ಪರಿಸರ ಜಾಗೃತಿ ಬಗ್ಗೆ ಜಾವಗಲ್ ಶ್ರೀನಾಥ್ ಏನಂತಾರೆ?
ಬೆಂಗಳೂರು, ಜೂನ್ 13: ಸ್ವಚ್ಛ ಭಾರತ ಅಭಿಯಾನದ ನಂತರ ಅನೇಕರ ಮನಸ್ಥಿತಿ ಬದಲಾಗಿದೆ, ಬದಲಾಗುತ್ತಿದೆ, ಸ್ವಚ್ಛತೆ ಒಂದು ದಿನದ ಕೆಲಸವಲ್ಲ. ಅದು ಪ್ರತಿಯೊಬ್ಬರ ಪ್ರತಿದಿನದ ಕೆಲಸವಾಗಬೇಕು ಎಂದು ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಹೇಳಿದರು.
ಯುನೈಟೆಡ್ ವೇ ಬೆಂಗಳೂರು ಆಶ್ರಯದಲ್ಲಿ ನಂದಿ ಬೆಟ್ಟದ ತಪ್ಪಲಿನಲ್ಲಿ ಹಮ್ಮಿಕೊಂಡಿದ್ದ "ನಂದಿ ಹಿಲ್ಲಥಾನ್ "ಗೆ ಜೂನ್ 12 ರಂದು ಚಾಲನೆ ನೀಡಿದ ನಂತರ ಒನ್ ಇಂಡಿಯಾದೊಂದಿಗೆ ಶ್ರೀನಾಥ್ ಮಾತನಾಡಿ ಅನೇಕ ವಿಚಾರಗಳನ್ನು ತೆರೆದಿಟ್ಟರು.[ಪರಿಸರ ಜಾಗೃತಿ ಸಾರಿದ ನಂದಿ ಹಿಲ್ಲಥಾನ್]

ಇಂಥ ಕಾರ್ಯಕ್ರಮಗಳು ಸ್ಚಚ್ಛತೆಯ ಅರಿವನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ಪರಿಸರದ ಬಗ್ಗೆ ಎಷ್ಟು ಜಾಗೃತಿಮೂಡಿಸಿದರೂ ತೊಂದರೆಯಿಲ್ಲ. ಪ್ಲಾಸ್ಟಿಕ್ ಕಡಿಮೆ ಮಾಡಬೇಕು, ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂಬ ಜ್ಞಾನೋದಯ ನಮ್ಮಲ್ಲಿಯೇ ಆಗಬೇಕು. ಇಂಥ ಕಾರ್ಯಕ್ರಮ ಅದಕ್ಕೆ ಪೂರಕ ಎಂದರು.[ನಂದಿ ಹಿಲ್ಲಥಾನ್ : ಯಾಕಾಗಿ? ಏನಿದರ ಮಹತ್ವ?]
ನಂದಿ ಬೆಟ್ಟದ ತಪ್ಪಲಿನ ಓಟದ ಚಿತ್ರಪಟ
ಸ್ವಚ್ಛ ಭಾರತ ಅಭಿಯಾನ ಒಂದು ಉತ್ತಮ ಅರಿವು ಮೂಡಿಸುವ ಕೆಲಸ. ಅದರಿಂದ ಸಾಕಷ್ಟು ಬದಲಾವಣೆ ಆಗಿದೆ. ಇಂಥ ಬದಲಾವಣೆ ನಿರಂತರವಾಗಿರಬೇಕು ಎಂದು ಹೇಳಿದರು. ಜಾವಗಲ್ ಶ್ರೀನಾಥ್ ಯಾವ ಯಾವ ವಿಚಾರ ಹಂಚಿಕೊಂಡರು ಎಂಬುದನ್ನು ವಿಡಿಯೋದಲ್ಲಿ ನೋಡಿ...












Click it and Unblock the Notifications