ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆಗೆ ಸಜ್ಜಾದ ಬೆಂಗಳೂರು ಪೊಲೀಸ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ಚುನಾವಣಾ ಪ್ರಕ್ರಿಯೆ ಶಾಂತ ರೀತಿಯಿಂದ ನಡೆಸುವ ಸಂಬಂಧ ವಿಸ್ತೃತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಗುರುವಾರ ಹೇಳಿದ್ದಾರೆ.

ಬಿಬಿಎಂಪಿ ಚುನಾವಣೆಗೆ ಬಹಿರಂಗ ಪ್ರಚಾರ ಗುರುವಾರ ಬೆಳಗ್ಗೆ ಅಂತ್ಯವಾಗಿದೆ. 22-08-2015 ರಂದು 198 ವಾರ್ಡ್ ಗಳಿಗೆ ಮತದಾನ ನಡೆಯಲಿದ್ದು,ವಿವಿಧ ರಾಜಕೀಯ ಪಕ್ಷಗಳಿಂದ ಒಟ್ಟಾರೆಯಾಗಿ 1121 ಅಭ್ಯರ್ಥಿಗಳು ಸ್ಪರ್ಧಿಯಲ್ಲಿರುತ್ತಾರೆ ಎಂದು ಮೇಘರಿಕ್ ಅವರು ವಿವರಿಸಿದರು.

ಕಳೆದ ಬಾರಿ ಶೇ.44ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗ, ಬಿಬಿಎಂಪಿ, ನಗರಪೊಲೀಸ್ ಇಲಾಖೆ ಸಜ್ಜಾಗಿವೆ.

Bengaluru Police Preparation for BBMP Election 2015

ಬಿಬಿಎಂಪಿ ಚುನಾವಣೆಗೆ ಪೂರ್ವ ತಯಾರಿ ಮುಖ್ಯಾಂಶಗಳು:
* ಒಟ್ಟು 6554 ಮತಗಟ್ಟೆಗಳಿದ್ದು ಅದರಲ್ಲಿ 1700-ಅತಿಸೂಕ್ಷ್ಮ,1991-ಸೂಕ್ಷ್ಮ ಮತ್ತು 2863-ಸಾಮಾನ್ಯ ಮತಗಟ್ಟೆಗಳಿವೆ.
* ಅತಿಸೂಕ್ಷ್ಮ ಮತಗಟ್ಟೆಗಳಿಗೆ 1-ಎಚ್ ಸಿ & 1-ಪಿಸಿ/1-ಹೋಮ್ ಗಾರ್ಡ್, ಸೂಕ್ಷ್ಮ ಮತಗಟ್ಟೆಗಳಿಗೆ 1- ಎಚ್ ಸಿ/ಪಿಸಿ & 1-ಹೋಮ್ ಗಾರ್ಡ್ ಮತ್ತು ಸಾಮಾನ್ಯ ಮತಗಟ್ಟೆಗಳಿಗೆ 1-ಪಿಸಿ ರಂತೆ ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಲಾಗಿರುತ್ತದೆ.

* 751 ಸೆಕ್ಟರ್ ಮೊಬೈಲ್ ಗಳನ್ನು ನಿಯೋಜಿಸಲಾಗಿದ್ದು ಸದರಿ ಮೊಬೈಲ್ ಗಳ ಉಸ್ತುವಾರಿ ಕರ್ತವ್ಯವನ್ನು ನಿರ್ವಹಿಸಲು 44 ಡಿಸಿಪಿ/ಎಸಿಪಿ ದರ್ಜೆಯ ಅಧಿಕಾರಿಗಳನ್ನು ಉಸ್ತುವಾರಿ ಮೊಬೈಲ್ ಗಳನ್ನು ನೇಮಿಸಲಾಗಿರುತ್ತದೆ.
* ಪ್ರತಿ ಠಾಣೆಗೆ 03 ಪಿಕೆಟಿಂಗ್ ಗಳ ಬೆಂಗಳೂರು ನಗರದಲ್ಲಿ 309 ಪಿಕೆಟಿಂಗ್ ಗಳ ವ್ಯವಸ್ಧೆ ಮಾಡಲಾಗಿದೆ.
* ಕರ್ನಾಟಕ ರಾಜ್ಯದ 02 ಪೊಲೀಸ್ ಕಮೀಷನರೇಟ್ ಹಾಗೂ 05 ವಲಯಗಳಿಂದ ಒಟ್ಟು 520-ಪಿಎಸ್‍ಐ/ಎಎಸ್‍ಐ & 3500 ಹೆಚ್‍ಸಿ-ಪಿಸಿ ಗಳೊಂದಿಗೆ, 7000 ಗೃಹ ರಕ್ಷಕ ಸಿಬ್ಬಂದಿಗಳು, 103 ಕೆ.ಎಸ್.ಆರ್.ಪಿ. ತುಕಡಿಗಳನ್ನು ಪ್ರತಿ ಪೊಲೀಸ್ ಠಾಣೆಗೆ 01 ರಂತೆ ನಿಯೋಜಿಸಲಾಗಿದೆ.
* ಈ ತುಕಡಿಯನ್ನು ಅರ್ಧ ಭಾಗವಾಗಿ ವಿಂಗಡಿಸಿ ನಂತರ ಒಟ್ಟಾರೆಯಾಗಿ 206 ತುಕಡಿಗಳನ್ನು ನೇಮಿಸುವುದರೊಂದಿಗೆ ಉಸ್ತುವಾರಿ ಕರ್ತವ್ಯಕ್ಕೆ ಸಿಪಿ ಸೇರಿದಂತೆ ಉಳಿದ ಎಲ್ಲಾ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಒಟ್ಟಾರೆಯಾಗಿ 19859 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ.

* ಚುನಾವಣೆಯ ಸಂಬಂಧ 850 Static Sectors & 2500 ವೈರ್ ಲೆಸ್ ಗಳನ್ನು ಬಂದೋಬಸ್ತ್ ಭಾಗವಾಗಿ ವ್ಯವಸ್ಧೆಯನ್ನು ಏರ್ಪಡಿಸಲಾಗಿರುತ್ತದೆ.
* ಇದರ ಅಂಗವಾಗಿ ಒಟ್ಟು 1336 ವ್ಯಕ್ತಿಗಳ ವಿರುದ್ಧ ಐಪಿಸಿ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಶಾಂತಿ ಸುವ್ಯವಸ್ಧೆಯನ್ನು ಕಾಪಾಡಲು ಮುಚ್ಚಳಿಕೆ ಪಡೆಯಲಾಗಿದೆ. ಒಟ್ಟು 5268 ಆಯುಧಗಳನ್ನು ಪೊಲೀಸ್ ಸುಪರ್ದಿಗೆ ಜಮಾ ಮಾಡಿ ಕೊಳ್ಳಲಾಗಿದೆ ಅಲ್ಲದೆ 1794 ನ್ಯಾಯಾಲಯದ ವಾರೆಂಟ್ ಗಳನ್ನು ಬಜಾವಣೆ ಮಾಡಲಾಗಿದೆ.

English summary
BBMP Election 2015: Election Commission and state Police prepared for smooth conducting of Bruhat Bengaluru Mahanagara Palike polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X