• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಂಬೆಸಿ ಆಫೀಸ್ ಪಾರ್ಕ್‍ನಿಂದ ವಿಶಿಷ್ಟವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 07: ಎಂಬೆಸಿ ಗಾಲ್ಫ್ ಲಿಂಕ್‍ನ ಹಿಲ್ಟನ್ ಹೋಟೆಲ್‍ನಲ್ಲಿ ಇಂದು ಪ್ರತಿವರ್ಷದಂತೆ ಈ ವರ್ಷ ಕೂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಹಮ್ಮಿಕೊಂಡಿತ್ತು. ತಮ್ಮ ಪ್ರತಿಭೆ, ಸಾಮರ್ಥ್ಯ ಹಾಗೂ ಸಮಗ್ರತೆ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿರುವ ಮಹಿಳೆಯರನ್ನು ಹುಡುಕಿ ಕರೆತಂದು ಗೌರವಿಸುವ ಕಾರ್ಯವನ್ನು ಎಂಬೆಸಿ ಸಮೂಹ ಸದಾ ಹೆಮ್ಮೆಯಿಂದ ಮಾಡುತ್ತಾ ಬಂದಿದೆ.

ಮಹಿಳಾ ನಾಯಕತ್ವ ವಹಿಸಿದವರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿದೆ. 3 ಸಾರಿ ಫಿಲಂಫೇರ್ ಪ್ರಶಸ್ತಿಗೆ ಪಾತ್ರರಾಗಿರುವ ಜನಪ್ರಿಯ ನಟಿ, ಯುಎನ್‍ಪಿಎಫ್ ಗುಡ್‍ವಿಲ್ ರಾಯಬಾರಿಯಾಗಿರುವ ಹಾಗೂ ಕ್ಯಾನ್ಸರ್ ಜಾಗೃತಿಯ ಕಾರ್ಯದಲ್ಲಿ ತೊಡಗಿರುವ ಮನಿಷಾ ಕೋಯಿರಾಲಾ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!

2016ರಲ್ಲಿ ಎಂಬೆಸಿ ಆಫೀಸ್ ಪಾರ್ಕ್ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದೆ. ಈ ಸಂದರ್ಭ ಇಲ್ಲಿನ ಎಲ್ಲಾ ಕಾರ್ಪೋರೇಟ್ ಕಂಪನಿಗಳು ಹಾಗೂ ಆಫೀಸ್ ಪಾರ್ಕ್ ಬಳಕೆದಾರರು ಪಾಲ್ಗೊಳ್ಳುವ ಈ ಕಾರ್ಯಕ್ರಮಕ್ಕೆ ಪ್ರಮುಖ ಮಹಿಳಾ ಸಾಧಕಿಯರನ್ನು ಆಹ್ವಾನಿಸಿ ಅವರ ಜೀವನ ಚರಿತ್ರೆ, ಸಾಧನೆಯನ್ನು ಅವರಿಂದಲೇ ಹೇಳಿಸಿ ಪ್ರಭಾವಿಸುವ ಕಾರ್ಯ ಮಾಡಲಾಗುತ್ತದೆ.

ಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಮೂಡಿಸಿದ ಮೊದಲಿಗರಿವರುಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಮೂಡಿಸಿದ ಮೊದಲಿಗರಿವರು

ನಾಲ್ಕನೇ ಆವೃತ್ತಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ "2019ರ ಮುಂಚೂಣಿಯ ನಾಯಕಿಯರು- ಬದಲಾವಣೆಯ ನಾಯಕರೊಂದಿಗೆ ಸಂಭಾಷಣೆ' ಥೀಮ್ ಅಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮನಿಷಾ ಕೋಯಿರಾಲಾ ಜತೆ ಇನ್ನಿತರ ಸಂಪನ್ಮೂಲ ಅತಿಥಿಗಳಾದ ಸದರ್ ಲ್ಯಾಂಡ್ ಗ್ಲೋಬಲ್‍ನ ಜಾಗತಿಕ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದ ಹಿರಿಯ ನಿರ್ದೇಶಕಿ ಮೀನಾಲೋಚನಿ ಕುಮಾರ್, ಇನ್‍ಫೋಸಿಸ್ ಸಂಸ್ಥೆಯ ಡೈವರ್ಸಿಟಿ ಹಾಗೂ ಇನ್‍ಕ್ಲೂಜನ್ ವಿಭಾಗದ ಮುಖ್ಯಸ್ಥರಾದ ಅರುಣಾ ನ್ಯೂಟನ್ ಅವರು ಕಷ್ಟದ ಹೊರತಾಗಿಯೂ ಯಶಸ್ವಿಯಾಗಿ ಜೀವನವನ್ನು ಗೆಲ್ಲುವ ಜೀವಂತವಾಗಿ ಹಾಗೂ ಜಯಶಾಲಿಯಾಗಿ ಹೊರಹೊಮ್ಮುವ ಚಿಂತನಶೀಲ ವಿಚಾರಗಳ ಕುರಿತು ಒಳನೋಟ ಹಂಚಿಕೊಂಡರು.

