ರೇವಣ್ಣ ಹೇಳಿದಷ್ಟು ಶಿರಾಡಿ ಘಾಟ್ ರಸ್ತೆ ಹದಗೆಟ್ಟಿಲ್ಲ: ಡಿವಿಎಸ್ ಪತ್ರ

ಬೆಂಗಳೂರು, ಆಗಸ್ಟ್ 24: ಬೆಂಗಳೂರು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಶಿರಾಡಿ ಘಾಟ್‌ ನಲ್ಲಿ ಸಧ್ಯಕ್ಕೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಆದರೆ ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಅವರು ಹೇಳಿದಷ್ಟು ರಸ್ತೆ ಹದಗೆಟ್ಟಿಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.

ಈ ಕುರಿತು ಡಿವಿ ಸದಾನಂದಗೌಡ ಅವರು ಶುಕ್ರವಾರ ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಅವರಿಗೆ ಪತ್ರ ಬರೆದಿದ್ದು, ಈಗಾಗಲೇ ಮಳೆಯ ಅಬ್ಬರದಿಂದ ನಲುಗಿ ಹೋಗಿರುವ ಕರಾವಳಿ ಭಾಗದ ಜನತೆಯ ಪರಿಸ್ಥಿತಿ ನಿಮಗೆ ತಿಳಿದಿದೆ. ಕರಾವಳಿ ಭಾಗದ ಸಾವಿರಾರು ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಅವರ ಕುಟುಂಬಸ್ಥರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಕುಟುಂಬಸ್ಥರ ಸಹಾಯಕ್ಕೆ ಬರಲಾಗದೆ ದಯನೀಯ ಪರಿಸ್ಥಿತಿಯಲ್ಲಿದ್ದಾರೆ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆ ಹಾಗೂ ರೈಲು ಸಂಚಾರಗಳು ಸ್ಥಗಿತಗೊಂಡಿದೆ. ವಿಮಾನವಂತೂ ಯಾರಿಗೂ ಕೈಗೆಟುಕದ ವಿಚಾರವಾಗಿದೆ. ಏಕೈಕ ಚಾರ್ಮಡಿ ರಸ್ತೆ ಕೂಡ ಅನುಪಯುಕ್ತವಾಗಿದೆ.

DVS claims Shiradi ghat repair work will complete within a week

ಇತ್ತೀಚೆಗಷ್ಟೇ ಶಿರಾಡಿಘಾಟ್ ಉದ್ಘಾಟನೆಯಾಗಿತ್ತು, ಕೆಲವೇ ದಿನಗಳಲ್ಲಿ ಪುನಃ ಬಂದ್ ಆಗಿದೆ. ಅಧಿಕಾರಿಗಳ ಮತ್ತು ಸಾರ್ವಜನಿಕರ ಮಾಹಿತಿ ಪ್ರಕಾರ ಸ್ವಲ್ಪ ದುರಸ್ಥಿಯೊಂದಿಗೆ ಕೇವಲ ಒಂದು ವಾರದ ಕಾಮಗಾರಿಯಲ್ಲಿ ಈ ರಸ್ತೆ ಸಂಚಾರ ಯೋಗ್ಯ ರಸ್ತೆಯಾಗಿ ಮಾರ್ಪಡಿಸಲು ಸಾಧ್ಯ, ನಾಲ್ಕೈದು ಕಡೆ ಮಾತ್ರ ತೊಂದರೆಯಿದೆ ಎಂದು ತಿಳಿದುಬಂದಿದೆ.

DVS claims Shiradi ghat repair work will complete within a week

ಈ ಕೂಡಲೇ ಕಾರ್ಯ ಪ್ರವೃತ್ತರಾಗಿ ಈ ರಸ್ತೆಯನ್ನು ಸಂಚಾರ ಮುಕ್ತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿವಿ ಸದಾನಂದ ಗೌಡ ಅವರು ಸಚಿವ ಎಚ್‌ಡಿ ರೇವಣ್ಣ ಅವರಿಗೆ ಪತ್ರ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+