ಬೆಂಗಳೂರಿನಲ್ಲಿರುವ ₹500 ಕೋಟಿ ಮೌಲ್ಯದ ಈ 6 ಶತ್ರು ಆಸ್ತಿಗಳ ಮಾರಾಟಕ್ಕೆ ಪ್ಲಾನ್‌, ಎಲ್ಲೆಲ್ಲಿ?-ಮಾಹಿತಿ

ಬೆಂಗಳೂರು, ಫೆಬ್ರವರಿ, 02: ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ್ಟೋಡಿಯನ್‌ ಆಫ್‌ ಎನಿಮಿ ಪ್ರಾಪರ್ಟಿ ಫಾರ್‌ ಇಂಡಿಯಾ (CEPI) ಪಾಕಿಸ್ತಾನ ಅಥವಾ ಚೀನಾದ ಪೌರತ್ವವನ್ನು ಪಡೆದ ಜನರು ಭಾರತದಲ್ಲಿ ಬಿಟ್ಟುಹೋಗಿರುವ 'ಶತ್ರು ಆಸ್ತಿಗಳನ್ನು' ಮಾರಾಟ ಮಾಡುವ ಅಥವಾ ಗುತ್ತಿಗೆ ನೀಡುವ ಸಾಧ್ಯತೆಯಿದೆ.

ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರ ಪ್ರಕಾರ, ಕರ್ನಾಟಕದಲ್ಲಿ 24 ಶತ್ರು ಆಸ್ತಿಗಳಿವೆ. ಅವುಗಳಲ್ಲಿ 6 ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿದ್ದು. ಇವು ಸುಮಾರು 500 ಕೋಟಿ ರೂಪಾಯಿ ಬೆಲೆ ಬಾಳುತ್ತವೆ. ಹಾಗೆಯೇ ಇವುಗಳನ್ನು ಸ್ವಾಧೀನಕ್ಕೆ ಪಡೆಯುವ ಅವಕಾಶ ಸಿಕ್ಕಿದೆ.

Enemy properties: Plan to sell these 6 enemy properties ₹500 crore worth in Bengaluru, Know details

ಬೆಂಗಳೂರಿನಲ್ಲಿರು 6 ಶತ್ರು ಆಸ್ತಿಗಳಿವು

1. ಜೊಸೆಫೈನ್‌ ರಾಜಮ್ಮ ಕ್ಸೇವಿಯರ್‌, ವಿಕ್ಟೋರಿಯಾ ರಸ್ತೆಯಲ್ಲಿ ಎರಡು ಆಸ್ತಿಗಳಿವೆ.

2. ಸೈಯದ್‌ ಅಬ್ದುಲ್‌ ಶುಕ್ಕುರ್‌, 2ನೇ ಮುಖ್ಯರಸ್ತೆ, ಕಲಾಸಿಪಾಳ್ಯ.

3. ಮರಿಯಮ್‌ ಮಿರ್ಜಾ ಖಲೀಲಿ, ರಾಜಭವನ ರಸ್ತೆಯಲ್ಲಿ ಎರಡು ಆಸ್ತಿಗಳಿವೆ

4. ಮೈಕೆಲ್‌ ಥಾಮ್‌, ವಿಠ್ಠಲ ಮಲ್ಯ ರಸ್ತೆಯಲ್ಲಿ ಶತ್ರು ಆಸ್ತಿ ಇದ್ದು, ಒಟ್ಟು 6 ಶತ್ರು ಆಸ್ತಿಗಳಿವೆ.

1962 ಮತ್ತು 1965ರ ಇಂಡೋ-ಚೀನಾ ಮತ್ತು ಇಂಡೋ-ಪಾಕ್ ಯುದ್ಧಗಳ ನಂತರ CEPI "ಶತ್ರು ಆಸ್ತಿ" ಕಾಯಿದೆ 1968ರ ಅಡಿಯಲ್ಲಿ ಅಂತಹ ಆಸ್ತಿಗಳ ಮಾಲೀಕರಾದರು. ಭಾರತದಾದ್ಯಂತ ಸುಮಾರು 1 ಲಕ್ಷ ಕೋಟಿ ಮೌಲ್ಯದ 9,000 "ಶತ್ರು ಆಸ್ತಿ"ಗಳಿವೆ. ಈ ಆಸ್ತಿಗಳು ಯುದ್ಧದ ನಂತರ ಪಾಕಿಸ್ತಾನ ಮತ್ತು ಚೀನಾಕ್ಕೆ ವಲಸೆ ಬಂದವರಿಗೆ ಸೇರಿವೆ. ಆಸ್ತಿಗಳು ಈಗಾಗಲೇ ಸಿಇಪಿಐ ಸ್ವಾಧೀನದಲ್ಲಿವೆ ಮತ್ತು ಅವರು ಸಾರ್ವಜನಿಕ ಬಳಕೆಗಾಗಿ ರಾಜ್ಯ ಸರ್ಕಾರಕ್ಕೆ ಮಾರಾಟ ಮಾಡಬಹುದು ಅಥವಾ ಗುತ್ತಿಗೆ ನೀಡಬಹುದು " ಎಂದು ಅಧಿಕಾರಿಯೊಬ್ಬರು ಹೇಳಿದರು.

