ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ನಿಲ್ದಾಣ, ಮೇಲು ರಸ್ತೆಗೆ ಎಂಬಸ್ಸಿಯಿಂದ ಹೂಡಿಕೆ

By Nayana
|
Google Oneindia Kannada News

ಬೆಂಗಳೂರು, ಜೂನ್ 8: ಮಾನ್ಯತಾ ಟೆಕ್‌ ಪಾರ್ಕ್ ಬಳಿ ಮೆಟ್ರೋ ನಿಲ್ದಾಣ ಹಾಗೂ ದ್ವಿಮುಖ ಪಥದ ಮೇಲುರಸ್ತೆಗೆ ಹೂಡಿಕೆ ಮಾಡಲು ಎಂಬಸ್ಸಿ ಸಂಸ್ಥೆಯು ಬಿಎಂಆರ್‌ಸಿಎಲ್ ಜತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಮಾನ್ಯತಾ ಟೆಕ್‌ ಪಾರ್ಕ್‌ನ ಉದ್ಯೋಗಿಗಳು ಟ್ರಾಫಿಕ್‌ ಜಾಮ್‌ ಕಿರಿ ಕಿರಿಯಿಂದ ಮುಕ್ತಿ ಪಡೆಯಲಿದ್ದಾರೆ.

ಕಾಡಬೀಸನಹಳ್ಳಿ ಮೆಟ್ರೋ ನಿಲ್ದಾಣಕ್ಕೆ 100 ಕೋಟಿ ರೂ. ಹಾಗೂ ಮೇಲುರಸ್ತೆಗೆ 150 ಕೋಟಿ ರೂ. ಹೂಡಿಕೆ ಮಾಡಲಿರುವ ಎಂಬಸ್ಸಿ ಗ್ರೂಪ್, ಈ ಮೂಲಕ ಮಾನ್ಯತಾ ಟೆಕ್‌ ಪಾರ್ಕ್ ಗೆ ಹೋಗುವ ಉದ್ಯೋಗಿಗಳನ್ನು ಸಂಚಾರ ದಟ್ಟಣೆಯ ಕಷ್ಟದಿಂದ ಪಾರು ಮಾಡಲಿದೆ. ಮೆಟ್ರೋ ನಿಲ್ದಾಣವು ನೇರವಾಗಿ ಟೆಕ್‌ ಪಾರ್ಕ್ ಸಂಪರ್ಕ ಕಲ್ಪಿಸಲಿದೆ.

ನಾಗಸಂದ್ರ ಮೆಟ್ರೋ ನಿಲ್ದಾಣ: ಪಾದಚಾರಿ ಸುರಂಗ ಮಾರ್ಗಕ್ಕೆ ಸಿದ್ಧತೆನಾಗಸಂದ್ರ ಮೆಟ್ರೋ ನಿಲ್ದಾಣ: ಪಾದಚಾರಿ ಸುರಂಗ ಮಾರ್ಗಕ್ಕೆ ಸಿದ್ಧತೆ

ಮೆಟ್ರೋದಲ್ಲಿ ಬರುವವರು ಈ ನಿಲ್ದಾಣಕ್ಕೆ ಬಂದು ಟೆಕ್ ಪಾರ್ಕ್ ಪ್ರವೇಶಿಸಬಹುದು. ಜತೆಗೆ ಸ್ವಂತ ವಾಹನಗಳಲ್ಲಿ ಬರುವವರು ಮೇಲುರಸ್ತೆಯ ಮೂಲಕ ಟೆಕ್ ಪಾರ್ಕ್ ಪ್ರವೇಶಿಸಬಹುದು. ಮಾನ್ಯತಾ ಟೆಕ್‌ ಪಾರ್ಕ್‌ಗೆ ಬರಲು ಈಗಾಗಲೇ ಮೇಲು ರಸ್ತೆ ಇದೆ.

Embassy group will invest Rs.250 crores for Metro and elevated road

ಇದರಿಂದ ಥಣಿಸಂದ್ರ ಜಂಕ್ಷನ್‌ನಿಂದ ನಾಗವಾರ ಕೆರೆವರೆಗೆ ಮತ್ತೊಂದು ಮೇಲುರಸ್ತೆ ನಿರ್ಮಾಣವಾಗಲಿದೆ. ಈ ಮೇಲುರಸ್ತೆಯು ಈಗ ಇರುವ ಮೇಲುರಸ್ತೆ ಹಾಗೂ ಮೆಟ್ರೋ ಮಾರ್ಗಕ್ಕೆ ಅಡ್ಡಿ ಆಗಬಹುದೆಂಬ ಆತಂಕವಿದೆ. ಆದರೆ ಈ ಸಮಸ್ಯೆಯಾಗದಂತೆ ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಲುರಸ್ತೆಯ ಜತೆಗೆ 9 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸ್ಕೈವಾಕ್ ನಿರ್ಮಿಸುವ ಯೋಜನೆಯೂ ಇದೆ.

ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಕೆಆರ್‌ಪುರ-ಸಿಲ್ಕ್ ಬೋರ್ಡ್ ನಡುವಿನ 17 ಕಿ.ಮೀ ಉದ್ದದ ಮಾರ್ಗ ನಿರ್ಮಿಸಲು 4,202 ಕೋಟಿ ರೂ. ಖರ್ಚಾಗಲಿದೆ. ಈ ಯೋಜನಾ ವೆಚ್ಚದಾಯಕವಾಗಿರುವುದರಿಂದ ಖಾಸಗಿ ಕಂಪನಿಗಳ ಸಹಾಯ ಪಡೆಯಲಾಗುತ್ತಿದೆ.

English summary
Embassy group, a prestigious real estate group company will invest Rs.250 crores for proposed Kadubeesanahalli metro station and elevated road which will help thousands of IT professionals working in Manyata tech park. Embassy group will invest Rs.250 crores for Metro and elevated road,ಮೆಟ್ರೋ ನಿಲ್ದಾಣ, ಮೇಲು ರಸ್ತೆಗೆ ಎಂಬಸ್ಸಿಯಿಂದ ಹೂಡಿಕೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X