ಬಾಗಿಲು ಮುಚ್ಚಲಿವೆ ಬೆಂಗಳೂರಿನ 14 ಸರ್ಕಾರಿ ಪಿಯು ಕಾಲೇಜ್ ಗಳು!
ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಸರ್ಕಾರಿ ಪಿಯು ಕಾಲೇಜ್ ಗಳನ್ನೂ ಮುಚ್ಚುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 14 ಪಿಯು ಕಾಲೇಜುಗಳು ನೇಪಥ್ಯಕ್ಕೆ ಸರಿಯಲಿವೆ.
ಬೆಂಗಳೂರು, ಮೇ 25: ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಹಲವು ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಿದ ಸುದ್ದಿ ಹಳೆಯದಾಯ್ತು. ಇದೀಗ ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಸರ್ಕಾರಿ ಪಿಯು ಕಾಲೇಜ್ ಗಳನ್ನೂ ಮುಚ್ಚುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ನಿನ್ನೆ (ಮೇ 24) ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಬೆಂಗಳೂರಿನ 14 ಪಿಯು ಕಾಲೇಜುಗಳು ನೇಪಥ್ಯಕ್ಕೆ ಸರಿಯಲಿವೆ. ಈ ಶೈಕ್ಷಣಿಕ ವರ್ಷ(ಜೂನ್ - ಮಾರ್ಚ್) ಆರಂಭವಾಗುವ ಮೊದಲು ಬೆಂಗಳೂರಿನ 14 ಕಾಲೇಜುಗಳು ಮುಚ್ಚಲಿದ್ದು, ಅವುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಆಯಾ ಕಾಲೇಜಿಗೆ ಹತ್ತಿರವಿರುವ ಸರ್ಕಾರಿ ಕಾಲೇಜಿಗೆ ಅವರನ್ನು ಸ್ಥಳಾಂತರಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಕೆಲವು ಸರ್ಕಾರಿ ಪಿಯು ಕಾಲೇಜುಗಳಲಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇರುವುದರಿಂದ ಅಂಥ ಕಾಲೇಜುಗಳನ್ನು ಮುನ್ನಡೆಸಿಕೊಂಡು ಹೋಗುವುದು ಸರ್ಕಾರಕ್ಕೆ ಹೊರೆ ಎನ್ನಿಸಿದೆ. ಈ ಕಾರಣದಿಂದಾಗಿ ಈ ಕಾಲೇಜುಗಳನ್ನು ಮುಚ್ಚುವ ನಿರ್ಧಾರ ಮಾಡಿರುವುದಾಗಿ ಸರ್ಕಾರ ಹೇಳಿದೆ.
ಆದರೆ ಈ 14 ಕಾಲೇಜುಗಳ ಪಟ್ಟಿಯಲ್ಲಿ ಯಾವೆಲ್ಲ ಕಾಲೇಜುಗಳಿವೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ.












Click it and Unblock the Notifications