ಈ ಆಸ್ತಿಗಳ ಮೌಲ್ಯಮಾಪನಕ್ಕಾಗಿ ಮುಂಬೈ ಪ್ರಾದೇಶಿಕ ಕಚೇರಿಯ ಸಿಇಪಿಐ ಅಧಿಕಾರಿಗಳು ನಗರಕ್ಕೆ ಬಂದಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತ ದಯಾನಂದ ಕೆಎ ತಿಳಿಸಿದ್ದಾರೆ ಅಂತಾ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ರಾಜ್ಯ ಸರ್ಕಾರವು ದೀರ್ಘಾವಧಿಯ ಗುತ್ತಿಗೆಗೆ ಪ್ರಸ್ತಾವನೆಯನ್ನು ಸಲ್ಲಿಸಬಹುದು ಅಥವಾ ಅವುಗಳನ್ನು ಹರಾಜು ಮಾಡುತ್ತಾರೆ ಎಂದು ನಮಗೆ ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು ಅಂತಾ ವರದಿ ಮಾಡಿದೆ.

ಬೆಂಗಳೂರಿನಲ್ಲಿ ರಾಜಭವನ ರಸ್ತೆ, ವಿಟ್ಟಲ್ ಮಲ್ಯ ರಸ್ತೆ ಮತ್ತು ವಿಕ್ಟೋರಿಯಾ ರಸ್ತೆಯಲ್ಲಿ ಆರು "ಶತ್ರು ಆಸ್ತಿ"ಗಳಿವೆ. ಆಸ್ತಿಗೆ ನಾಲ್ವರು ಮಾಲೀಕರಿದ್ದು, ಅವರಲ್ಲಿ ಮೂವರು ಪಾಕಿಸ್ತಾನಕ್ಕೆ ಮತ್ತು ಒಬ್ಬರು ಚೀನಾಕ್ಕೆ ವಲಸೆ ಹೋಗಿದ್ದಾರೆ. ಒಟ್ಟು ಭೂಪ್ರದೇಶವು ಸುಮಾರು 14,000 ಚದರ ಮೀಟರ್, ಅಂದರೆ ಬೆಂಗಳೂರು ನಗರದ ಹೃದಯಭಾಗದಲ್ಲಿ 1.5 ಲಕ್ಷ ಚದರ ಅಡಿ ಇದೆ. ರಾಜಭವನ ರಸ್ತೆಯಲ್ಲಿರುವ ಶತ್ರು ಆಸ್ತಿಯು 1.23 ಲಕ್ಷ ಚದರ ಅಡಿಗಳಷ್ಟಿದೆ ಮತ್ತು ಒಬ್ಬ ವ್ಯಕ್ತಿಗೆ ಸೇರಿದೆ, ಆದರೆ ಈಗ CEPI ವಶದಲ್ಲಿದೆ.

ಪಾಕಿಸ್ತಾನ ಹಾಗೂ ಚೀನಾದ ನಾಗರಿಕತ್ವ ಪಡೆದುಕೊಂಡ ಜನರು ರಾಜ್ಯದಲ್ಲಿ ಆಸ್ತಿಗಳನ್ನು ಬಿಟ್ಟುಹೋಗಿದ್ದಾರೆ. ಈ ಆಸ್ತಿಗಳನ್ನು ರಾಜ್ಯದ ಸರ್ಕಾರ ಸಾರ್ವಜನಿಕ ಬಳಕೆಗಾಗಿ ಗುತ್ತಿಗೆ ಆಧಾರದಲ್ಲಿ ತನ್ನ ಹಿಡಿತಕ್ಕೆ ಪಡೆಯುವ ಮೊದಲ ಅವಕಾಶ ಸಿಗಲಿದೆ. ಸಿಇಪಿಐನ ಮುಂಬೈ ಪ್ರಾದೇಶಿಕ ಕಚೇರಿಯ ಪ್ರತಿನಿಧಿಗಳು ನಗರಕ್ಕೆ ಬಂದಿದ್ದರು. ಶತ್ರು ಆಸ್ತಿಗಳ ಸಮೀಕ್ಷೆಯನ್ನು ಅವರು ನಡೆಸಿದ್ದಾರೆ.

24 ಶತ್ರುಗಳ ಆಸ್ತಿಗಳು ಬೆಂಗಳೂರು ನಗರ, ಕಲಬುರಗಿ, ವಿಜಯಪುರ ಮತ್ತು ಉಡುಪಿ ಜಿಲ್ಲೆಗಳಿದ್ದು, ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ನಾವು ಆಸ್ತಿಗಳನ್ನು ಪರಿಶೀಲನೆ ಮಾಡಿದ್ದು, ಪೆಟ್ರೋಲ್‌ ಬಂಕ್‌, ಹೋಟೆಲ್‌ ಸೇರಿದಂತೆ ಇತರೆ ವ್ಯವಹಾರಗಳನ್ನು ಈ ಆಸ್ತಿಗಳಲ್ಲಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+