ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ವಂಚನೆ ಪ್ರಕರಣ: ಜಮೀರ್‌ ಅಹ್ಮದ್‌ಗೆ ಮನೆಗೆ ಇಡಿ ಅಧಿಕಾರಿಗಳು

|
Google Oneindia Kannada News

ಬೆಂಗಳೂರು, ಜೂನ್ 28: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸಚಿವ ಜಮೀರ್ ಅಹ್ಮದ್ ಅವರಿಗೆ ಸಮನ್ಸ್‌ ನೀಡಿದ್ದಾರೆ.

ಸಚಿವ ಜಮೀರ್ ಮನೆಗೆ ತೆರಳಿದ್ದ ಇಡಿ ಅಧಿಕಾರಿಗಳು ಜುಲೈ 5 ರ ಒಳಗಾಗಿ ಬಂದು ಸ್ಪಷ್ಟನೆ ನೀಡಬೇಕೆಂದು ಸಮನ್ಸ್‌ ಜಾರಿಗೊಳಿಸಿದ್ದಾರೆ.

ಐಎಂಎ ಸಮೂಹದ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED ಐಎಂಎ ಸಮೂಹದ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED

ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸಮನ್ಸ್‌ ನೀಡಲಾಗಿದೆ. ಕೆಲವು ವರ್ಷದ ಹಿಂದೆ ಜಮೀರ್ ಅಹ್ಮದ್ ಅವರು ಐಎಂಎ ಮಾಲೀಖ ಮನ್ಸೂರ್ ಖಾನ್ ಅವರಿಂದ ಆಸ್ತಿ ಖರೀದಿ ಮಾಡಿದ್ದರು. ಅಷ್ಟೆ ಅಲ್ಲದೆ ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಜಮೀರ್ ಖಾನ್ ಅವರ ಹೆಸರಿನ ಉಲ್ಲೇಖವೂ ಇದೆ.

ED issue summons to minister Zameer Ahmed related to IMA scam case

ಜಮೀರ್ ಖಾನ್ ಮಾತ್ರವಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶರವಣ, ರಹಮಾನ್ ಖಾನ್, ಉಬದುಲ್ಲಾ ಶರೀಫ್ ಇನ್ನೂ ಕೆಲವರಿಗೆ ಸಮನ್ಸ್‌ ನೀಡುವ ಸಾಧ್ಯತೆ ಇದೆ. ಐಎಂಎ ಮಾಲೀಕ ಮನ್ಸೂರ್ ಖಾನ್‌ಗೆ ಈಗಾಗಲೇ ಸಮನ್ಸ್‌ ಜಾರಿ ಮಾಡಿಯಾಗಿದೆ.

ಇಂದು ರಾಜ್ಯ ಸಚಿವ ಸಂಪುಟ ಸಭೆ, ಜಿಂದಾಲ್, ಐಎಂಎ, ವಾಲ್ಮೀಕಿಯದ್ದೇ ಚರ್ಚೆ ಇಂದು ರಾಜ್ಯ ಸಚಿವ ಸಂಪುಟ ಸಭೆ, ಜಿಂದಾಲ್, ಐಎಂಎ, ವಾಲ್ಮೀಕಿಯದ್ದೇ ಚರ್ಚೆ

ಇಡಿ ಸಮನ್ಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಜಮೀರ್ ಖಾನ್ ಅವರು, ಸಮನ್ಸ್‌ ನೀಡಿದ್ದಾರೆ, ಜುಲೈ 5 ರ ಒಳಗೆ ಸ್ಪಷ್ಟನೆ ನೀಡುವಂತೆ ಹೇಳಿದ್ದಾರೆ, ನಾನು ಸ್ಪಷ್ಟನೆ ನೀಡಲಿದ್ದೇನೆ. ಐಎಂಎ ಜೊತೆಗಿನ ನನ್ನ ವ್ಯವಹಾರದ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ, ಆಸ್ತಿ ಖರೀದಿ ಬಗ್ಗೆ ಚುನಾವಣೆ ನಾಮಪತ್ರದ ಸಂದರ್ಭದಲ್ಲೂ ನಮೂದಿಸಿದ್ದೆ ಎಂದು ಜಮೀರ್ ಹೇಳಿದ್ದಾರೆ.

ಐಎಂಎ ಎಫೆಕ್ಟ್; ಮಂಗಳೂರಿನ ಆಭರಣ ಮಳಿಗೆಗಳ ಮೇಲೆ ಐಟಿ ದಾಳಿ ಐಎಂಎ ಎಫೆಕ್ಟ್; ಮಂಗಳೂರಿನ ಆಭರಣ ಮಳಿಗೆಗಳ ಮೇಲೆ ಐಟಿ ದಾಳಿ

ಎಸ್‌ಐಟಿ, ಸಿಬಿಐ, ಇಡಿ ಯಾವದೇ ತನಿಖೆ ಆದರೂ ಸಮಸ್ಯೆ ಇಲ್ಲ, ನಾನು ಎಲ್ಲದಕ್ಕೂ ತಯಾರಿದ್ದೇನೆ, ಆದರೆ ಜನರ ಹಣ ವಾಪಸ್ ಬರಬೇಕು ಅಷ್ಟೆ ಎಂದು ಜಮೀರ್ ಹೇಳಿದ್ದಾರೆ.

English summary
Enforcement department issue summons to minister Zameer Ahmed in related to IMA fraud case. Zameer says i am ready to CBI, ED, SIT any kind of investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X