ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಪ್ರತಿ 500 ಮೀ. ಗೆ ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್‌ ಕೇಂದ್ರ

|
Google Oneindia Kannada News

ಬೆಂಗಳೂರು, ಆಗಸ್ಟ್‌ 30: ಇ-ಮೊಬಿಲಿಟಿಗೆ ಪ್ರಮುಖ ಉತ್ತೇಜನಕಾರಿಯಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) 2023-24 ರ ವೇಳೆಗೆ ನಗರದಲ್ಲಿ ಪ್ರತಿ 500 ಮೀಟರ್‌ಗೆ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ.

ಪ್ರಸ್ತುತ ಪ್ರತಿ 4-5 ಕಿ. ಮೀ. ವ್ಯಾಪ್ತಿಯಲ್ಲಿ ಚಾರ್ಜಿಂಗ್ ಸ್ಟೇಷನ್ ಇದೆ. ನಾವು ಈಗ ಪ್ರತಿ 500 ಮೀಟರ್‌ಗೆ ಸೌಲಭ್ಯವನ್ನು ಒದಗಿಸಲು ಯೋಜಿಸುತ್ತಿದ್ದೇವೆ. ಆದ್ದರಿಂದ ವಿದ್ಯುತ್‌ ವಾಹನ ಮಾಲೀಕರಲ್ಲಿ ಯಾವುದೇ ಆತಂಕ ಇರುವುದಿಲ್ಲ ಎಂದು ಬೆಸ್ಕಾಂನ ಉಪ ವ್ಯವಸ್ಫಾಪಕ ಶ್ರೀನಾಥ್ ಕೆ. ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗೆ ಹೊಸ ನಿಯಮ, ಬ್ಯಾಟರಿಗೆ ರೇಟಿಂಗ್ಸ್‌ ಹೇಗೆ ಸಿಗುತ್ತೆ? ತಿಳಿಯಿರಿಎಲೆಕ್ಟ್ರಿಕ್ ವಾಹನಗಳಿಗೆ ಹೊಸ ನಿಯಮ, ಬ್ಯಾಟರಿಗೆ ರೇಟಿಂಗ್ಸ್‌ ಹೇಗೆ ಸಿಗುತ್ತೆ? ತಿಳಿಯಿರಿ

ಬೆಸ್ಕಾಂ ಸದ್ಯ ನಗರದಾದ್ಯಂತ 148 ಸ್ಥಳಗಳಲ್ಲಿ 334 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ ಮೂವತ್ತು ನೇರ ಪ್ರವಾಹ (DC) ಬಿಂದುಗಳು, ಉಳಿದವುಗಳು ಪರ್ಯಾಯ ವಿದ್ಯುತ್ (AC)ಕೇಂದ್ರಗಳಾಗಿವೆ.
ಇವಿ ಮಾಲೀಕರಿಗೆ ಬೆಸ್ಕಾಂ ದೇಶದಲ್ಲೇ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್‌ ದರ ವಿಧಿಸುತ್ತಿದೆ.

ಎಸಿ ಚಾರ್ಜಿಂಗ್‌ಗೆ ನಿಗದಿಪಡಿಸಲಾದ (ಪ್ರತಿ kWh ಗೆ) ಸುಂಕವು 7.51 ರೂ. ಇದು ಡಿಸಿ ಚಾರ್ಜಿಂಗ್‌ಗೆ ರೂ. 7.65-8.32 ಆಗಿದೆ. ನಗರದಲ್ಲಿ ಚಾರ್ಜಿಂಗ್ ಸೆಷನ್‌ಗಳ ಸಂಖ್ಯೆಯು 2020 ರಲ್ಲಿ ತಿಂಗಳಿಗೆ 1,500 ರಿಂದ 40,000-54,000 ಕ್ಕೆ ಹೆಚ್ಚಾಗಿದೆ. ಇದು ಕೂಡ ಹೆಚ್ಚಿನ ಜನರು ಬ್ಯಾಟರಿ ಚಾಲಿತ ವಾಹನಗಳಿಗೆ ಬದಲಾಯಿಸುವ ಸೂಚನೆಯಾಗಿದೆ ಎಂದು ಶ್ರೀನಾಥ್ ಹೇಳಿದರು.

ಇವಿ ಚಾರ್ಜಿಂಗ್ ಕೇಂದ್ರಗಳ ಬಗ್ಗೆ ಮಾಹಿತಿ ನೀಡಲು ಬೆಸ್ಕಾಂ 'ಇವಿ ಮಿತ್ರ' ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ವಿದ್ಯುತ್‌ ವಾಹನ ಬಳಕೆದಾರರು ಆನ್‌ಲೈನ್‌ನಲ್ಲಿಯೂ ಪಾವತಿಗಳನ್ನು ಮಾಡಬಹುದು. ಕರ್ನಾಟಕದಲ್ಲಿ 1.3 ಲಕ್ಷ ವಿದ್ಯುತ್‌ ವಾಹನಗಳಿವೆ. ಅವುಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿ ಸಂಚರಿಸುತ್ತಿವೆ ಎಂದು ಅವರು ಹೇಳಿದರು.

