ತಲೆಮರೆಸಿಕೊಂಡಿದ್ದ ದುನಿಯಾ ವಿಜಯ್ ಪತ್ನಿಗೆ ನಿರೀಕ್ಷಣಾ ಜಾಮೀನು

ಬೆಂಗಳೂರು, ನವೆಂಬರ್ 05: ಹಲ್ಲೆ ಪ್ರಕರಣದ ಆರೋಪಿ ಆಗಿ ಪೊಲೀಸರಿಗೆ ಬೇಕಾಗಿದ್ದ ನಟ ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರಿಗೆ ಇಂದು ನಿರೀಕ್ಷಣಾ ಜಾಮೀನು ದೊರೆತಿದೆ.

ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಪೊಲೀಸರು ವಿಚಾರಣೆಗಾಗಿ ನಾಗರತ್ನ ಅವರನ್ನು ಹುಡುಕುತ್ತಿದ್ದರು ಆದರೆ ಅವರು ತಲೆಮರೆಸಿಕೊಂಡಿದ್ದರು.

ದೀಪಾವಳಿ ವಿಶೇಷ ಪುರವಣಿ

ಕಳೆದ ವಾರದಿಂದಲೂ ಪೊಲೀಸರಿಂದ ತಲೆಮರೆಸಿಕೊಂಡಿದ್ದ ನಾಗರತ್ನ ಅವರಿಗೆ ಇಂದು ನಿರೀಕ್ಷಣಾ ಜಾಮೀನು ದೊರೆತಿದೆ. ಹಾಗಾಗಿ ಅವರು ನಿರಾಳವಾಗಲಿದ್ದಾರೆ. ಅವರಿಗೆ ಬಂಧನದ ಭೀತಿ ಇಲ್ಲವಾಗಿದೆ.

ದುನಿಯಾ ವಿಜಯ್ ಅವರು ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗನ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ ಮಾರನೇಯ ದಿನ ದುನಿಯಾ ವಿಜಯ್ ಮನೆಗೆ ಬಂದಿದ್ದ ನಾಗರತ್ನ ಏಕಾ-ಏಕಿ ಚಪ್ಪಲಿಯಿಂದ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ್ದರು ಅದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.

ಕೀರ್ತಿಗೌಡ ಮೇಲೆ ದೂರು ನೀಡಿದ್ದ ನಾಗರತ್ನ

ಕೀರ್ತಿಗೌಡ ಮೇಲೆ ದೂರು ನೀಡಿದ್ದ ನಾಗರತ್ನ

ಹಲ್ಲೆ ಮಾಡಿದ್ದ ನಾಗರತ್ನ ಠಾಣೆಗೆ ಬಂದು ಕೀರ್ತಿ ಗೌಡಾಳೆ ತನ್ನ ಹಾಗೂ ಮಗಳ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ದೂರು ನೀಡಿದ್ದರು. ಆದರೆ ತನಿಖೆ ನಡೆಸಿದ ಪೊಲೀಸರು ನಾಗರತ್ನ ಅವರೇ ಹಲ್ಲೆ ನಡೆಸಿದ್ದಾರೆಂದು ಪತ್ತೆ ಹಚ್ಚಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನಿಂದ ನಾಗರತ್ನ ನಾಪತ್ತೆ ಆಗಿದ್ದರು.

ವಿಜಯ್‌ಗೆ ಅಣ್ಣಾಮಲೈ ನೊಟೀಸ್‌

ವಿಜಯ್‌ಗೆ ಅಣ್ಣಾಮಲೈ ನೊಟೀಸ್‌

ಈ ಮಧ್ಯೆ ದುನಿಯಾ ವಿಜಯ್ ಮತ್ತು ಕುಟುಂಬ ಸದಸ್ಯರಿಗೆ ದಕ್ಷಿಣ ವಿಭಾಗದ ಪೊಲೀಸ್ ವರೀಷ್ಠಾಧಿಕಾರಿ ಅಣ್ಣಾಮಲೈ ನೊಟೀಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗಿ ಮುಚ್ಚಳಿಕೆ ಬರೆದುಕೊಡುವಂತೆ ಸೂಚನೆ ನೀಡಿದ್ದಾರೆ ಆದರೆ ಈ ವರೆಗೆ ವಿಚಾರಣೆಗೆ ವಿಜಯ್ ಹಾಜರಾಗಿಲ್ಲ ಎನ್ನಲಾಗಿದೆ.

ತಾರಕಕ್ಕೇರಿದ್ದ ಕುಟುಂಬ ಜಗಳ

ತಾರಕಕ್ಕೇರಿದ್ದ ಕುಟುಂಬ ಜಗಳ

ಪಾನಿಪುರಿ ಕಿಟ್ಟಿ ವಿವಾದದ ನಂತರ ದುನಿಯಾ ವಿಜಯ್‌ ಕುಟುಂಬ ಜಗಳ ತಾರಕ್ಕೇರಿತು. ಮೊದಲಿಗೆ ನಾಗರತ್ನ ಕೀರ್ತಿ ರೆಡ್ಡಿ ಮೇಲೆ ದೂರು ನೀಡಿದರು ಆ ನಂತರ ದುನಿಯಾ ವಿಜಯ್ ಮಗಳೇ ಅಪ್ಪನ ವಿರುದ್ಧ ಠಾಣೆ ಮೆಟ್ಟಿಲು ಏರಿದಳು. ಆ ನಂತರ ಕೀರ್ತಿ ರೆಡ್ಡಿ ನಾಗರತ್ನ ಮೇಲೆ ದೂರು ನೀಡಿದರು.

ವಿಚ್ಛೇಧನಕ್ಕೆ ಅರ್ಜಿ ಹಾಕಲಿರುವ ವಿಜಯ್

ವಿಚ್ಛೇಧನಕ್ಕೆ ಅರ್ಜಿ ಹಾಕಲಿರುವ ವಿಜಯ್

ದುನಿಯಾ ವಿಜಯ್ ಅವರು ನಾಗರತ್ನ ಅವರಿಗೆ ವಿಚ್ಛೇದನ ಅರ್ಜಿ ಕಳುಹಿಸಲಿದ್ದಾರೆ ಎನ್ನಲಾಗಿದೆ. ಆ ಮೂಲಕ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ಕೌಟುಂಬಿಕ ಕಲಹ ತಾರ್ಕಿಕ ಅಂತ್ಯ ಕಾಣಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+