ಸಬ್‌ಸ್ಟೇಷನ್‌ ಅಪೂರ್ಣ: ಬೆಂಗಳೂರು-ಮೈಸೂರು ವಿದ್ಯುತ್‌ ರೈಲು ವಿಳಂಬ

ಬೆಂಗಳೂರು, ಜೂನ್‌ 26: ಮೈಸೂರು ಹಾಗೂ ಬೆಂಗಳೂರು ನಡುವಿನ ವಿದ್ಯುತ್‌ ರೈಲು ಮಾರ್ಗದಲ್ಲಿ ವಿದ್ಯುತ್‌ ಉಪಕೇಂದ್ರ ಸ್ಥಾಪನೆಯಲ್ಲಿ ವಿಳಂಬವಾಗುತ್ತಿರುವ ಕಾರಣ ವಿದ್ಯುತ್‌ ರೈಲು ಸಂಚಾರದಲ್ಲಿ ಅಡಚಣೆ ಉಂಟಾಗುತ್ತಿದೆ.

ಈ ನಡುವಿನ ಮಾರ್ಗ ವಿದ್ಯುದೀಕರಣಗೊಂಡು ಆರು ತಿಂಗಳು ಕಳೆದಿದೆ ಆದರೆ ಪೂರ್ಣ ಪ್ರಮಾಣದಲ್ಲಿ ಇನ್ನೂ ವಿದ್ಯುತ್ ರೈಲುಗಳು ಸಂಚರಿಸುತ್ತಿಲ್ಲ, ಮಂಡ್ಯದ ಎಲಿಯೂರಿನಲ್ಲಿ ಸ್ಥಾಪನೆಗೊಂಡಿರುವ ವಿದ್ಯುತ್‌ ಉಪಕೇಂದ್ರಕ್ಕೆ ಕೆಪಿಟಿಸಿಎಲ್‌ನಿಂದ ವಿದ್ಯುತ್‌ ಸರಬರಾಜಾಗುತ್ತಿಲ್ಲದ ಕಾರಣ ವಿದ್ಯುತ್‌ ಆಧಾರಿತ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಮಂಡ್ಯ ಜಿಲ್ಲಾಡಳಿತ ಮತ್ತು ಈ ಭಾಗದ ಎಲ್ಲ ಚುನಾಹಿತ ಜನಪ್ರತಿನಿದಿಗಳು ಆದಷ್ಟು ಬೇಗ ಸಭೆ ಸೇರಿ ರೈತರ ಭೂಮಿಗೆ ಸಮರ್ಪಕವಾದ ಪರಿಹಾರವನ್ನು ನಿಗದಿ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕೊಡಬೇಕೆಂದು ಮೈಸೂರು ರೈಲು ಬಳಕೆದಾರರ ಮನವಿ ಮಾಡಿದೆ.

Electric train between Bengaluru and Mysuru still a dream

ರೈಲ್ವೆ ಇಲಾಖೆಯು ಎಲಿಯೂರಿನಲ್ಲಿ ಸ್ಥಾಪಿಸಿರುವ ಉಪವಿದ್ಯುತ್‌ ಕೇಂದ್ರಕ್ಕೆ ವಿದ್ಯುತ್‌ ಪೂರೈಕೆಗಾಗಿ ಕೆಪಿಟಿಸಿಎಲ್‌ 13 ಕೋಟಿ ರೂ. ಸಂದಾಯ ಮಾಡಿದೆ. ಈ ಕಾರ್ಯ ಪೂರ್ಣಗೊಳ್ಳಲು ಎಲಿಯೂರಿನಿಂದ ತೂಬಿನಕೆರೆವರೆಗೂ ಹೊಸ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಅಳವಡಿಸುವ ಅಗತ್ಯವಿದೆ.

ಈ ವಿದ್ಯುತ್‌ ಮಾರ್ಗವು ರೈತರ ಕೃಷಿ ಭೂಮಿಯ ಮೂಲಕ ಹಾದು ಹೋಗಬೇಕಾಗಿರುವುದರಿಂದ ಅಲ್ಲಿನ ರೈತರಿಗೆ ಸರಿಯಾದ ಪರಿಹಾರ ನಿಗದಿಯಾಗದ ಕಾರಣ ಕಾರ್ಯ ವಿಳಂಬಗೊಳ್ಳುತ್ತಿದೆ. ಆದಷ್ಟು ಬೇಗ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯುತ್‌ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮೈಸೂರು ರೈಲು ಬಳೆಕದಾರರ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+