ಹೆಚ್ಚಿನ ಆಟೋ ಚಾಲಕರಿಗೆ ಅನುಕೂಲ

ಹೆಚ್ಚಿನ ಆಟೋ ಚಾಲಕರಿಗೆ ಅನುಕೂಲ

ಆಟೋ ಸ್ಟ್ಯಾಂಡ್‌ಗಳ ಬಳಿ ಎಸಿ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಬೆಸ್ಕಾಂ ನಗರದ ಆಟೋರಿಕ್ಷಾ ಸಂಘದವರನ್ನು ಸಹ ಕೇಳಿದೆ. ನಾವು ಆಟೋ ಸ್ಟ್ಯಾಂಡ್‌ಗಳಲ್ಲಿ ಪರ್ಯಾಯ ವಿದ್ಯುತ್ (ಎಸಿ) ಚಾರ್ಜಿಂಗ್ ಘಟಕಗಳನ್ನು ಉಚಿತವಾಗಿ ಸ್ಥಾಪಿಸುತ್ತೇವೆ. ಆದ್ದರಿಂದ ಹೆಚ್ಚಿನ ಆಟೋ ಚಾಲಕರು ಬ್ಯಾಟರಿ ಚಾಲಿತ ವಾಹನಗಳಿಗೆ ಬದಲಾಯಿಸಬಹುದು. ಆದರೆ ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಶ್ರೀನಾಥ್ ಹೇಳಿದರು.

ಮುಂಬೈನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಸಂಚಾರಮುಂಬೈನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಸಂಚಾರ

ಚಾರ್ಜಿಂಗ್ ಸ್ಟೇಷನ್‌ಗಳ ಸೇವಾ ಶುಲ್ಕ ನಿಗದಿ

ಚಾರ್ಜಿಂಗ್ ಸ್ಟೇಷನ್‌ಗಳ ಸೇವಾ ಶುಲ್ಕ ನಿಗದಿ

ರಾಜ್ಯದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಬೆಸ್ಕಾಂ ಅನ್ನು ನೋಡಲ್ ಏಜೆನ್ಸಿ ಎಂದು ಸೂಚಿಸಲಾಗುತ್ತದೆ. ಅವರ ಜವಾಬ್ದಾರಿಗಳೆಂದರೆ, ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳ ಸೇವಾ ಶುಲ್ಕಗಳ ಮೇಲಿನ ಸೀಲಿಂಗ್ ಅನ್ನು ನಿಗದಿಪಡಿಸುವುದು, ಇವಿ-ಚಾರ್ಜಿಂಗ್ ಮೂಲಸೌಕರ್ಯವನ್ನು ರಚಿಸುವುದು, ಸ್ಟೇಷನ್‌ಗಳನ್ನು ಸ್ಥಾಪಿಸಲು, ನಿರ್ವಹಿಸಲು ಮತ್ತು ಅನುಷ್ಠಾನಗೊಳಿಸುವ ಏಜೆನ್ಸಿಗಳನ್ನು ಆಯ್ಕೆ ಮಾಡುವುದು ಮತ್ತು ಮೂಲಸೌಕರ್ಯಗಳನ್ನು ಸ್ಥಾಪಿಸಲು ನಗರಗಳು ಮತ್ತು ಹೆದ್ದಾರಿಗಳನ್ನು ಗುರುತಿಸುವುದಾಗಿದೆ.

ಎಲ್ಲಾ ಮಾಹಿತಿಗಾಗಿ ಒನ್ ಸ್ಟಾಪ್ ಸೈಟ್

ಎಲ್ಲಾ ಮಾಹಿತಿಗಾಗಿ ಒನ್ ಸ್ಟಾಪ್ ಸೈಟ್

ಬೆಸ್ಕಾಂ, ನೀತಿ ಆಯೋಗ, ಕರ್ನಾಟಕ ಸರ್ಕಾರ ಮತ್ತು ಯುಕೆ ಸರ್ಕಾರದೊಂದಿಗೆ ವಿದ್ಯುತ್ ಚಲನಶೀಲತೆಯ ಬಗ್ಗೆ ಜಾಗೃತಿ ಮೂಡಿಸಲು ಪೋರ್ಟಲ್ (evjagruthi.karnataka.gov.in) ರಚಿಸಿದೆ. ಈ ಪೋರ್ಟಲ್ ರಾಜ್ಯದಲ್ಲಿ ಇವಿಗಳ ಅಳವಡಿಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ 'ಒನ್ ಸ್ಟಾಪ್ ಸೈಟ್' ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಶ್ರೀನಾಥ್ ಹೇಳಿದರು.

ರಾಜ್ಯದಲ್ಲೂ 1,000ಕ್ಕೂ ಹೆಚ್ಚು ಸ್ಟೇಷನ್‌

ರಾಜ್ಯದಲ್ಲೂ 1,000ಕ್ಕೂ ಹೆಚ್ಚು ಸ್ಟೇಷನ್‌

ಎಚ್‌ಎಸ್‌ಆರ್ ಲೇಔಟ್, ಮಲ್ಲೇಶ್ವರಂ, ಪೀಣ್ಯ, ಹೆಬ್ಬಾಳ ಮತ್ತು ಮಹದೇವಪುರದಂತಹ ಪ್ರದೇಶಗಳು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವುದರಿಂದ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ವರ್ಷದ ಅಂತ್ಯದ ವೇಳೆಗೆ ಬಳಕೆದಾರರ ಅನುಕೂಲಕ್ಕಾಗಿ ನಗರದಾದ್ಯಂತ ಹಲವು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ನಾವು ಯೋಜಿಸುತ್ತಿದ್ದೇವೆ. ರಾಜ್ಯ ಸರ್ಕಾರವು (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಪಿಪಿಪಿ ಮಾದರಿಯಲ್ಲಿ ರಾಜ್ಯದಲ್ಲೂ 1,000ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಯೋಜಿಸಿದೆ ಎಂದು ತಿಳಿಸಿದರು.

English summary
In a major boost to e-mobility, Bangalore Electricity Supply Company Limited (BESCOM) plans to set up public electric vehicle charging stations every 500 meters in the city by 2023-24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X