E-Commerce Vehicles Ban: ರಾಪಿಡೋ, ಟ್ಯಾಕ್ಸಿ ನಿಷೇಧ ಬೆನ್ನಲ್ಲೆ ಡೆಲಿವರಿ ಬಾಯ್ಸ್‌ಗೆ ಆತಂಕ, ಏಕೆ?
ಬೆಂಗಳೂರು, ಜೂನ್ 23: ಕರ್ನಾಟಕದಲ್ಲಿ ರಾಪಿಡೋ ಬೈಕ್, ಓಲಾ ಮತ್ತು ಊಬರ್ ಟ್ಯಾಕ್ಸಿಗಳ ಸಂಚಾರ ನಿಷೇಧ ಬೆನ್ನೆಲ್ಲೆ ಇ-ಕಾಮರ್ಸ್ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿರುವ ಸ್ವಿಗ್ಗಿ, ಝೊಮ್ಯಾಟೋ, ಅಮೇಜಾನ್ ಇನ್ನಿತರ ಡೆಲಿವರಿ ಬಾಯ್‌ಗಳಿಗೆ ಆತಂಕ ಎದುರಾಗಿದೆ. ಏಕೆಂದರೆ ಗಿಗ್ ಉದ್ಯಮ ವ್ಯಾಪ್ತಿಯಲ್ಲಿ ಸೇವೆ ನೀಡುವ ಕಾರ್ಮಿಕರು ಸಾಕಷ್ಟು ನಿಯಮ ಉಲ್ಲಂಘಿಸುತ್ತಿದ್ದಾರೆ. ಇ-ಕಾಮರ್ಸ್ ಉದ್ದೇಶಗಳಿಗೆ ಬಳಕೆ ಆಗುವ ಖಾಸಗಿ ವಾಹನಗಳು ಬ್ಯಾನ್ ಆಗುವ ಆತಂಕ ಎದುರಾಗಿದೆ. ಏಕೆಂದರೆ ಕೇಂದ್ರ ಸರ್ಕಾರ ಈ ಸಂಬಂಧ ಮಹತ್ವದ ಸುತ್ತೋಲೆ ಹೊರಿಡಿಸದೆ.
ಇ-ಕಾಮರ್ಸ್ ಡೆಲಿವರಿ ಕಾರ್ಮಿಕರು ಬಳಸುವ ಖಾಸಗಿ ವಾಹನಗಳು ರಸ್ತೆ ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳು ಹೆಚ್ಚಾಗಿದ್ದಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕಳವಳ ವ್ಯಕ್ತಪಡಿಸಿತ್ತು. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಡೆಲಿವರಿ ಬಾಯ್‌ಗಳು ನಿಲ್ಲಿಸುವ ಯೂಲು ವಾಹನ ಟೊಯಿಂಗ್ ಮಾಡಲಾಗಿತ್ತು. ರಾಪಿಡೋ ಬೈಕ್, ಟ್ಯಾಕ್ಸಿ ಸಂಪೂರ್ಣ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇ-ಕಾಮರ್ಸ್ ಉದ್ಯಮದಲ್ಲಿ ಬಳಕೆ ಆಗುವ ಖಾಸಗಿ ವಾಹನಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ.

ವಿಮೆ ಅವಧಿ ಮುಗಿದಿರುವುದು, ನೋಂದಣಿ ವಿಚಾರ, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿವೆ. ಡೆಲಿವರಿ ಸಿಬ್ಬಂದಿಯಿಂದ ನಡೆಯುತ್ತಿರುವ ನಿಯಮ ಉಲ್ಲಂಘನೆಗಳಿಗೆ ವಿರುದ್ಧವಾಗಿ ಪ್ರತ್ಯೇಕ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಮತ್ತು ಸಂಚಾರ ಇಲಾಖೆಗಳು ಸೂಕ್ತ ಕಾನೂನು ಪ್ರಕ್ರಿಯೆ ಮತ್ತು ನಿಯಮಗಳ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಕೇಂದ್ರ ಸಚಿವಾಲಯ ಸೂಚಿಸಿದೆ. ಕೇಂದ್ರ ತಿಳಿಸಿರುವ ಅಂಶಗಳು ಇಲ್ಲಿವೆ.