ಮಾತನಾಡಿದ ನಟಿ ಮನಿಷಾ ಕೋಯಿರಾಲಾ

ಮಾತನಾಡಿದ ನಟಿ ಮನಿಷಾ ಕೋಯಿರಾಲಾ

ಯುವ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ನಟಿ ಮನಿಷಾ ಕೋಯಿರಾಲಾ, ಎಂಬೆಸಿ ಆಫೀಸ್ ಪಾರ್ಕ್ ಆವರಣದಲ್ಲಿರುವ ಹಲವು ಕಾರ್ಪೋರೇಟ್ ಕಂಪನಿಗಳ ಜತೆ ಈ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಇರುವುದಕ್ಕೆ ಹೆಮ್ಮೆ ಅನ್ನಿಸುತ್ತಿದೆ. ನನ್ನ ಪ್ರಕಾರ ಮಹಿಳೆಯರು ಇಂದು ಕಾಲ ಬದಲಾಗುತ್ತಿದ್ದು, ತಮ್ಮ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವ ಕಾರ್ಯ ಮಾಡಬೇಕು. ಅಲ್ಲದೇ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡುವ ಸಾಮಥ್ರ್ಯ ಮಹಿಳೆಯರಿಗೆ ಇದ್ದು, ಅದನ್ನವರು ಅರಿಯಬೇಕು. ಮನೆಯಲ್ಲೇ ಇದ್ದು ಕುಟುಂಬ ನೋಡಿಕೊಳ್ಳುವ ಮಹಿಳೆ ಕೂಡ ಹೊರಗೆ ಹೋಗಿ ಉದ್ಯೋಗ ಮಾಡುವ ಮಹಿಳೆಯರಷ್ಟೇ ತಮ್ಮ ಕುಟುಂಬದ ಕಾಳಜಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸುತ್ತಾರೆ ಎಂದರು.

“ಹೀಲ್ಡ್’ ಕೃತಿಯ ಕುರಿತು ವಿಸ್ತಾರವಾಗಿ ಅನುಭವ ಬಿಚ್ಚಿಟ್ಟ ಮನಿಷಾ

“ಹೀಲ್ಡ್’ ಕೃತಿಯ ಕುರಿತು ವಿಸ್ತಾರವಾಗಿ ಅನುಭವ ಬಿಚ್ಚಿಟ್ಟ ಮನಿಷಾ

ತಾವು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಅನುಭವಿಸಿದ ಕಷ್ಟ ಹಾಗೂ ತಮ್ಮ "ಹೀಲ್ಡ್' ಕೃತಿಯ ಕುರಿತು ವಿಸ್ತಾರವಾಗಿ ಅನುಭವ ಬಿಚ್ಚಿಟ್ಟ ಮನಿಷಾ, "ಕ್ಯಾನ್ಸರ್ ನಿಂದ ಬದುಕು ಗೆದ್ದು ಬಂದ ನನ್ನ ಜೀವನ ಹೊಸ ಗುತ್ತಿಗೆಯ ಸಮಯವನ್ನು ಪಡೆದಿದೆ. ಇದೀಗ ಲಭಿಸಿರುವ ತನ್ನ ಜೀವನವನ್ನು ತೆರೆದ ಕೈಗಳಿಂದ ತಬ್ಬಿಕೊಂಡಿದ್ದೇನೆ. ಬದುಕು ಒಂದು ಉಡುಗೊರೆ ಅನ್ನುವ ಅನುಭವ ನಾನು ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುತ್ತಿದ್ದ ಸಂದರ್ಭ ಭಾಸವಾಗುತ್ತಿತ್ತು. ಧೈರ್ಯವಾಗಿರುವುದು ಒಂದು ಆಯ್ಕೆ ಮಾತ್ರವಲ್ಲ, ಜೀವ ತೆಗೆಯುವ ರೋಗಗಳು ನಮ್ಮನ್ನು ಕಾಡಿದಾಗ ನಿಜಕ್ಕೂ ಇದನ್ನು ನೀವು ಹೊಂದಲೇ ಬೇಕಾಗುತ್ತದೆ' ಎಂದರು.

ಕೃಷಿ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟ ದೊಡ್ಡಬಳ್ಳಾಪುರದ ಉಮಾದೇವಿಕೃಷಿ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟ ದೊಡ್ಡಬಳ್ಳಾಪುರದ ಉಮಾದೇವಿ

