ಎಂದು ಬಿಜೆಪಿ ನಾಯಕರು ದೂರಿದ್ದಾರೆ. ಈ ಪ್ರತಿಭಟನೆ ಹಿಂದೆ ಯಾರಿದ್ದಾರೆ? ಎಂದು ಪೊಲೀಸರು ಇನ್ನೂ ಆಲೋಚಿಸುತ್ತಿದ್ದಾರೆ. [ಮಂಗಳವಾರ ಬೆಂಗಳೂರ ಶಾಂತಿ ಕದಡಿದವರು ಯಾರು?]

ಕೇಸು ವಾಪಸ್ ಪಡೆಯಿರಿ : 'ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಹಿಂಸಾಚಾರ ನಡೆಸುವ ಉದ್ದೇಶ ನಮಗೆ ಇರಲಿಲ್ಲ. ಗಾರ್ಮೆಂಟ್ಸ್ ಉದ್ಯೋಗಿಗಳ ಮೇಲೆ ಹಾಕಿರುವ ಕೇಸ್‌ಗಳನ್ನು ವಾಪಸ್ ಪಡೆಯಿರಿ. ಹಿಂಸಾಚಾರದ ಹಿಂದೆ ಬೇರೆ ವ್ಯಕ್ತಿಗಳ ಕೈವಾಡವಿದೆ. ಬಸ್ಸಿಗೆ ಬೆಂಕಿ ಹಚ್ಚಿದ್ದು, ಕಾರ್ಮಿಕರಲ್ಲ' ಎಂದು ಗಾರ್ಮೆಂಟ್ಸ್ ನೌಕರರ ಸಂಘದವರು ಹೇಳಿದ್ದಾರೆ. [ಪಿಎಫ್ ವಿಥ್ ಡ್ರಾ ನಿಯಮಕ್ಕೆ ಜುಲೈ 31ರ ತನಕ ಬ್ರೇಕ್]

ಈ ಪ್ರತಿಭಟನೆ ಹಿಂದೆ ರಾಜಕೀಯ ಕೈವಾಡವಿದೆ. ರಾತ್ರೋರಾತ್ರಿ ಕಾರ್ಮಿಕರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ. ಸರ್ಕಾರ ಈ ಪ್ರತಿಭಟನೆ ಹಿಂದೆ ಭಾಗಿಯಾಗಿದೆ. ಗೃಹ ಸಚಿವ ಪರಮೇಶ್ವರ ಅವರು ಪರಿಸ್ಥಿತಿ ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. [ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಯ ಸಚಿತ್ರ ವಿವರ]

ಪ್ರತಿಭಟನೆ ಕುರಿತು ಹೇಳಿಕೆ ನೀಡಿರುವ ಸಚಿವ ಪರಮೇಶ್ವರ ಅವರು, 'ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡರು. ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣ, ಪೊಲೀಸರು ಲಾಠಿ ಚಾರ್ಜ್ ಮಾಡಲು ಸಾಧ್ಯವಾಗಿಲ್ಲ. ಈ ಪ್ರತಿಭಟನೆ ನಡೆಸಲು ಯಾವ ಸಂಘಟನೆಯವರು ಅನುಮತಿ ಪಡೆದಿರಲಿಲ್ಲ' ಎಂದು ಹೇಳಿದ್ದಾರೆ. [ಬೆಂಗಳೂರು ಪೊಲೀಸರ ಮೂರ್ಖತನ ಇದೇ ಮೊದಲಲ್ಲ]

'ಪ್ರತಿಭಟನೆ ನಡೆಸುತ್ತಿದ್ದವರು ಹೆಬ್ಬಗೋಡಿ ಪೊಲೀಸ್ ಠಾಣೆ ಮೇಲೆ ಏಕೆ ದಾಳಿ ಮಾಡಿದರು? ಎಂಬುದು ನಮಗೂ ತಿಳಿದಿಲ್ಲ. ತನಿಖೆಯ ನಂತರ ಮಾತ್ರ ಈ ಕುರಿತು ತಿಳಿಯಲಿದೆ. ಹೊರಗೆ 7 ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆ ನಡೆಸುತ್ತಿದ್ದರು. ಠಾಣೆಯಲ್ಲಿ 20 ಪೊಲೀಸರಿದ್ದರು. ಆಗ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಗಿತ್ತು' ಎಂದು ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+