ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Electric Bus: ನಾಳೆಯಿಂದ ಬೆಂಗಳೂರು- ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್: ವಿಶೇಷತೆಗಳು, ದರ ತಿಳಿಯಿರಿ

|
Google Oneindia Kannada News

ಬೆಂಗಳೂರು, ಜ. 15: ಬೆಂಗಳೂರು ಮತ್ತು ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್ ಸೇವೆ ಜನವರಿ 16ರ ಸೋಮವಾರದಂದು ಪ್ರಾರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಆಯೋಗ (ಕೆಎಸ್‌ಆರ್‌ಟಿಸಿ) ಪ್ರಕಟಿಸಿದೆ.

ಇದು ರಾಜ್ಯದಲ್ಲಿಯೇ ಮೊದಲ ಇಂಟರ್‌ಸಿಟಿ ಎಲೆಕ್ಟ್ರಿಕ್ ಬಸ್ ಸೇವೆಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಹತ್ವಪೂರ್ಣ ಯೋಜನೆಯಾಗಿರುವ ಇದರ ಅಡಿಯಲ್ಲಿ ಒಟ್ಟು 50 ಬಸ್‌ಗಳನ್ನು ಬಿಡಲು ಇಲಾಖೆ ನಿರ್ಧರಿಸಿದೆ. ಅದರ ಮೊದಲ ಹಂತದಲ್ಲಿ ರಾಜಧಾನಿ ಬೆಂಗಳೂರು ಮತ್ತು ಮೈಸೂರಿನ ನಡುವೆ ಕೆಎಸ್‌ಆರ್‌ಟಿಸಿ ಇವಿ ಪವರ್ ಪ್ಲಸ್ ಬಸ್ ಸಂಚರಿಸಲಿದೆ.

KSRTC Electric Bus: ಜ.16 ರಿಂದ ಬೆಂಗಳೂರು-ಮೈಸೂರು ಮಧ್ಯೆ ಮೊದಲ ಅಂತರ್ ಜಿಲ್ಲಾ ಬಸ್ ಸಂಚಾರKSRTC Electric Bus: ಜ.16 ರಿಂದ ಬೆಂಗಳೂರು-ಮೈಸೂರು ಮಧ್ಯೆ ಮೊದಲ ಅಂತರ್ ಜಿಲ್ಲಾ ಬಸ್ ಸಂಚಾರ

ಈ ಎಲೆಕ್ಟ್ರಿಕ್ ಬಸ್ ಪವರ್ ಪ್ಲಸ್ ವೈ-ಫೈ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿದೆ.

ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಈ ಬಸ್‌ಗಳನ್ನು ತಯಾರಿಸಿದೆ. ಡಿಸೆಂಬರ್‌ನಲ್ಲಿ ಮೂಲಮಾದರಿಯ ಇ-ಬಸ್ ಅನ್ನು ವಿತರಿಸಿದೆ. ಇನ್ನು, ಈ ಯೋಜನೆ ಅಡಿಯಲ್ಲಿ ಕೆಎಸ್‌ಆರ್‌ಟಿಸಿಯು ರಾಜಧಾನಿ ಬೆಂಗಳೂರನ್ನು ರಾಜ್ಯದ ಬೇರೆ ಬೇರೆ ನಗರಗಳಾದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿಗಳಿಗೆ ಸಂಪರ್ಕಿಸಲು ಇವುಗಳನ್ನು ಬಿಡಲು ಚಿಂತಿಸುತ್ತಿದೆ.

Electric Bus Services to Bengaluru - Mysuru begin Monday, Price details here

ಭವಿಷ್ಯದಲ್ಲಿ ರಾಜಧಾನಿ ಬೆಂಗಳೂರು ಮತ್ತು ಸಣ್ಣ ಪಟ್ಟಣಗಳ ನಡುವೆ ಹೆಚ್ಚಿನ ಎಲೆಕ್ಟ್ರಿಕ್ ಬಸ್ ಸೇವೆಗಳನ್ನು ಘೋಷಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ನಾಳೆಯಿಂದ ಸಂಚಾರ ಸೇವೆ ನೀಡಲಿರುವ ಈ ಎಲೆಕ್ಟ್ರೀಕ್ ಬಸ್‌ಗಳ ದರ ಇಂತಿದೆ. ಕೆಎಸ್‌ಆರ್‌ಟಿಸಿ ಪ್ರಕಾರ, ಎಸಿ ಬಸ್ ಸೇವೆ ದರವನ್ನು ರೂ. 330 ಮತ್ತು ನಾನ್ ಎಸಿ ಬಸ್ ಸೇವಾ ದರ ರೂ. 240ಗೆ ಇರಿಸಲಾಗಿದೆ. ಎರಡೂ ನಗರಗಳ ನಡುವೆ ಒಟ್ಟು 12 ಬಸ್‌ಗಳನ್ನು ಬಿಡಲಾಗುತ್ತದೆ. ನಂತರ ಹಂತ ಹಂತವಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದಿದೆ.

Electric Bus Services to Bengaluru - Mysuru begin Monday, Price details here

ಇದರ ಜೊತೆಗೆ ಬೆಂಗಳೂರು ಮತ್ತು ಮೈಸೂರು ನಡುವಿನ ಎಕ್ಸ್‌ಪ್ರೆಸ್‌ವೇ ಫೆಬ್ರವರಿ ವೇಳೆಗೆ ಜನರ ಸೇವೆಗೆ ಲಬ್ಯವಿರುವ ಕಾರಣ, ಈ ಬಸ್ ಸೇವೆಗಳು ಪ್ರಯಾಣದ ಸಮಯವನ್ನು 90 ನಿಮಿಷಗಳಿಗೆ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೆಂಗಳೂರು ಮೆಟ್ರೋ ಸಾರಿಗೆ ಸಂಸ್ಥೆ (ಬಿಎಂಟಿಸಿ) 100 ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸಿತು. ಈ ಬಸ್‌ಗಳು ವೀಲ್‌ಚೇರ್ ಸೌಲಭ್ಯವನ್ನು ಹೊಂದಿದ್ದು ಅದು ವಿದ್ಯುತ್ ಚಾಲಿತವಾಗಿದೆ. ಈ ಎಲೆಕ್ಟ್ರಿಕ್ ಬಸ್‌ಗಳಲ್ಲೂ ಸಹ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು, ಎಲ್‌ಇಡಿ ದೀಪಗಳು ಮತ್ತು ತುರ್ತು ಪ್ಯಾನಿಕ್ ಬಟನ್‌ಗಳೂ ಇದ್ದವು.

English summary
Karnataka State Road Transport Commission (KSRTC) starts electric bus services between Bengaluru and Mysuru will begin on January 16. AC bus service fare is fixed as Rs. 330 and the non-AC bus service fare will be Rs. 240. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X