ಎಂಬೆಸಿ ಆಫೀಸ್ ಪಾರ್ಕ್‍ನ ಸಿಇಒ ಮೈಕ್ ಹಾಲೆಂಡ್

ಎಂಬೆಸಿ ಆಫೀಸ್ ಪಾರ್ಕ್‍ನ ಸಿಇಒ ಮೈಕ್ ಹಾಲೆಂಡ್

ಇದೇ ಸಂದರ್ಭ ಮಾತನಾಡಿದ ಎಂಬೆಸಿ ಆಫೀಸ್ ಪಾರ್ಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೈಕ್ ಹಾಲೆಂಡ್ ಮಾತನಾಡಿ, ಎಂಬೆಸಿಯಲ್ಲಿ ನಾವು ಯಾವಾಗಲೂ ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ಅಲ್ಲದೇ ಮಹಿಳಾ ನಾಯಕತ್ವವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಮಹಿಳೆಯರು ಎದುರಿಸುತ್ತಿರುವ ವಿಪತ್ತುಗಳ ನಡುವೆಯೂ ಅವರ ಪ್ರಯತ್ನ ಮತ್ತು ಪ್ರತಿಭೆ ಹಾಗೂ ಶಕ್ತಿಯನ್ನು ಹೊಗಳುವ ಹಾಗೂ ಷ್ಲಾಘಿಸುವ ಕಾರ್ಯ ಮಾಡುತ್ತಿದ್ದೇವೆ. ವಿಭಿನ್ನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಕರೆದು ಗೌರವಿಸುತ್ತೇವೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಿರುವ ನಮ್ಮ ಎಲ್ಲಾ ಪುರುಷ, ಸ್ತ್ರೀ ಉದ್ಯೋಗಿಗಳು, ಸಾರ್ವಜನಿಕರು, ಆಸಕ್ತ ಸಮುದಾಯಗಳು ಪಾಲ್ಗೊಂಡಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತೇನೆ ಎಂದರು.

ಎಂಬೆಸಿ ಸಮೂಹದ ಕುರಿತು

ಎಂಬೆಸಿ ಸಮೂಹದ ಕುರಿತು

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೇಶದಲ್ಲೇ ಅತ್ಯಂತ ಪ್ರಮುಖ ಕಂಪನಿಯಾಗಿ ಕಳೆದ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಎಂಬೆಸಿ. ದೇಶದ ಪ್ರಮುಖ ಪಾಪರ್ಟಿ ಡೆವಲರ್ ಆಗಿ ಜನಪ್ರಿಯವಾಗಿದೆ. ಎಂಬೆಸಿ ದೇಶಾದ್ಯಂತ ಸಾಕಷ್ಟು ದೊಡ್ಡ ಮಟ್ಟದ ಭೂ ಬ್ಯಾಂಕ್ ಒಳಗೊಂಡಿದೆ. ಸರಿಸುಮಾರು 53 ಮಿಲಿಯನ್ ಚದರ್ ಅಡಿ ವಿಸ್ತಾರದ ಪ್ರದೇಶ ಅಭಿವೃದ್ಧಿಪಡಿಸಿದೆ. ವಾಣಿಜ್ಯ, ಗೃಹ ಹಾಗೂ ಚಿಲ್ಲರೆ ಕ್ಷೇತ್ರಗಳು ಇದರಲ್ಲಿ ಸೇರಿವೆ. ಭಾರತದಲ್ಲಿ ಮಾತ್ರವಲ್ಲ ಮಲೇಷ್ಯಾ ಹಾಗೂ ಸೆರ್ಬಿಯಾದಲ್ಲಿ ಕೂಡ ಇದರ ಛಾಪು ಮೂಡಿದೆ. ವಾಣಿಜ್ಯ, ಗೃಹ, ಕೈಗಾರಿಕೆ ಹಾಗೂ ವೇರ್‍ಹೌಸಿಂಗ್ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡು ಬಂದಿದೆ ಸಂಸ್ಥೆ. ವಸತಿ ಕ್ಷೇತ್ರದಲ್ಲಿ ಸದ್ಯ 12 ಮಿಲಿಯನ್ ಚದರ ಅಡಿ ಪ್ರದೇಶದ ನಿರ್ಮಾಣ ಪೂರ್ಣಗೊಳಿಸಿದೆ. 17 ಮಿಲಿಯನ್ ಚದರ ಅಡಿ ಪ್ರದೇಶದ ಕಾರ್ಯ ಚಾಲ್ತಿಯಲ್ಲಿದೆ. ಹಾಸ್ಪಿಟಾಲಿಟಿ ಬ್ಯುಸಿನೆಸ್ ವಿಭಾಗವು 2 ಹೋಟೆಲ್‍ಗಳನ್ನು ಬೆಂಗಳೂರಿನಲ್ಲಿ ನಿರ್ಮಿಸಿದ್ದು, ಇನ್ನೂ 5 ನಿರ್ಮಾಣ ಹಂತದಲ್ಲಿವೆ ಇವುಗಳಲ್ಲಿ ನಾಲ್ಕು ಸೀಸನ್ ಹೋಟೆಲ್‍ಗಳಾಗಿವೆ.

English summary
Embassy Office Parks hosted its annual event to celebrate International Women’s Day at Hilton, Embassy Golf Links today. Embassy Group has always taken pride in celebrating women leadership by setting remarkable benchmarks in diverse fields owing to their talents, capabilities, and integrity. Manisha Koirala, three-time Filmfare Award winning actor, UNPF Goodwill Ambassador and an advocate of Cancer Awareness, was invited as the Chief Guest for the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X