E-Khata: ವಿಶೇಷ ಇ - ಖಾತಾ ಅಭಿಯಾನದಲ್ಲಿ ಭಾಗವಹಿಸಲು ಏನು ಮಾಡಬೇಕು, ಖಾತಾ ಕಂಪ್ಲೀಟ್ ಡೀಟೆಲ್ಸ್‌ ಇಲ್ಲಿದೆ!

E-Khata: ಇ - ಖಾತಾಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಜುಲೈ - 1ರಿಂದ ಮನೆ - ಮನೆಗೆ ಇ - ಖಾತಾ ನೀಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಬೃಹತ್ ಇ ಖಾತಾ ವಿಶೇಷ ಅಭಿಯಾನವನ್ನು ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಬೆಂಗಳೂರಿನ ಆಸ್ತಿದಾರರು ಇ - ಖಾತಾ ಮಾಡಿಸಿಕೊಳ್ಳಬಹುದಾಗಿದೆ.

ಕರ್ನಾಟಕ ಸರ್ಕಾರವು ನಿಮ್ಮ ಆಸ್ತಿ ನಮ್ಮ ಗ್ಯಾರಂಟಿ ಎನ್ನುವ ಪರಿಕಲ್ಪನೆಯೊಂದಿ ಇ - ಖಾತಾ ಅಭಿಯಾನವನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಿಂದಲೂ ಆಸ್ತಿಗಳಿಗೆ ಇ - ಖಾತಾ ನೀಡಲಾಗುತ್ತಿದೆ. ಇ-ಖಾತಾ ಪಡೆಯಿರಿ ನಿಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳಿ ಎಂದು ರಾಜ್ಯ ಸರ್ಕಾರ ಹೇಳಿದೆ. ವಿಶೇಷ ಇ-ಖಾತಾ ಆಂದೋಲನ 2025ರ ಜುಲೈ 1 ರಿಂದ 31 ರವರೆಗೆ ನಡೆಯಲಿದೆ.

E-Khata how to participate in special e-Khata campaign complete Khata details are here

ಬೆಂಗಳೂರಿನಲ್ಲಿ ನಡೆಯುವ ಇ-ಖಾತಾ ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳಬಹುದು.
ಜನಸೇವಕರಿಂದ ಸೇವೆ ಪಡೆಯಲು ಕರೆ ಮಾಡಿ 080-4920 3888 ಅಥವಾ https://janasevaka.karnataka.gov.in

ಜನಸೇವಕನಿಗೆ ಪಾವತಿಸಬೇಕಾದ ಮೊತ್ತದ ವಿವರ

* ಇ-ಖಾತಾ ಅರ್ಜಿಗೆ: 45 ರೂಪಾಯಿ

* ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲು (ಪ್ರತಿ ಪುಟಕ್ಕೆ): 5 ರೂಪಾಯಿ

* ನಿಮ್ಮಮನೆ ಬಾಗಿಲಿಗೆ ಜನಸೇವಕನ ಸೇವಾ ಶುಲ್ಕ: 115 ರೂಪಾಯಿ
* ಇ-ಖಾತಾ ಸಹಾಯವಾಣಿ ಸಂಖ್ಯೆ: 9480683695

ಇ - ಖಾತಾಗೆ ಈ ದಾಖಲೆಗಳು ಇರಲಿ

• ಮಾಲೀಕರ ಆಧಾರ್

• ಈ ಆಸ್ತಿ ತೆರಿಗೆ ಎಸ್.ಎ.ಎಸ್. ಅರ್ಜಿ ಸಂಖ್ಯೆ

• ಸ್ವತ್ತಿನ ಕ್ರಯ/ನೋಂದಾಯಿತ ಪತ್ರ ಸಂಖ್ಯೆ
(ಕಾವೇರಿ ತಂತ್ರಾಂಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುತ್ತದೆ)

• ಬೆಸ್ಕಾಂ ಖಾತೆ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)

• ಸ್ವತ್ತಿನ ಛಾಯಾಚಿತ್ರ

ವೆಬ್‌ಸೈಟ್ ಮೂಲಕ: ಇನ್ನು ನೀವು ಇ - ಖಾತಾವನ್ನು ಮನೆಯಲ್ಲೇ ಕುಳಿತು ಸಹ ಪಡೆದುಕೊಳ್ಳಬಹುದಾಗಿದೆ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಅಂತಿಮ ಇ-ಖಾತಾವನ್ನು ಪಡೆದುಕೊಳ್ಳಲು ಸಾಧ್ಯವಿದೆ. https://bbmpeasthi.karnataka.gov.in ನಿಂದಲೂ ಪಡೆದುಕೊಳ್ಳಬಹುದಾಗಿದೆ.

ಒಂದು ತಿಂಗಳು ವಿಶೇಷ ಅಭಿಯಾನ: ಇನ್ನು ಬೆಂಗಳೂರಿನಲ್ಲಿ ಎಲ್ಲಾ ಆಸ್ತಿದಾರರಿಗೂ ಇ - ಖಾತಾ ಸೌಲಭ್ಯ ನೀಡುವ ಉದ್ದೇಶದಿಂದ ಇ ಖಾತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜುಲೈ ತಿಂಗಳು ಪೂರ್ತಿ ಈ ಅಭಿಯಾನ ನಡೆಯಲಿದ್ದು. ಆಸ್ತಿದಾರರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+