ಫೆ.13ರಿಂದ 'ಎಲೆಕ್ರಾಮಾ-2016' ಜಾಗತಿಕ ಸಮಾವೇಶ

ಬೆಂಗಳೂರು,ಫೆಬ್ರವರಿ,11 : ಭಾರತೀಯ ವಿದ್ಯುತ್ ಮತ್ತು ವಿದ್ಯುನ್ಮಾನ ಪರಿಕರಗಳ ಉತ್ಪಾದಕರ ಸಂಘ ಬುಧವಾರ ಎಲೆಕ್ರಾಮಾ-2016 ಜಾಗತಿಕ ವಿದ್ಯುತ್ ಪರಿಕರಗಳ ವೇದಿಕೆಗೆ ಚಾಲನೆ ದೊರೆತಿದ್ದು, ಫೆಬ್ರವರಿ 13ರಿಂದ 17ರವರೆಗೆ ಬೆಂಗಳೂರಿನ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.

ಕರ್ನಾಟಕ ಎಲೆಕ್ರಾಮಾ-2016 ಸಮಾವೇಶ ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ), ಕೆಪಿಟಿಸಿಎಲ್ (ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೋರೇಷನ್ ಲಿಮಿಟೆಡ್) ಸಹಯೋಗದಲ್ಲಿ ನಡೆಯುತ್ತಿದ್ದು, ಇದು ವಿದ್ಯುತ್ ಕ್ಷೇತ್ರದಲ್ಲಿ ಜಾಗತಿಕವಾಗಿ ಆಗಿರುವ ಪ್ರಗತಿ, ತಂತ್ರಜ್ಞಾನ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯ ಚಿತ್ರಣ ನೀಡಲಿದೆ.[ಸೌರಶಕ್ತಿಯಿಂದ ಮನೆ ಬೆಳಗಿಸಿದ ಮೈಸೂರಿನ 'ಭಕ್ತವತ್ಸಲ']

Elecrama-2016 event held from February 13th in Bengaluru

ಕರ್ನಾಟಕ ಎಲೆಕ್ರಾಮಾ-2016 ಸಮಾವೇಶಕ್ಕೆ ಸುಮಾರು 120 ರಾಷ್ಟ್ರದ ಪ್ರತಿನಿಧಿಗಳು ಹಾಗೂ 1 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಸುಮಾರು 1000 ಪ್ರದರ್ಶಕರು ತಮ್ಮ ಉತ್ಪನ್ನ, ಪರಿಕರಗಳ ಬಗ್ಗೆ, ದೇಶದ ವಿವಿಧ 1 ಸಾವಿರ ಕಾಲೇಜು ವಿದ್ಯಾರ್ಥಿಗಳ ಚಿಂತನೆ, ಅನ್ವೇಷಣೆಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಜೊತೆಗೆ ಮರುಬಳಕೆ ಇಂಧನ ಕ್ಷೇತ್ರದ ಪ್ರಗತಿ, ಇದಕ್ಕೆ ಪೂರಕವಾದ ನೂತನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದ್ದಾರೆ.

ಪ್ರದರ್ಶನ ಕುರಿತು ಮಾತನಾಡಿದ ಐಇಇಎಂಎ ಅಧ್ಯಕ್ಷ ಬಾಬು ಬಬೆಲ್, 'ವಿದ್ಯುತ್ ಕ್ಷೇತ್ರದ ಬೆಳವಣಿಗೆಗೆ ಬೇಕಾಗಿರುವ ಹೊಸತಂತ್ರಜ್ಞಾನ, ನವೀನತೆ ಇಲ್ಲಿ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಬರುವ ವರ್ಷಗಳಲ್ಲಿ ಉದ್ಯಮ ಸಾಗಬೇಕಾದ ಮಾರ್ಗ ಕುರಿತು ಇದೊಂದು ದಿಕ್ಸೂಚಿಯೂ ಆಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಾ ಸಹಕಾರ ನೀಡುತ್ತಿದೆ.[ಮೋದಿ ಸರಕಾರದ ಪವರ್ ಸ್ಟಾರ್, ವಿದ್ಯುತ್ ಕ್ಷೇತ್ರದಲ್ಲಿ ಬರುತ್ತಿದೆ ಅಚ್ಚೇದಿನ್]

ಎಲೆಕ್ರಾಮ-2016ರ ಸಂಘಟನಾ ಸಮಿತಿ ಅಧ್ಯಕ್ಷ ಆದಿತ್ಯ ದೂತ್ ಅವರು, 'ಭಾರತ ಇಂದು ವಿಶ್ವದಲ್ಲಿಯೇ ಅತಿಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಮೂರನೇ ರಾಷ್ಟ್ರ. ಆದರೂ ಸುಮಾರು 300 ಮಿಲಿಯನ್ ಜನರು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ತಲಾ ವಿದ್ಯುತ್ ಬಳಕೆ ಚೀನಾದಲಿ 1/5 ಇದ್ದು, ನಾವು ಇನ್ನೂ ತುಂಬಾ ದೂರ ಸಾಗಬೇಕಾಗಿದೆ' ಎಂದರು

ಈ ಸಮಾವೇಶದಲ್ಲಿ ಕೇಂದ್ರ ಭಾರಿ ಉದ್ಯಮ ಸಚಿವ ಅನಂತ್ ಗೀತೆ, ಇಂಧನ ಸಚಿವ ಪಿಯೂಶ್ ಗೋಯಲ್, ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಸಚಿವ ಕಲ್ರಾಜ್ ಮಿಶ್ರಾ ಅವರು ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+