ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಅಕ್ರಮ, ತೇಜಸ್ವಿ ಸೂರ್ಯ ವಿರುದ್ಧ ವಕೀಲರಿಂದ ದೂರು

|
Google Oneindia Kannada News

Recommended Video

ತೇಜಸ್ವಿ ಸೂರ್ಯ ವಿರುದ್ಧ ಎರಡು ವಕೀಲರಿಂದ ದೂರು

ಬೆಂಗಳೂರು, ಏಪ್ರಿಲ್ 12: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ವಕೀಲರಿಬ್ಬರು ದೂರು ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ವಕೀಲರಾದ ಬಿ. ಸಂಜಯ್ ಯಾದವ್, ಮೊಹಮ್ಮದ್ ಅಯೂಬ್ ಅಲಿ ಅವರು ತೇಜಸ್ವಿ ಸೂರ್ಯ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ತೇಜಸ್ವಿ ಸೂರ್ಯ ವಿರುದ್ಧ ಮಹಿಳೆ ಆರೋಪ ಏನು, ಅದು ಎಲ್ಲಿಗೆ ಬಂತು?ತೇಜಸ್ವಿ ಸೂರ್ಯ ವಿರುದ್ಧ ಮಹಿಳೆ ಆರೋಪ ಏನು, ಅದು ಎಲ್ಲಿಗೆ ಬಂತು?

ಈ ಹಿಂದೆ ತೇಜಸ್ವಿ ಸೂರ್ಯ ಅವರ ಹಳೆ ಟ್ವೀಟ್ಸ್, ಮೋದಿ ಬೆಂಬಲಿಸದಿರುವವರು ದೇಶದ್ರೋಹಿಗಳು ಎಂಬ ಹೇಳಿಕೆ ಬಗ್ಗೆ ಕೂಡಾ ದೂರು ನೀಡಲಾಗಿತ್ತು.

Elections 2019: Advocates complaint with EC against Tejasvi Surya

ಬಾಲಕೋಟ್ ವೈಮಾನಿಕ ದಾಳಿಯನ್ನು ಬಿಜೆಪಿ ಸಾಧನೆ ಎನ್ನುವಂತೆ ಬಿಂಬಿಸಿ ತೇಜಸ್ವಿ ಸೂರ್ಯ ಚುನಾವಣೆ ಪ್ರಚಾರ ನಡೆಸಿದ್ದಾರೆ. ಮೋದಿ ಮತ್ತೊಮ್ಮೆ ಹೆಸರಿನ ಪ್ರಚಾರ ನಡೆಸಿದ್ದು, ತಮ್ಮ ಚುನಾವಣಾ ಪ್ರಚಾರ ಕರಪತ್ರಗಳಲ್ಲಿ ಈ ಬಗ್ಗೆ ಮುದ್ರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಮಹಿಳಾ ಆಯೋಗ ನೋಟಿಸ್ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಮಹಿಳಾ ಆಯೋಗ ನೋಟಿಸ್

ಆದರೆ, ತೇಜಸ್ವಿ ಸೂರ್ಯ ಅವರ ಪ್ರಚಾರದ ಕರಪತ್ರದಲ್ಲಿ ಮೋದಿ ಅವರ ಸರ್ಕಾರದ ಸಾಧನೆ ಬಗ್ಗೆ ಮಾಹಿತಿ ಇರುವುದು ನಿಜವಾದರೂ, ತಾಯ್ನಾಡಿನ ರಕ್ಷಣೆ ನಮ್ಮ ಹೊಣೆ ಎಂಬ ವಿಭಾಗದಲ್ಲಿ ' ಸರ್ಜಿಕಲ್ ಸ್ಟ್ರೈಕ್-ದಿಟ್ಟ ಉತ್ತರದ ಮೂಲಕ ಭಾರತದ ಹೊಸ ಮಾನದಂಡ ಎಂದು ಮಾತ್ರ ಬರೆಯಲಾಗಿದೆ. ಇದಲ್ಲದೆ, 36 ಸುಸಜ್ಜಿತ ಯುದ್ಧ ವಿಮಾನ ಖರೀದಿ, ಅಗ್ನಿ 5 ಕ್ಷಿಪಣಿ ಪ್ರಯೋಗ ಯಶಸ್ವಿ ಬಗ್ಗೆ ಉಲ್ಲೇಖವಿದೆ.

English summary
Elections 2019: Two Advocates filed a complaint with the Election Commission against Tejasvi Surya, BJP candidate from Bangalore South Lok Sabha constituency, for his alleged remark about Balakot Airstrike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X