ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ವಾಹನ ಸವಾರರಿಗೆ ಸಿಹಿ ಸುದ್ದಿ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಜೂನ್ 2023ಕ್ಕೆ ಆರಂಭ

|
Google Oneindia Kannada News

ಬೆಂಗಳೂರು, ಡಿ. 23: ಟೆಕ್ ಹಬ್ ಎಲೆಕ್ಟ್ರಾನಿಕ್ ಸಿಟಿಯನ್ನು ಬೆಂಗಳೂರಿನ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಹೊಸೂರು ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅದೊಂದು ಪ್ರಸವ ವೇದನೆಯೇ ಸರಿ.

ಹೊಸೂರು ರಸ್ತೆಯ ಟ್ರಾಫಿಕ್‌ನಲ್ಲಿ ಸಂಚಾರವೂ ಸಹ ಕಚೇರಿಗೆ ಹೋಗುವವರು ಮತ್ತು ವಿದ್ಯಾರ್ಥಿಗಳಿಗೆ ಕಷ್ಟವೇ ಸರಿ. ಅದರಲ್ಲೂ ವಾರಾಂತ್ಯದಲ್ಲಿ ಖಾಸಗಿ ಬಸ್ ಗಳು ಅಕ್ರಮವಾಗಿ ರಸ್ತೆಗಳಲ್ಲಿ ನಿಲುಗಡೆ ಮಾಡುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನು, ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಸ್ತೆಯ ಮೂಲಕ 50 ಕಿಮೀ ಪ್ರಯಾಣಿಸುವುದು ತುಂಬಾ ಬೇಸರದ ಸಂಗತಿಯಾಗಿದೆ.

ಬೆಂಗಳೂರಿಗರ ಪ್ರಯಾಣ ಸುಲಭಗೊಳಿಸಲಿರುವ ಈ ನಾಲ್ಕು ಮೆಟ್ರೋ ಮಾರ್ಗಗಳ ಬಗ್ಗೆ ತಿಳಿಯಿರಿಬೆಂಗಳೂರಿಗರ ಪ್ರಯಾಣ ಸುಲಭಗೊಳಿಸಲಿರುವ ಈ ನಾಲ್ಕು ಮೆಟ್ರೋ ಮಾರ್ಗಗಳ ಬಗ್ಗೆ ತಿಳಿಯಿರಿ

ಇದಕ್ಕೆಲ್ಲ ಜೂನ್ 2023 ರಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎನ್ನಲಾಗಿರುವ, 19 ಕಿಮೀ ಉದ್ದದ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ (ಬೊಮ್ಮಸಂದ್ರ - ಆರ್‌ವಿ ರಸ್ತೆ ಹಳದಿ ಮಾರ್ಗ) ಹೊಸೂರು ರಸ್ತೆಯ ಜನದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಹೇಳಿರುವ ಗಡುವನ್ನು ಅನುಸರಿಸಿದರೆ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ.

Electronic City Metro by June 2023

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಸಹ ಬಸ್ ನಿಲ್ದಾಣಗಳು, ಪಾದಚಾರಿ ಮಾರ್ಗಗಳು, ಫುಟ್ ಬ್ರಿಡ್ಜ್‌ಗಳು ಮತ್ತು ಮುಂಬರುವ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಒಳಚರಂಡಿಯನ್ನು ನಿರ್ಮಿಸಲು ಯೋಜಿಸುತ್ತಿದೆ.