ಕೇಂದ್ರ ಸರ್ಕಾರ ತಿಳಿಸಿದ ಅಂಶಗಳು
* ಸಂಚಾರ ನಿಯಮ ಉಲ್ಲಂಘನೆ : ವಾಣಿಜ್ಯ ವಿತರಣೆಗೆ ಖಾಸಗಿ ವಾಹನಗಳ ಬಳಕೆಯಾಗುತ್ತಿರುವುದು ವರದಿಯಾಗಿದೆ. ಇದು ವಿಮೆ, ತೆರಿಗೆ ಹಾಗೂ ನೋಂದಣಿ ಸಂಬಂಧಿತ ಅಸ್ತಿತ್ವದಲ್ಲಿರುವ ಸಾರಿಗೆ ನಿಯಮಗಳನ್ನು ಉಲ್ಲಂಘನೆಗೆ ಕಾರಣವಾಗಿದೆ ಎಂದು ಸಚಿವಾಲಯ ಉಲ್ಲೇಖಿಸಿದೆ.
* ಸಾರ್ವಜನಿಕ ಸುರಕ್ಷತಾ ಅಪಾಯಗಳು: ನಿರಂತರವಾಗಿ ಸಿಗ್ನಲ್ ಉಲ್ಲಂಘನೆ, ಅತಿವೇಗ, ಟ್ರಾಫಿಕ್ ವಿರುದ್ಧವಾಗಿ ಚಾಲನೆ, ಪಾದಚಾರಿ ಮಾರ್ಗಗಳ ಬಳಕೆ ಇತ್ಯಾದಿ ಪ್ರಕರಣಗಳು ಹೆಚ್ಚುತ್ತಿವೆ. ಇದೆಲ್ಲ ನಡವಳಿಕೆಗಳು ಸಾರ್ವಜನಿಕರ ಸುರಕ್ಷತೆ ಸಂಚಾರಕ್ಕೆ ಗಂಭೀರ ಅಪಾಯ ಉಂಟು ಮಾಡುವಂತವುಗಳಾಗಿವೆ.
* ನಗರದ ಟ್ರಾಫಿಕ್ ಸಮಸ್ಯೆ ಹೆಚ್ಚಳ: ತ್ವರಿತವಾಗಿ ಉತ್ಪನ್ನಗಳನ್ನು ಗಮ್ಯ ಸ್ಥಳಕ್ಕೆ ಹೋಗಿ ವಿತರಿಸಬೇಕಾದ ತುರ್ತು ಅಗತ್ಯತೆ ಇರುತ್ತದೆ. ಇದು ಸಸ ನಗರ ಟ್ರಾಫಿಕ್ ಏರಿಕೆಗೆ, ಸಂಚಾರ ಗೊಂದಲಕ್ಕೆ ಕಾರಣವಾಗಬಹುದು ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
*ಈ ಉಲ್ಲಂಘನೆಗಳ ಜವಾಬ್ದಾರಿ ಪ್ರತ್ಯೇಕ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಮತ್ತು ಸಂಚಾರ ಇಲಾಖೆಗಳ ವ್ಯಾಪ್ತಿಗೆ ಒಳಪಡುವುದರಿಂದ, ಈ ಸಂಬಂಧ ಸೂಕ್ತ ಮತ್ತು ತಕ್ಷಣದ ಕ್ರಮ ಕೈಗೊಳ್ಳುವಂತೆ ಕೇಂದ್ರ ಹೆದ್ದಾರಿ ಸಚಿವಾಲಯ ತಿಳಿಸಿದೆ.












Click it and Unblock the Notifications