ಈ ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗವು ರಾಷ್ಟ್ರೀಯ ವಿದ್ಯಾಲಯ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ (ಎಚ್‌ಎಸ್‌ಆರ್ ಲೇಔಟ್), ಹೊಂಗಸಂದ್ರ (ಆಕ್ಸ್‌ಫರ್ಡ್ ಕಾಲೇಜು), ಕುಡ್ಲು ಗೇಟ್ (ಮುನೇಶ್ವರ ನಗರ), ಸಿಂಗಸಂದ್ರ (ಚಿಕ್ಕಬೇಗೂರು), ಹೊಸ ರಸ್ತೆ (ಚಿಕ್ಕಬೇಗೂರು), ಹೊಸ ರಸ್ತೆ ( ಬಸಾಪುರ ರಸ್ತೆ), ಬೆರಟೆನ ಅಗ್ರಹಾರ (ಹೊಸ ರಸ್ತೆ), ಎಲೆಕ್ಟ್ರಾನಿಕ್ಸ್ ಸಿಟಿ, ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ (ಎಲೆಕ್ಟ್ರಾನಿಕ್ಸ್ ಸಿಟಿ - II), ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ಮೂಲಕ ಹಾದು ಹೋಗಲಿದೆ.

ಹಳದಿ ಮಾರ್ಗವು 2021 ರಲ್ಲಿ ಪೂರ್ಣಗೊಳ್ಳಬೇಕಿತ್ತು. ನಂತರ ಅದನ್ನು ಡಿಸೆಂಬರ್ 2022 ಕ್ಕೆ ಮುಂದೂಡಲಾಗಿತ್ತು. ಮತ್ತೆ ಅದನ್ನು ಜೂನ್ 2023 ಕ್ಕೆ ವಿಸ್ತರಿಸಲಾಗಿದೆ.

Electronic City Metro by June 2023

ಹೊಂಗಸಂದ್ರ, ಸಿಂಗಸಂದ್ರ, ಹೊಸ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಮತ್ತು ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ ಮುಂತಾದ ನಿಲ್ದಾಣಗಳಿಗೆ ಹೊಸೂರು ರಸ್ತೆಯ ಫುಟ್ ಬ್ರಿಡ್ಜ್‌ಗಳ ಮೂಲಕ ಸಂಪರ್ಕಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋನ ಹಳದಿ ರೇಖೆಯು ಜಯನಗರ, ಬಿಟಿಎಂ ಲೇಔಟ್ ಮತ್ತು ಎಚ್‌ಎಸ್‌ಆರ್ ಲೇಔಟ್‌ನಂತಹ ಪ್ರದೇಶಗಳ ನಿವಾಸಿಗಳಿಗೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಮತ್ತು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಸಹಾಯ ಮಾಡುತ್ತದೆ.

ಇದಲ್ಲದೆ, ಬೊಮ್ಮಸಂದ್ರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣಗಳ ನಡುವಿನ ಮೆಟ್ರೋ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Electronic City Metro by June 2023

ಬಿಎಂಆರ್‌ಸಿಎಲ್‌ ದಾಖಲೆಗಳ ಪ್ರಕಾರ, ನವೆಂಬರ್ 2022 ರವರೆಗೆ, ಬೊಮ್ಮಸಂದ್ರ-ಬೆರಟೆನ ಅಗ್ರಹಾರ (ಹೊಸ ರಸ್ತೆ) ಮತ್ತು ಬೆರಟೆನ ಅಗ್ರಹಾರ-ಬೊಮ್ಮನಹಳ್ಳಿಯಲ್ಲಿ ತಲಾ 98. 9% ಸಿವಿಲ್ ಕಾಮಗಾರಿ ಮತ್ತು ಬೊಮ್ಮನಹಳ್ಳಿ-ಆರ್‌ವಿ ರಸ್ತೆ ವಿಭಾಗಗಳ ಕಾಮಗಾರಿ 96. 2% ಪೂರ್ಣಗೊಂಡಿದೆ. ಅಲ್ಲದೆ ಹೆಬ್ಬಗೋಡಿ ಡಿಪೋದಲ್ಲಿ ಶೇ.87ರಷ್ಟು ಸಿವಿಲ್ ಕಾಮಗಾರಿಯೂ ಮುಗಿದಿದೆ.

English summary
Bengaluru: Electronic City Metro by June 2023, it will help to reduce traffic in Hosur Road. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X